ಅನುಷ್ಕಾ ಶರ್ಮಾ ಸೂಯಿ ಧಾಗಾ ಚಾಲೆಂಜ್ ವಿನ್ನರ್ ಯಾರು ಗೊತ್ತಾ?
ಶುಕ್ರವಾರ, 21 ಸೆಪ್ಟಂಬರ್ 2018 (07:18 IST)
ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ವರುಣ್ ಧವನ್ ತಾವು ನಟಿಸಿರುವ ಸೂಯಿ ಧಾಗಾ ಚಿತ್ರದ ಪ್ರಚಾರದ ಜೊತೆಗೆ ಇದೀಗ ಟ್ವೀಟರ್ ನಲ್ಲಿ ಸೂಯಿ ಧಾಗಾ ಚಾಲೆಂಜ್ ಶುರು ಮಾಡಿದ್ದಾರೆ.
ಈ ಸೂಯಿ ಧಾಗಾ ಚಾಲೆಂಜ್ ಸ್ವೀಕರಿಸಿದವರು 10 ಸೆಕೆಂಡ್ ನಲ್ಲಿ ಸೂಜಿಯೊಳಗೆ ದಾರವನ್ನು ಪೋಣಿಸಬೇಕು. ಈಗಾಗಲೇ ರಣಬೀರ್ ಕಪೂರ್, ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್ ಚಾಲೆಂಜ್ ನಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಅಕ್ಷಯ್ ಕುಮಾರ್ ಚಾಲೆಂಜ್ ಸೋತಿದ್ದಾರೆ.
ಇದೀಗ ಅನುಷ್ಕಾ ಶರ್ಮಾರಿಂದ ಈ ಚಾಲೆಂಜ್ ಸ್ವೀಕರಿಸಿದ ನಟ ಶಾರುಕ್ ಖಾನ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ದೊಡ್ಡ ಸೂಜಿಗೆ ಶಾರುಕ್ ದಾರ ಪೋಣಿಸಿದ್ದಾರೆ. ಕೇವಲ 0.000000001 ಸೆಕೆಂಡ್ ನಲ್ಲಿ ಶಾರುಕ್ ಈ ಕೆಲಸ ಮಾಡಿದ್ದಾರೆ. ವಿಡಿಯೋ ನೋಡಿದ ಅನುಷ್ಕಾ, ಚಾಲೆಂಜ್ ವಿನ್ನರ್ ಶಾರುಕ್ ಎಂದು ಘೋಷಣೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.