ಹಾಸ್ಯ ನಟ ಕುನಾಲ್ ಕಮ್ರಾ ಕ್ಯಾಂಪಸ್ ಶೋ ರದ್ದುಗೊಂಡಿದ್ಯಾಕೆ?
ಸೋಮವಾರ, 23 ಜುಲೈ 2018 (14:29 IST)
ಗುಜರಾತ್ : ಆಗಸ್ಟ್ 11 ರಂದು ಎಂ.ಎಸ್ ವಿ.ವಿ ಯ ಕ್ಯಾಂಪಸ್ ಆಡಿಟೋರಿಯಂ ನಲ್ಲಿ ನಿಗದಿಯಾದ ಹಾಸ್ಯ ನಟ ಕುನಾಲ್ ಕಮ್ರಾ ಅವರ ಕ್ಯಾಂಪಸ್ ಶೋವನ್ನು ರದ್ದುಗೊಳಿಸಲಾಗಿದೆ.
ಹಾಸ್ಯ ನಟ ಕುನಾಲ್ ಕಮ್ರಾ ಅವರು ರಾಷ್ಟ್ರವಿರೋಧಿ ಎಂದು ವಿ.ವಿ ಯ ಹಳೆಯ ವಿದ್ಯಾರ್ಥಿಗಳು ಆರೋಪಿಸಿದ್ದ ಹಿನ್ನಲೆಯಲ್ಲಿ ವಿವಿ ಅವರ ಕ್ಯಾಂಪಸ್ ಶೋವನ್ನು ರದ್ದು ಮಾಡಿದೆ ಎಂಬುದಾಗಿ ತಿಳಿದುಬಂದಿದೆ.
ಕುನಾಲ್ ಕಮ್ರಾ ತಮ್ಮ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ಕುರಿತು ವ್ಯಂಗ್ಯವಾಗಿ ಮಿಮಿಕ್ರಿ ಮಾಡಿ ವಿವಾದಕ್ಕೊಳಗಾಗಿದ್ದಲ್ಲದೇ, ಭಾರತವನ್ನು ತುಕಡೇ ತುಕಡೇ ಮಾಡುತ್ತೇವೆ ಎಂದಿದ್ದ ಗುಂಪನ್ನು ಬಹಿರಂಗವಾಗಿ ಬೆಂಬಲಿಸಿರುವ ಆರೋಪಗಳು ಅವರ ಮೇಲಿವೆ. ಅಷ್ಟೇ ಅಲ್ಲದೆ ದೇಶಪ್ರೇಮಿ ವಿಶ್ವವಿದ್ಯಾಲಯಗಳೆಲ್ಲವನ್ನೂ ಅವರು ವಿರೋಧಿಸುತ್ತಾರೆ. ಇಂತಹವರು ಯುವಕರನ್ನು ತಪ್ಪು ದಾರಿಗೆಳೆಯುತ್ತಾರೆ ಎಂದು ಆರೋಪಿಸಿರುವ ವಿವಿ ವಿದ್ಯಾರ್ಥಿಗಳು, ಇಂತಹವರಿಗೆ ಕ್ಯಾಂಪಸ್ ಕಾರ್ಯಕ್ರಮದಲ್ಲಿ ಅವಕಾಶ ನೀಡಬಾರದು ಎಂದು ವಿವಿ ಚಾನ್ಸಲರ್ ಗೆ ಪತ್ರ ಬರೆದಿದ್ದಾರೆ. ಆದಕಾರಣ ವಿವಿ ನಟ ಕುನಾಲ್ ಕಮ್ರಾ ಅವರ ಕಾರ್ಯಕ್ರಮವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ