ರಾಜಮೌಳಿಯವರ ಮುಂದಿನ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ಪಡೆದ ಸಂಭಾವನೆ ಕೇಳಿದ್ರೆ ದಂಗಾಗ್ತೀರಾ

Sampriya

ಶುಕ್ರವಾರ, 31 ಜನವರಿ 2025 (20:15 IST)
Photo Courtesy X
ಹೈದರಾಬಾದ್: ನ್ಯಾಶನಲ್ ಐಕಾನ್‌ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ಎಸ್ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ ಎಸ್ಎಸ್ಎಂಬಿ 29 ರಲ್ಲಿ ಮಹೇಶ್ ಬಾಬು ಅವರೊಂದಿಗೆ ನಟಿಸಲು ಸಿದ್ಧರಾಗಿದ್ದಾರೆ. RRR ಸಿನಿಮಾ ಯಶಸ್ವಿನ ಬಳಿಕ  ರಾಜಮೌಳಿ ಮತ್ತೊಂದು ಭವ್ಯವಾದ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ ಮತ್ತು ನಿರೀಕ್ಷೆಗಳು ಗಗನಕ್ಕೇರಿವೆ.

ಚಿತ್ರದ ಸುತ್ತ buzz ಬೆಳೆಯುತ್ತಲೇ ಇದ್ದರೂ, ಪ್ರಸ್ತುತ ಇದೀಗ ಸುದ್ದಿಯಲ್ಲಿರುವುದು ನಟಿ ಪ್ರಿಯಾಂಕಾ ಚೋಪ್ರಾ ಸಂಭಾವನೆ.

ಪ್ರಿಯಾಂಕಾ ಚೋಪ್ರಾ ಈಗ ದೀಪಿಕಾ ಪಡುಕೋಣೆಯನ್ನು ಮೀರಿಸಿ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹೇಳಲಾಗುತ್ತದೆ.

ಈ ಹಿಂದೆ ಒಂದು ಸಿನಿಮಾಗೆ 15ರಿಂದ 20ಕೋಟಿ ಸಂಭಾವನೆ ಪಡೆಯುವ ಮೂಲಕ ದೀಪಿಕಾ ಪಡುಕೋಣೆ ಅಗ್ರಸ್ಥಾನದಲ್ಲಿದ್ದರು. ಆದರೆ ಪ್ರಿಯಾಂಕ ಚಿತ್ರವೊಂದಕ್ಕೆ 30 ಕೋಟಿ ಸಂಭಾವಣೆ ಪಡೆಯುವ ದೀಪಿಕಾಳನ್ನು ಹಿಂದಿಕ್ಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ