ಕಾಲಿನ ಬದಲು ಕೈ ಇದೆ . ಇದು ವಿಚಿತ್ರ ಮಾನವನ ಕಥೆ.

ಶನಿವಾರ, 28 ಡಿಸೆಂಬರ್ 2013 (17:42 IST)
PR
ಬೀಜಿಂಗ್‌: ಚೀನಾದಲ್ಲಿ ಒಬ್ಬ ಮನುಷ್ಯನ ಕಾಲಿನ ಜಾಗದಲ್ಲಿ ಕೈ ಇದೆ. ವಿಚಿತ್ರ ಆದರು ಸತ್ಯ. ಆದರೆ ಚೀನಾದ ವೈದ್ಯರು ಈ ಕಮಾಲ್ ಮಾಡಿದ್ದಾರೆ. ಇವರು ವ್ಯಕ್ತಿಯ ಕಾಲಿಗೆ ಕೈ ಜೋಡಿಸಿದ್ದಾರೆ. ಈ ವಿಷಯ ಈಡಿ ವಿಶ್ವದಲ್ಲಿ ಚರ್ಚೆಯಾಗುತ್ತಿದೆ.

ವೈದ್ಯರು ಈ ಝೀಯಾಓ ವೆಯಿ ಎನ್ನುವ 25 ವರ್ಷದ ಯುವಕನ ಕಾಲಿನ ಜಾಗಕ್ಕೆ ಕೈ ಜೋಡಿಸಿದ್ದರು. ಒಂದು ತಿಂಗಳಿನ ನಂತರ ಮತ್ತೆ ಕತ್ತರಿಸಿದ ಕೈ ಜಾಗಕ್ಕೆ ಕೈ ಜೋಡಿಸಿದರು.

ಕಳೆದ ವರ್ಷ ಝೀಯಾಓ ಬಲಗೈ ಡ್ರಿಲ್‌ ಮಶೀನ್‌ ಹಿಡಿದು ಕೆಲಸ ಮಾಡುತ್ತಿರುವಾಗ ಇವನ ಕೈ ಕಟ್‌ ಆಗಿತು . ಆಸ್ಪತ್ರೆಯಲ್ಲಿ ಇವನ ಕಟ್‌ ಆದ ಕೈಯನ್ನು ಜೋಡಿಸಲಿಲ್ಲ, ಯಾಕೆಂದರೆ ಇನ್‌ಫೇಕ್ಷನ್ ಆಗಬಾರದು ಎನ್ನು ಕಾರಣಕ್ಕೆ ಜೋಡಿಸಲಾಗಲಿಲ್ಲ. ಆದರೆ ಕೈ ಜೀವಂತವಾಗಿರಬೇಕೆಂದು ಕೈಯನ್ನು ಕಾಲಿಗೆ ಜೋಡಿಸಿದ್ದರು.

ಕೈ ಜೀವಂತವಾಗಿರಲೆಂದು ಕೈಯನ್ನು ಕಾಲಿಗೆ ಜೋಡಿಸಿದ ವೈದ್ಯರು ಒಂದು ತಿಂಗಳಿನವರೆಗೆ ಯಥಾಸ್ಥಿತಿಯಲ್ಲಿ ಇಟ್ಟರು,. ತಿಂಗಳಿನ ನಂತರ ಕಡಿತವಾದ ಕೈಯ ಇನ್‌ಫೇಶನ್‌ ಕಡಿಮೆಯಾದ ಕಾರಣ ಕಾಲಿಗೆ ಜೋಡಿಸಲಾಗಿದ್ದ ಕೈಯನ್ನು ಕೈಗೆ ಜೋಡಿಸಿದರು.

ಈ ಜೋಡನೆ ನಂತರ ಕೈ ಮೊದಲಿಗಿಂತ ಹೆಚ್ಚಿನ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾನೆ ಈ ಝೀಯಾಓ ಎಂದು ವೈದ್ಯರು ಹೇಳಿದ್ದಾರೆ.

ತುಂಬ ವಿಚಿತ್ರ ಸುದ್ದಿ ಇದು. ಶರೀರದ ಇನ್ನು ಕೆಲವು ಅಂಗಗಳು ಕೆಲಸ ಮಾಡದಿದ್ದರೆ, ಆ ಅಂಗಗಳು ಇನ್ನೆಲ್ಲೆಲ್ಲೋ ಜೋಡಿಸಬಹುದು.

ವೆಬ್ದುನಿಯಾವನ್ನು ಓದಿ