ಈ ಹುಡುಗಿಯ ಕಣ್ಣಲ್ಲಿ ನೀರಲ್ಲ, ಕಲ್ಲು ಉದುರುತ್ತೆ

ಶನಿವಾರ, 8 ಫೆಬ್ರವರಿ 2014 (15:57 IST)
PR
ಸಾನಾ : ಅತೀ ದುಖಃವಾದಾಗ ಮತ್ತು ಅತಿ ಹೆಚ್ಚು ಆನಂದವಾದಾಗಲೂ ಕೂಡ ಕಣ್ಣಿನಿಂದ ನೀರು ಬರುತ್ತವೆ. ಆದರೆ ಕಣ್ಣಿನಿಂದ ನೀರು ಬರುವ ಬದಲು ಕಲ್ಲು ಉದುರುತ್ತದೆ. ಈ ವಿಷಯ ಕೇಳಿ ನಿಮಗೆ ಆಶ್ಚರ್ಯವಾಗಬಹುದು , ಆದರೆ ಇದು ಸತ್ಯ .

ಯೆಮನ್‌‌ನಲ್ಲಿ ವಾಸವಿರುವ 12 ವರ್ಷದ ಹುಡುಗಿಯ ಕಣ್ಣಿನಲ್ಲಿ ನೀರಲ್ಲ , ಸಣ್ಣ ಸಣ್ಣ ಕಲ್ಲುಗಳು ಉದುರುತ್ತವೆ. ಇದನ್ನು ಕಂಡ ವೈದ್ಯರು ಕೂಡ ಆಶ್ಚರ್ಯ ಚಕಿತರಾಗಿದ್ದಾರೆ. ವಿಜ್ಞಾನಕ್ಕೆ ಸವಾಲಾದ ಘಟನೆಯೊಂದು ವರದಿಯಾಗಿದೆ.

ಈಕೆಯ ಕಣ್ಣಲ್ಲಿ ನೀರಿನ ಬದಲು ಕಲ್ಲು ಬರುವುದು ಕಂಡು ಅಲ್ಲಿನ ಜನರು ಗಾಬರಿಯಾಗಿದ್ದಾರೆ. ಇದನ್ನು ಕಂಡ ಜನರು ಈ ಸದಿಯಾ ಎನ್ನುವ ಹುಡುಗಿಗೆ ಭೂತ ಹಿಡಿದಿದೆ ಎಂದು ಹೇಳುತ್ತಿದ್ದಾರೆ.

ಆದರೆ ವೈದ್ಯರು ಹೇಳೊದೇ ಬೇರೆ. ಈ ಹುಡುಗಿಯ ಕಣ್ಣಲ್ಲಿ ಕಲ್ಲು ತನ್ನಿಂದ ತಾನೆ ಸೃಷ್ಟಿಯಾಗುತ್ತವೆ ಮತ್ತು ಕಣ್ಣುಗಳಲ್ಲಿ ನೀರಿನ ಬದಲು ಕಲ್ಲಿನ ತುಣುಕುಗಳು ಉದುರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಯೆಮನ್‌‌ನ ಟಿವಿ ಚಾನಲ್‌‌ ಈ ಸದಿಯಾ ಕಣ್ಣಿನಲ್ಲಿ ಕಲ್ಲು ಬರುವುದನ್ನು ಶೂಟಿಂಗ್ ಮಾಡಿಕೊಂಡಿದೆ. ಈ ವಿಡಿಯೊ ರಿಕಾರ್ಡ್ ಯುಟೂಬ್‌ನಲ್ಲಿ ಅಪಲೋಡ್‌ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ವಿಡಿಯೊದಲ್ಲಿ ಆಸ್ಪತ್ರೇಯಲ್ಲಿ ವೈದ್ಯರ ಪ್ರಕಾರ ಈಕೆಯ ಕಣ್ಣಿನಲ್ಲಿ ನೀರಿನ ಬದಲು ಕಲ್ಲು ಸೃಷ್ಟಿಯಾಗುತ್ತಿವೆ ಎಂದು ತಿಳಿಸಲಾಗಿದೆ. ಈಕೆಯ ಕಣ್ಣಿನಿಂದ ಬರುವ ಕಲ್ಲಿನ ತುಣುಕುಗಳನ್ನು ಒಂದು ಪೆಟ್ಟಿಗೆಯಲ್ಲಿ ಇಡಲಾಗಿದೆ.

ಡಾಕ್ಟರ್‌‌ಗಳು ಕೂಡ ಈ ಸದಿಯಾದ ಕಣ್ಣಲ್ಲಿ ನೀರಿನ ಬದಲು ಕಲ್ಲು ಬರುವುದು ಕಂಡು ಗಾಬರಿ ಮತ್ತು ಆಶ್ಚರ್ಯ ಚಕಿತರಾಗಿದ್ದಾರೆ ಎಂದು ಡೆಲಿ ಮಿರರ್‌ ಪತ್ರಿಕೆ ವರದಿ ಮಾಡಿದೆ.

ಈಕೆಯ ಕಣ್ಣಿನಲ್ಲಿ ನೀರಿನ ಬದಲು ಕಲ್ಲು ಏಕೆ ಬರುತ್ತವೆ ಎಂದು ವೈದ್ಯರಿಗೆ ಕೂಡ ಗೊತ್ತಾಗಿಲ್ಲವಂತೆ, ಸ್ವತಃ ವೈದ್ಯರೆ ಕಕ್ಕಾಬಿಕ್ಕಿಯಾಗಿದ್ದಾರೆ. ಈ ಸಬಿಯಾ ಆರೊಗ್ಯವಂತಳಾಗಿದ್ದಾಳೆ. ಇವಳಿಗೆ ಯಾವುದೇ ತರಹದ ರೋಗ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರು ಈಕೆಯ ಕಣ್ಣಲ್ಲಿ ಕಲ್ಲು ಹೇಗೆ ಸೃಷ್ಟಿಯಾಯಿತು ಎಂಬುದು ವಿಜ್ಞಾನ ಲೋಕಕ್ಕೆ ಒಂದು ದೊಡ್ಡ ಸವಾಲಾಗಿದೆ.

ವೆಬ್ದುನಿಯಾವನ್ನು ಓದಿ