ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಅತಿಥಾ

ಮಂಗಳವಾರ, 27 ಫೆಬ್ರವರಿ 2018 (13:21 IST)
ಬಾಲಿವುಡ್ ದೇಸಿ ಗರ್ಲ್ ಮತ್ತು ಹಾಲಿವುಡ್‍ನ ಬೋಲ್ಡ್ ಬೇಬಿ ಪ್ರಿಯಾಂಕ ಚೋಪ್ರಾ ತನ್ನ ತಲೆಗೆ ವೈನ್‍ಗ್ಲಾಸ್‍ ಅನ್ನು ಹೊಡೆದುಕೊಂಡು ಪೀಸ್ ಪೀಸ್ ಮಾಡಿದ್ದಾರೆ..ಕಾರಣ ಕೆಲಸದ ಒತ್ತಡ ತಾಳಲಾರದೇ ವೈನ್ ಗ್ಲಾಸನ್ನೇ ತಲೆಗೆ ಹೊಡೆದುಕೊಂಡಿದ್ದಾಳೆ.
ಗ್ಲಾಸ್‌ನಲ್ಲಿದ್ದ ವೈನ್‌ನ ಕೊನೆಯ ಗುಟುಕು ಕುಡಿದ ಪ್ರಿಯಾಂಕಾ ನಂತರ ಅದೇ ಗ್ಲಾಸನ್ನು ತನ್ನ ತಲೆಗೆ ಹೊಡೆದುಕೊಂಡಿದ್ದಾಳೆ. ಇದನ್ನು ನೋಡಿದ ಪ್ರಿಯಾಂಕಾ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಕೆಲಸದ ಒತ್ತಡ ಒಳ್ಳೇದಲ್ಲ, ಬ್ರೇಕ್ ತೆಗೆದುಕೋ. ಅಥವಾ ಬಾಲಿವುಡ್‌ಗೆ ವಾಪಸ್ ಬಂದ್ಬಿಡು ಎಂದು ಅಭಿಮಾನಿಗಳು ಹೇಳಿದ್ದಾರೆ.
 
ನಾನು ಹತಾಶೆಯಿಂದ ಹೀಗೆ ಮಾಡುತ್ತಿದ್ದೇನೆ. ನೀವು ಯಾರೂ ಇದನ್ನು ಪ್ರಯತ್ನಿಸಬೇಡಿ ಮತ್ತು ಅನುಕರಿಸಬೇಡಿ ಎಂದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿರುವ ಪಿಗ್ಗಿ ವೀಡಿಯೋವನ್ನೂ ಪೋಸ್ಟ್ ಮಾಡಿದ್ದಾರೆ.
 
ಪ್ರಸ್ತುತವಾಗಿ ‘ಕ್ವಾಂಟಿಕೋ 3’ ಟಿವಿ ಸಿರೀಸ್ ಶೂಟಿಂಗ್‌ಗಾಗಿ ಪ್ರಿಯಾಂಕಾ ಲಾಸ್ ಏಂಜಲೀಸ್ ಮತ್ತು ನ್ಯೂಯಾರ್ಕ್ ಅಂತಾ ಓಡಾಡ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ