ಇವರು ಮೂತ್ರದಲ್ಲಿ ಬೇಯಿಸಿದ ಮೊಟ್ಟೆ ಕೂಡ ತಿನ್ನುತ್ತಾರೆ !

ಶುಕ್ರವಾರ, 4 ಏಪ್ರಿಲ್ 2014 (17:24 IST)
PR
ಪ್ರತಿಯೊಬ್ಬರಿಗೆ ಒಂದೊಂದು ತಿಂಡಿ ಇಷ್ಟವಾಗುತ್ತದೆ . ಕೆಲವರಿಗೆ ಮೊಟ್ಟೆ ಕೂಡ ಇಷ್ಟವಂತೆ. ಸಾಮಾನ್ಯವಾಗಿ ಮೊಟ್ಟೆಯ ಅಮ್ಲೆಟ್‌ ಮತ್ತು ಮೊಟ್ಟೆಯ ಅನ್ನ ತಿನ್ನುತ್ತಾರೆ . ಕೆಲವರು ಮೊಟ್ಟೆಯನ್ನು ನೀರಿನಿಂದ ಬೇಯಿಸಿ ತಿನ್ನುತ್ತಾರೆ. ಆದರೆ ಮೂತ್ರದಲ್ಲಿ ಬೇಯಿಸಿದ ಮೊಟ್ಟೆ ನೀವು ಯಾವಾಗಲಾದರೂ ತಿಂದಿದ್ದೀರಾ, ಇದೇನಿದು ಮೂತ್ರದಲ್ಲಿ ಮೊಟ್ಟೆ ಬೇಯಿಸಬೇಕಾ ? ಛೀ ಹೊಲಸು ಅಂತ ನೀವು ಅನ್ನಬಹುದು ಆದರೆ ಇಲ್ಲೊಂದು ಕಡೆ ಮೂತ್ರದಲ್ಲಿ ಬೇಯಿಸಿದ ಮೊಟ್ಟೆ ತಿನ್ನುತ್ತಾರೆ ಎಂದು ಹೇಳಿದರೆ ನೀವು ನಂಬಲಿಕ್ಕಿಲ್ಲ ಆದರೆ ನೀವು ನಂಬಲೇ ಬೇಕಾದ ಸುದ್ದಿ ಮತ್ತು ಇದು ಎಲ್ಲಕ್ಕಿಂತ ರುಚಿಯಾದ ಪಧಾರ್ಥವಂತೆ.

ಚೀನಾದ ಡೋಂಗಯಾಂಗ ಪ್ರಾಂತ್ಯದಲ್ಲಿ ಹಲವಾರು ವರ್ಷಗಳಿಂದ ಮಕ್ಕಳ ಮೂತ್ರದಲ್ಲಿ ಕುದಿಸಿದ ಮೊಟ್ಟೆ ತಿನ್ನುತ್ತಾರೆ .

ಇದಕ್ಕಾಗಿ ಇವರು ಬಾಲಕರ ಮೂತ್ರದಲ್ಲಿ ಮೊಟ್ಟೆಯನ್ನು ಬೇಯಿಸುತ್ತಾರೆ ಮತ್ತು ಇಲ್ಲಿ ನಡೆಯುವ ಹಬ್ಬವೊಂದರಲ್ಲಿ ಇದನ್ನು ಸಿದ್ದಪಡಿಸುತ್ತಾರೆ.

ಮೂತ್ರದಲ್ಲಿ ಮೊಟ್ಟೆ ಕುದಿಸಿದರೆ , ನಂತರ ಈ ಮೊಟ್ಟೆ ಸ್ವಲ್ಪ ಉಪ್ಪಿನ ರುಚಿ ಸಿಗುತ್ತದೆ . ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಯನ್ನು ಬೇಯಿಸಲು ಹೆಚ್ಚಿನ ಮೂತ್ರ ಬೇಕಾಗುತ್ತದೆ. ಇದಕ್ಕಾಗಿ ಇವರು ಶಾಲಾ ಮಕ್ಕಳ ಮೂತ್ರ ಸಂಗ್ರಹಿಸುತ್ತಾರಂತೆ.

ಮಕ್ಕಳ ಮೂತ್ರದಲ್ಲಿ ಕುದಿಸಿದ ಮೊಟ್ಟೆ ಈ ಜನರಿಗೆ ತುಂಬಾನೇ ಇಷ್ಟವಂತೆ. ಈ ಮೊಟ್ಟೆ ತಿನ್ನಲು ರುಚಿಯಾಗಿ ಇರುತ್ತದೆ ಎಂದು ಈ ಜನರು ಪ್ರತಿಕ್ರಿಯೆ ನೀಡಿದ್ದಾರೆ.

ಮೂತ್ರದಲ್ಲಿ ಕುದಿಸಿದ ಮೊಟ್ಟೆ ತಿನ್ನುವುದರಿಂದ ಶರೀರದಲ್ಲಿ ರಕ್ತ ಸಂಚಲನ ಉತ್ತಮವಾಗುತ್ತದೆ ಮತ್ತು ಒಂದು ರೀತಿಯ ವಿಶೇಷ ಶಕ್ತಿ ಕೂಡ ಸಿಗುತ್ತದೆ ಎಂದು ಈ ಜನರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ