ಸೈಫ್ ಆಲಿಖಾನ್ ಮಗಳ ಜತೆ ಹೃತಿಕ್ ರೋಷನ್ ರೊಮ್ಯಾನ್ಸ್?!

ಮಂಗಳವಾರ, 13 ಡಿಸೆಂಬರ್ 2016 (12:32 IST)
ಮುಂಬೈ: ಹೃತಿಕ್ ರೋಷನ್ ಸದ್ಯ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಅತ್ತ ಸೈಫ್ ಆಲಿ ಖಾನ್ ಮತ್ತು ಮೊದಲ ಪತ್ನಿ ಅಮೃತಾ ಸಿಂಗ್ ಮಗಳು ಸಾರಾ ಆಲಿ ಖಾನ್ 24 ರ ಹರೆಯಕ್ಕೆ ಬಂದಿದ್ದಾಳೆ. ಹೀಗಾಗಿ ಶೀರ್ಷಿಕೆ ನೋಡಿ ಏನೇನೋ ಅಂದುಕೊಳ್ಳಬೇಡಿ.

ಅಂದ ಹಾಗೆ ಇವರಿಬ್ಬರೂ ರೊಮ್ಯಾನ್ಸ್ ಮಾಡಲಿರುವುದೇನೋ ನಿಜ. ಆದರೆ ತೆರೆಯ ಮೇಲೆ. ಸೈಫ್ ಪುತ್ರಿ ಬೆಳ್ಳಿ ಪರದೆಯಲ್ಲಿ ಮೊದಲ ಬಾರಿಗೆ ಹೀರೋಯಿನ್ ಆಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹೃತಿಕ್ ರ ಈ ಮೊದಲಿನ ಅಗ್ನಿ ಪಥ್ ಸಿನಿಮಾದ ನಿರ್ಮಾಪಕ ಕರಣ್ ಮಲ್ಹೋತ್ರಾ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ.

ಇದೊಂದು ಕಾಮಿಡಿ ಸಿನಿಮಾವಂತೆ. ಎಲ್ಲಾ ಸರಿಯಾಗಿದ್ದರೆ ಸಾರಾ ಈ ಮೊದಲು ಕರಣ್ ಜೋಹರ್ ಸಿನಿಮಾವೊಂದರಲ್ಲಿ ನಟಿಸಬೇಕಿತ್ತು. ಆದರೆ ಜೋಹರ್ ಮತ್ತು ಸಾರಾ ಅಮ್ಮಅಮೃತಾ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಸಾಧ್ಯವಾಗಲಿಲ್ಲ. ಆದರೆ ಹೃತಿಕ್ ಜತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ಸಾರಾಗೆ ಬಂಪರ್ ಹೊಡೆದಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ