ದೀಪಿಕಾ ಪಡುಕೋಣೆಯನ್ನು ಸಿಕ್ಕಾಪಟ್ಟೆ ಹೊಗಳಿದ ರಣವೀರ್ ಸಿಂಗ್
ಮಂಗಳವಾರ, 20 ಮಾರ್ಚ್ 2018 (06:28 IST)
ನವದೆಹಲಿ : ಬಾಲಿವುಡ್ ಕ್ಯೂಟ್ ಕಪಲ್ಸ್ ಎನಿಸಿಕೊಂಡಿರುವ ನಟ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಸಂಬಂಧದ ಬಗ್ಗೆ ಎಲ್ಲೂ ಕೂಡ ಹೇಳಿಕೊಂಡಿರಲಿಲ್ಲ. ಆದರೆ ಇದೀಗ ಮೊದಲಬಾರಿ ರಣವೀರ್ ಸಿಂಗ್ ಅವರು ತಮ್ಮ ಹಾಗೂ ದೀಪಿಕಾ ಅವರ ಸಂಬಂಧದ ಬಗ್ಗೆ ಹೇಳಿದ್ದಾರೆ.
ನ್ಯೂಸ್ 18 ರೈಸಿಂಗ್ ಇಂಡಿಯಾ ಸಮಾವೇಶದಲ್ಲಿ ಮಾತನಾಡಿದ ರಣವೀರ್ ಸಿಂಗ್ ಅವರು ,’ ದೀಪಿಕಾ ಪಡುಕೋಣೆಯನ್ನು ನನ್ನ ಬಾಳಿನಲ್ಲಿ ಪಡೆದಿದ್ದು ನನ್ನ ಪುಣ್ಯ. ನಟಿಯಾಗಿ ನಾನು ದೀಪಿಕಾಳನ್ನು ಉನ್ನತ ಮಟ್ಟದಲ್ಲಿ ಇಟ್ಟಿದ್ದೇನೆ. ಆದರೆ, ದೀಪಿಕಾ ನನ್ನನ್ನು ಹಾಗೆ ನೋಡುತ್ತಿಲ್ಲ. ಕಲಾವಿದನಾಗಿ ಆಕೆಯಿಂದ ಸಾಕಷ್ಟು ಕಲಿಯುವುದಿದೆ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ