ಮದುವೆಯೇ ಆಗಲ್ವಂತೆ ವಿಕ್ಕಿ-ಕತ್ರಿನಾ ಜೋಡಿ!
ಡಿಸೆಂಬರ್ ರನಲ್ಲಿ ಇಬ್ಬರೂ ರಾಜಸ್ಥಾನ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ಇದಕ್ಕೆ ಎಲ್ಲಾ ತಯಾರಿಗಳು ನಡೆದಿವೆ ಎಂಬ ವರದಿಗಳ ಬೆನ್ನಲ್ಲೇ ವಿಕ್ಕಿ ಸಹೋದರ ಸಂಬಂಧಿ ಡಾ. ಉಪಾಸನಾ ಇದೆಲ್ಲಾ ಮಾಧ್ಯಮಗಳ ರೂಮರ್ ಎಂದಿದ್ದಾರೆ.
ಇಬ್ಬರೂ ಮದುವೆಯೇ ಆಗುತ್ತಿಲ್ಲ. ಇದೆಲ್ಲಾ ಮಾಧ‍್ಯಮಗಳಲ್ಲಿ ಹರಿದಾಡುತ್ತಿರುವ ಗಾಸಿಪ್ ಅಷ್ಟೇ. ಇತ್ತೀಚೆಗೆ ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ರೂಮರ್ ಗಳು ಹರಿದಾಡುವುದು ಹೊಸದೇನಲ್ಲ. ಮದುವೆಯಾಗುವುದಿದ್ದರೆ ಇಬ್ಬರೂ ಅಧಿಕೃತವಾಗಿ ಹೇಳಿಕೆ ನೀಡುತ್ತಾರೆ ಎಂದಿದ್ದಾರೆ. ಹೀಗಾಗಿ ಅವರ ಮದುವೆ ತಯಾರಿ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ಬ್ರೇಕ್ ಬಿದ್ದಂತಾಗಿದೆ.