ವಿಚಿತ್ರ ಮೇಕಪ್ ನಿಂದ ಟ್ರೋಲ್ ಗೊಳಗಾದ ಗಾಯಕಿ ರಾನು ಮೊಂಡಾಲ್
ಮುಖಕ್ಕೆ ಯದ್ವಾ ತದ್ವಾ ಮೇಕ್ ಅಪ್ ಮಾಡಿಕೊಂಡಿರುವುದಲ್ಲದೆ, ಲೆಹಂಗಾ ತೊಟ್ಟು ವಿಚಿತ್ರವಾಗಿ ಕಾಣಿಸಿಕೊಂಡಿರುವ ಫೋಟೋಗಳನ್ನು ಟ್ವಿಟರಿಗರು ತಮಾಷೆ ಮಾಡಿದ್ದು, ಆಕೆಯನ್ನು ಭೂತದ ವೇಷಧಾರಿಗೆ, ಹಾರ್ಪಿಕ್ ಬಾಟಲ್ ಜತೆಗೆ ಮೆಮೆ ಮಾಡಿ ಕಾಲೆಳೆದಿದ್ದಾರೆ. ಕೆಲವರು ನಿಮಗೆ ನೀವೇ ಮೇಕ್ ಅಪ್ ಮಾಡಿಕೊಳ್ಳಲು ಹೀಗೇ ಆಗೋದು ಎಂದು ಮಾತಿನ ಮೂಲಕವೇ ಚುಚ್ಚಿದ್ದಾರೆ.