’ಬಾಹುಬಲಿ 2’ರಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರ?

ಸೋಮವಾರ, 20 ಫೆಬ್ರವರಿ 2017 (20:40 IST)
ಇಡೀ ದೇಶವೇ ಎದುರು ನೋಡುತ್ತಿರುವ ’ಬಾಹುಬಲಿ 2’ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಚಿತ್ರ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಒಂದೊಂದೇ ಕುತೂಹಲಕರ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
 
ಆದರೆ ಈ ಬಗ್ಗೆ ಅಧಿಕೃತವಾಗಿ ಶಾರುಖ್ ಆಗಲಿ ಬಾಹುಬಲಿ ಚಿತ್ರತಂಡವಾಗಲಿ ಖಚಿತಪಡಿಸಿಲ್ಲ. ಆದರೂ ಅತಿಥಿ ಪಾತ್ರದಲ್ಲಿ ಶಾರುಖ್ ಅಭಿನಯಿಸಿದ್ದಾರೆ ಎನ್ನುತ್ತಿವೆ ಬಿಟೌನ್ ಮೂಲಗಳು. ಇತ್ತೀಚೆಗೆ ’ರಯೀಸ್’ ಚಿತ್ರದ ಪ್ರಚಾರ ಸಂದರ್ಭದಲ್ಲಿ ’ಬಾಹುಬಲಿ 2’ ಚಿತ್ರದ ಬಗ್ಗೆ ಶಾರುಖ್ ಹಾಡಿ ಹೊಗಳಿದ್ದರು. ಈ ಹಿನ್ನೆಲೆಯಲ್ಲಿ ಶಾರುಖ್ ಅಭಿನಯಿಸಿರುವ ಸುದ್ದಿಗೆ ಮತ್ತಷ್ಟು ಬಲಬಂದಾಗಿದೆ.
 
ಈ ಸುದ್ದಿ ಎಷ್ಟು ಸತ್ಯ ಎಂಬುದು ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆಯ ತನಕ ಕಾಯದೆ ವಿಧಿಯಿಲ್ಲ. ಒಂದು ವೇಳೆ ಶಾರುಖ್ ಅಭಿನಯಿಸಿದ್ದರೆ ನಿಜಕ್ಕೂ ಅದಕ್ಕಿಂತಲೂ ಸಂತೋಷದ ಸಂಗತಿ ಇನ್ನೊಂದಿಲ್ಲ ಎಂಬುದು ಅವರ ಅಭಿಮಾನಿಗಳ ಮಾತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ