ಬಯಲು ಶೌಚಮುಕ್ತ ಆಭಿಯಾನಕ್ಕೆ ಸಲ್ಲು ರಾಯಭಾರಿ

ಸೋಮವಾರ, 19 ಡಿಸೆಂಬರ್ 2016 (12:15 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ವಿಶೇಷ ಗೌರವ ಸಿಕ್ಕಿದೆ. ಬ್ರಿಹಾನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಾರಂಭಿಸಿರುವ ಬಯಲು ಶೌಚ ಮುಕ್ತ ಅಭಿಯಾನಕ್ಕೆ ರಾಯಭಾರಿಯಾರಿಯಾಗಲು ಒಪ್ಪಿದ್ದಾರೆ.
 
ಇದಕ್ಕಾಗಿ ಸಲ್ಮಾನ್‍ರನ್ನು ಬಿಎಂಸಿ ಆಹ್ವಾನಿಸಿತ್ತು. ಇದಕ್ಕೆ ಒಪ್ಪಿರುವ ಸಲ್ಲು, ಕೇಂದ್ರ ಸರಕಾರದ ಸ್ವಚ್ಛ ಭಾರತದ ಭಾಗವಾಗಿರುವ ಬಯಲು ಶೌಚ ಮುಕ್ತ ಅಭಿಯಾನಕ್ಕೆ ರಾಯಭಾರಿಯಾಗಲಿದ್ದಾರೆ. 
 
ಈ ಹಿನ್ನೆಲೆಯಲ್ಲಿ ಹೊಸ ವಿನ್ಯಾಸದ 5 ಸಂಚಾರಿ ಶೌಚಾಲಯಗಳನ್ನು ಅಭಿಯಾನಕ್ಕಾಗಿ ಕೊಡುಗೆ ನೀಡುವುದಾಗಿ ಸಲ್ಲು ಘೋಷಿಸಿದ್ದಾರೆ. ಅವರದೇ ಆದಂತ ಇನ್ನೊಂದು ಎನ್‌ಜಿಓ, ಬೀಯಿಂಗ್ ಹ್ಯೂಮನ್ ಫೌಂಡೇಷನ್ ಮೂಲಕ ಅಭಿಯಾನದ ಭಾಗವಾಗಿರುವುದಕ್ಕೆ ಸಲ್ಮಾನ್ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ. 
 
"ಮುಂಬೈನಂತಹ ನಗರಗಳಲ್ಲಿ ಬಯಲು ಶೌಚಾಲಯಗಳಿರುವುದು ನಿಜಕ್ಕೂ ಬೇಸರದ  ವಿಷಯ.  ಬಯಲು ಶೌಚ ಮುಕ್ತ ಅಭಿಯಾನ ಯಶಸ್ವಿಯಾಗಲು ಶ್ರಮಿಸುತ್ತೇನೆ" ಎಂದಿದ್ದಾರೆ ಸಲ್ಮಾನ್ ಖಾನ್.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ