ನಟ ಶಾರೂಖ್ ಖಾನ್ ಇಮ್ತಿಯಾಜ್ ಅಲಿ ನಿರ್ದೇಶನದ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಮುಂದಿನ ವರ್ಷ ಚಿತ್ರ ರಿಲೀಸ್ ಆಗಲಿದೆ. ನಟಿ ಅನುಷ್ಕಾ 'ರಬ್ ನೇ ಬನಾ ದಿಯಾ' ಜೋಡಿ ಚಿತ್ರದಲ್ಲಿ ಶಾರೂಖ್‌ಗೆ ನಾಯಕಿಯಾಗಿ ಮಿಂಚಿದ್ದರು. ಈ ಚಿತ್ರ ಚಿತ್ರರಸಿಕರ ಮನದಲ್ಲಿ ಇನ್ನೂ ಮರೆಯಾಗಿಲ್ಲ. ಇದೀಗ ಮತ್ತೊಂದು ಬಾರಿಗೆ ಅನುಷ್ಕಾ ಶರ್ಮಾ ಇಮ್ತಿಯಾಜ್ ಚಿತ್ರದಲ್ಲಿ ಶಾರೂಖ್ ಜತೆಗೆ ನಟಿಸುತ್ತಿದ್ದಾರೆ.