ಆದಾಯ ತೆರಿಗೆ ವಿನಾಯಿತಿ ಮಿತಿ 3 ಲಕ್ಷ ರೂ.: ಜನಸಾಮಾನ್ಯರ ನಿರೀಕ್ಷೆ

ಬುಧವಾರ, 24 ಫೆಬ್ರವರಿ 2016 (17:25 IST)
ಕೇಂದ್ರ ಬಜೆಟ್ ಮಂಡನೆಗೆ ಒಂದು ವಾರಕ್ಕಿಂತ ಕಡಿಮೆ ಅವಧಿ ಇರುವಂತೆ ನರೇಂದ್ರ ಮೋದಿ ಸರ್ಕಾರದಿಂದ ಜನಸಾಮಾನ್ಯರು ಕೆಲವು ನಿರೀಕ್ಷೆಗಳನ್ನು ಹೊಂದಿದ್ದಾರೆ. ಮೋದಿ ಸರ್ಕಾರದ ಹಿಂದಿನ ಸಾಧನೆಯನ್ನು ಗಣನೆಗೆ ತೆಗೆದುಕೊಂಡಿರುವ ಜನತೆ ಬಿಜೆಪಿ ಆಡಳಿತದಿಂದ ಅಧಿಕ ನಿರೀಕ್ಷೆಯನ್ನು ಹೊಂದಿದ್ದಾರೆ. ಬಜೆಟ್‌ನಲ್ಲಿ ಕೆಲವು ಗಮನಾರ್ಹ ನೀತಿ ಬದಲಾವಣೆಗಳಿಂದ ದಿನನಿತ್ಯದ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಂದು ಅವರು ಆಶಯ ಹೊಂದಿದ್ದಾರೆ. 
 
ಪ್ರಮುಖ ಅಂಶಗಳಲ್ಲಿ ಒಂದೆಂದರೆ ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳವನ್ನು  ಸದ್ಯದ 2,50,000 ದಿಂದ 3,00,000 ಹೆಚ್ಚಿಸಲಾಗುತ್ತದೆಂಬ ನಿರೀಕ್ಷೆಯಲ್ಲಿ ಜನಸಾಮಾನ್ಯರಿದ್ದಾರೆ. ಇದಲ್ಲದೇ  ತೆರಿಗೆ ಮಿತಿ ಹೆಚ್ಚಳದಿಂದ ಉಳಿತಾಯಕ್ಕೆ ನಾಂದಿಯಾಗಿ ಬಂಡವಾಳ ಮತ್ತು ವ್ಯವಸ್ಥೆಯಲ್ಲಿ ದ್ರವ್ಯತೆ ಹೆಚ್ಚಾಗುತ್ತದೆ.
 
ವೈದ್ಯಕೀಯ ಪರಿಹಾರಕ್ಕೆ  ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಬೇಕೆಂದು ಕೂಡ ಜನಸಾಮಾನ್ಯರು ಬಯಸಿದ್ದಾರೆ. ರಾಷ್ಟ್ರದ ಆರ್ಥಿಕತೆಗೆ ದುಡಿಯುವ ಮಹಿಳೆಯರ ಕೊಡುಗೆ ನಿಧಾನವಾಗಿ ಮತ್ತು ಸ್ಥಿರವಾಗಿ ಹೆಚ್ಚುತ್ತಿದೆ. ಆದ್ದರಿಂದ ದುಡಿಯುವ ಮಹಿಳೆಯರಿಗೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 4 ಲಕ್ಷಗಳಿಗೆ ಪ್ರೋತ್ಸಾಹಕವಾಗಿ ಹೆಚ್ಚಿಸಬೇಕೆಂದು ಬಯಸಿದ್ದಾರೆ. 
 
 

ವೆಬ್ದುನಿಯಾವನ್ನು ಓದಿ