ಆಸ್ಕರ್ ಪ್ರಶಸ್ತಿಗೆ ಎಂಟ್ರಿ ನೀಡಲಿದೆ 'ಸರಬ್ಜಿತ್' ಚಿತ್ರ

ಶನಿವಾರ, 25 ಜೂನ್ 2016 (14:34 IST)
ರಂದೀಪ್ ಹೂಡಾ-ಐಶ್ವರ್ಯ ರೈ ಬಚ್ಚನ್ ಅಭಿನಯದ 'ಸರಬ್ಜಿತ್ 'ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಆದ್ರೆ ಯಶಸ್ಸು ಕಂಡಿಲ್ಲ ವಾದ್ರೂ ಏನತ್ತೆ, ಇದೀಗ ಸರಬ್ಜಿತ ಚಿತ್ರ ಆಸ್ಕರ್ ಹಾಗೂ ನ್ಯಾಶನಲ್ ಅವಾರ್ಡ್‌ ಪಡೆಯಲು ಪ್ರಯತ್ನ ಪಡೆಯುತ್ತಿದೆ.

ಮುಂದಿನ ವರ್ಷದ ಆಸ್ಕರ್ ಹಾಗೂ ನ್ಯಾಷನಲ್ ಪ್ರಶಸ್ತಿಗೆ ಸೇರ್ಪಡೆಗೊಳ್ಳಲು ಕಳುಹಿಸಲಾಗಿದೆಯಂತೆ. 'ಸರಬ್ಜಿತ್' ಚಿತ್ರದ ನಿರ್ದೇಶಕ ಓಮಂಗ್ ಕುಮಾರ್ ಹಾಗೂ ಸಹ ನಿರ್ಮಾಪಕ ವಾಸು 'ಸರಬ್ಜಿತ್' ಸಿಂಗ್ ಜೀವನ ಆಧಾರಿತ ಕಥೆಗಳನ್ನು ಹೆಣೆಯಲಾಗಿದೆ.

ಆಸ್ಕರ್‌ಗೆ ಸೇರ್ಪಡೆಗೊಳ್ಳಲು ಕಳುಹಿಸಲಾಗಿದೆ ಎಂದು ಚಿತ್ರ ನಿರ್ದೇಶಕರು ತಿಳಿಸಿದ್ದಾರೆ. ಎಂಟ್ರಿ ಪಡೆದುಕೊಳ್ಳಲು ಕಳುಹಿಸಲಾಗಿದ್ದು, ಸ್ವಾತಂತ್ಯ್ರವಾಗಿ ಅಥವಾ ಇತರ ಚಿತ್ರಗಳ ಜತೆಗೆ ರೇಸ್‌ನಲ್ಲಿ ಸರಬ್ಜಿತ ಚಿತ್ರ ಇರಲಿದೆ ಎಂದಿದ್ದಾರೆ
ಇನ್ನೂ ಆಸ್ಕರ್ ಮಾತ್ರವಲ್ಲದೇ ರಾಷ್ಟ್ರೀಯ ಪ್ರಶಸ್ತಿಗೂ ಚಿತ್ರ ಕಳುಹಿಸಲಾಗಿದೆ ಎಂದಿದ್ದಾರೆ.ನಿರ್ದೇಶಕ ಓಮಂಗ್ ಅವರ ಸರಬ್ಜಿತ್ ಚಿತ್ರ  ಕಥಾ ವಸ್ತು ಅದ್ಭೂತವಾಗಿ ಹೆಣಯಲಾಗಿದೆ. ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಮನ  ಮುಟ್ಟುವಂತೆ ಮಾಡುತ್ತವೆ. ಇನ್ನೂ ಚಿತ್ರದ ಹೊಸ ಹಾಡು 'ದರ್ದ' ಉತ್ತಮವಾಗಿ ಮೂಡಿ ಬಂದಿದೆ.
 
ಅದಕ್ಕಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ಇನ್ನೂ ಸೋನು ನಿಗಮ್ ಈ ಚಿತ್ರಕ್ಕೆ ಹಾಡು ಹಾಡಿದ್ದಾರೆ.
ಸರಬ್ಜಿತ್ ಚಿತ್ರದಲ್ಲಿ ಐಶ್ವರ್ಯ ದಲ್ಬಿರ್ ಕೌರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ