ಮಹಿಳೆಯರ ಮೊಲೆ ಹಾಲಿನಿಂದ ಸಾಬೂನ ಉತ್ಪಾದನೆ

ಮಂಗಳವಾರ, 1 ಏಪ್ರಿಲ್ 2014 (17:03 IST)
ಬೀಜಿಂಗ್‌: ಭಾರತದಲ್ಲಿ ತಾಯಿ ಮತ್ತು ತಾಯಿಯ ಎದೆ ಹಾಲಿಗೆ ತನ್ನದೆ ಆದ ವಿಶೇಷತೆ ಇದೆ. ತಾಯಿ ಎದೆ ಹಾಲು ಮಗುವಿಗೆ ಆಹಾರ. ಆದರೆ ಚೀನಾದಲ್ಲಿ ಈ ತಾಯಿಯ ಎದೆಹಾಲಿನಿಂದ ಸಾಬೂನು ತಯಾರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಚೀನಾದಲ್ಲಿ ತಾಯಿಯಂದಿರು ಮಗುವಿಗೆ ಹಾಲುಣಿಸಿದ ಮೇಲೆ ಉಳಿದ ಹಾಲಿನಿಂದ ಸಾಬೂನು ತಯಾರಿಸುತ್ತಾರೆ. ಸ್ಥನದ ಹಾಲಿನಿಂದ 300 ಕ್ಕಿಂತಲು ಹೆಚ್ಚು ಸಾಬೂನು ತಯಾರಿಸಬಹುದು ಎಂದು ಚೀನಾದ ಒಬ್ಬ ಉದ್ಯಮಿ ಮಹಿಳೆ ಮಾದ್ಯಮದವರಿಗೆ ತಿಳಿಸಿದ್ದಾಳೆ.

ಚೀನಾದ ಆನ್‌‌ ಲೈನ್ ಮಾರುಕಟ್ಟೆಯಲ್ಲಿ ತಾಯಿ ಎದೆಹಾಲಿನ ಮಾರಾಟದ ಪ್ರಕ್ರಿಯೆ ನಡೆಯುತ್ತದೆ. ತಾಯಿ ಎದೆ ಹಾಲಿನಿಂದ ತಯಾರಿಸಿದ ಸಾಬೂನಿಂದ ಚರ್ಮ ಬೆಳ್ಳಗಾಗುತ್ತವೆ ಮತ್ತು ಧೀರ್ಘಕಾಲದವರೆಗೂ ಚರ್ಮವನ್ನು ಸುರಕ್ಷಿತವಾಗಿರಿಸುತ್ತದೆ. ಇನ್ನು ಮುಂದೆ ಈ ತರಹದ ಸಾಬುನು ಉತ್ಪಾದನೆ ನಿಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ