ಅಂತಾರಾಷ್ಟ್ರೀಯ ಕಾಂಡೋಮ್‌ಗಳ ಗಾತ್ರ ಭಾರತೀಯರಿಗೆ ತೀರಾ ದೊಡ್ಡದು

ಮಂಗಳವಾರ, 1 ಏಪ್ರಿಲ್ 2014 (14:01 IST)
ನವದೆಹಲಿ: ಅಂತಾರಾಷ್ಟ್ರೀಯ ಗಾತ್ರಗಳಿಗೆ ಅನುಗುಣವಾಗಿ ತಯಾರಿಸುವ ಕಾಂಡೋಮ್‌ಗಳು ಭಾರತದ ಬಹುತೇಕ ಪುರುಷರಿಗೆ ತೀರಾ ದೊಡ್ಡಗಾತ್ರದ್ದಾಗಿರುತ್ತದೆ ಎಂದು ಭಾರತದಲ್ಲಿ ನಡೆಸಿದ ಸುಮಾರು 1000 ಪುರುಷರ ಸಮೀಕ್ಷೆಯಿಂದ ತಿಳಿದುಬಂದಿದೆ. ಅರ್ಧಕ್ಕಿಂತ ಹೆಚ್ಚು ಜನರ ಜನನಾಂಗ ಅಂತಾರಾಷ್ಟ್ರೀಯ ಮಾನದಂಡದ ಕಾಂಡೋಮ್‌ಗಳಿಗಿಂತ ಚಿಕ್ಕದಾಗಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಇದರಿಂದ ಮಿಶ್ರಿತ ಗಾತ್ರಗಳ ಕಾಂಡೋಮ್‌ಗಳು ಭಾರತದಲ್ಲಿ ಲಭ್ಯವಾಗುವಂತೆ ತಯಾರಿಸಬೇಕೆಂದು ಕರೆ ನೀಡಲಾಗಿದೆ.ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ 2 ವರ್ಷಗಳ ಅಧ್ಯಯನ ನಡೆಸಿತು.

ಸುಮಾರು 1200 ಕಾರ್ಯಕರ್ತರ ಜನನಾಂಗಗಳನ್ನು ದೇಶದೆಲ್ಲೆಡೆ ನಿಖರವಾಗಿ ಅಳತೆಮಾಡಿದಾಗ ಈ ವಿಷಯ ತಿಳಿದುಬಂತು.ಈ ವೈಜ್ಞಾನಿಕ ಸಮೀಕ್ಷೆಯಿಂದ ಶೇ.60ರಷ್ಟು ಭಾರತೀಯರ ಜನನಾಂಗಗಳು ಅಂತಾರಾಷ್ಟ್ರೀಯ ಮಾನದಂಡಕ್ಕಿಂತ 3ರಿಂದ 5 ಸೆಂಮೀ ಕಡಿಮೆಯಿರುತ್ತದೆಂದು ತೀರ್ಮಾನಿಸಲಾಗಿದೆ.ಈ ವಿಷಯ ಗಂಭೀರವಾಗಿದ್ದು, ಭಾರತದಲ್ಲಿ ಬಳಸುವ ಕಾಂಡೋಮ್‌ಗಳು ಕೆಳಕ್ಕೆ ಬೀಳುವುದು ಅಥವಾ ಹರಿದುಹೋಗುವ ಮೂಲಕ ವೈಫಲ್ಯದ ಪ್ರಮಾಣಗಳು ಅತ್ಯಧಿಕವಾಗಿದೆ. ದೇಶದಲ್ಲಿ ಈಗಾಗಲೇ ಎಚ್‌ಐವಿ ಸೋಂಕುಗಳು ಅತ್ಯಧಿಕ ಸಂಖ್ಯೆಯಲ್ಲಿದೆ.ಸಣ್ಣ ಗಾತ್ರದ ಕಾಂಡೋಮ್‌ಗಳು ಭಾರತದಲ್ಲಿ ಮಾರಾಟಕ್ಕಿವೆ. ಆದರೆ ಭಾರತೀಯರಿಗೆ ಈ ಬಗ್ಗೆ ಅರಿವಿರುವುದಿಲ್ಲ. ಔಷಧಿ ಅಂಗಡಿಗೆ ತೆರಳಿ ಸಣ್ಣ ಗಾತ್ರದ ಕಾಂಡೋಮ್ ಕೊಡಿ ಎಂದು ಹೇಳುವುದಕ್ಕೂ ನಾಚಿಕೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ