ಇನ್ನೂ ರಾಖಿ ಸಾವಂತ್ ಮೇಲೆ ಆರೋಪದ ಸುರಿಮಳೆ ಗೈದ ಆದಿಲ್ ಖಾನ್, ಆಕೆ ಯಾವಾಗಲೂ ನಕಾರಾತ್ಮಕತೆಯನ್ನು ಹರಡುತ್ತಾಳೆ ಮತ್ತು ಅವಳು ಯಾರಿಗೂ ಸಂತೋಷವನ್ನು ನೀಡಲು ಸಾಧ್ಯವಿಲ್ಲ. ನಾನು ಅವಳಂತೆ ಅಲ್ಲ. ನಾನು ಸಂತೋಷವನ್ನು ಹರಡಲು ಇಷ್ಟಪಡುತ್ತೇನೆ ಮತ್ತು ಸೋಮಿ ನನ್ನ ಜೀವನದಲ್ಲಿ ಸಂತೋಷವನ್ನು ತಂದಿದ್ದಾಳೆ ಮತ್ತು ನಾನು ಅವಳೊಂದಿಗೆ ನನ್ನ ಸಂತೋಷ ಮತ್ತು ಶಾಂತಿಯುತ ಜೀವನವನ್ನು ಆನಂದಿಸುತ್ತಿದ್ದೇನೆ ಎಂದರು.