ಇರ್ಫಾನ್ ಖಾನ್ ಅವರು ಲಂಡನ್ ಗೆ ತೆರಳಲು ಕಾರಣವೇನು ಗೊತ್ತಾ..?

ಮಂಗಳವಾರ, 20 ಮಾರ್ಚ್ 2018 (05:49 IST)
ಮುಂಬೈ : ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಇದೀಗ ಅಮೇರಿಕಾದಿಂದ ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ.


ಇತ್ತಿಚೆಗಷ್ಟೆ ತಾವು ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ ನಟ ಇರ್ಫಾನ್ ಖಾನ್ ಅವರು ಭಾನುವಾರದಂದು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದಾರೆ. ಲಂಡನ್ ನಲ್ಲಿರುವ ಭಾರತೀಯ ವೈದ್ಯರು ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಬಗ್ಗೆ ಹೆಚ್ಚು ಸಂಶೋಧನೆ ಮಾಡಿದ್ದು ಅವರು ಇರ್ಫಾನ್ ಖಾನ್‌ ಅವರಿಗೆ ಚಿಕಿತ್ಸೆ ನೀಡಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಹಾಗೇ ಅಲ್ಲಿನ ವೈದ್ಯರು ಇರ್ಫಾನ್ ಅವರ ಕಾಯಿಲೆ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದು, ಅವರ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಭರವಸೆ ನೀಡಿದ್ದಲ್ಲದೇ  ಶೀಘ್ರದಲ್ಲಿಯೇ ಅವರು ಸಂಪೂರ್ಣವಾಗಿ ಗುಣಮಖವಾಗಲಿದ್ದಾರೆ ಎಂದು ಕೂಡ ತಿಳಿಸಿದ್ದಾರಂತೆ. ಈ ಬಗ್ಗೆ ಇರ್ಫಾನ್ ಖಾನ್ ಅವರ ಗೆಳೆಯನೊರ್ವ ತಿಳಿಸಿರುವುದಾಗಿ  ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ