ಮಾನವನ ಧ್ವನಿಯನ್ನು ,ವಯಸ್ಸನ್ನು ಗುರುತಿಸಬಲ್ಲದು ಆನೆ

ಶುಕ್ರವಾರ, 14 ಮಾರ್ಚ್ 2014 (15:11 IST)
ಆನೆಗಳು ಲಿಂಗಗಳ ಮತ್ತು ವಯಸ್ಸಿನ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು , ಮನುಷ್ಯ ಮಗುವೋ ಅಥವಾ ವಯಸ್ಕನೋ ಎಂದು ಅದು ಮಾನವ ಧ್ವನಿಯನ್ನು ಕೇಳಿಯೇ ನಿರ್ಧಿರಿಸುತ್ತದೆ ಎಂದು ಸಂಶೋಧನೆ ಸಾಬೀತು ಪಡಿಸಿದೆ.
PTI

ಸಂಶೋಧಕರು ಆಫ್ರಿಕಾದ ಕಾಡಿನಲ್ಲಿನ ಆನೆಗಳ ಗುಂಪಿನಲ್ಲಿ ಧ್ವನಿ ರೆಕಾರ್ಡಿಂಗ್ ಪ್ಲೇ ಮಾಡಿ ಈ ಫಲಿತಾಂಶವನ್ನು ಪಡೆದಿದ್ದಾರೆ.

ವಯಸ್ಕ ಮಸಾಯ್ ಪುರುಷರ ಧ್ವನಿಗಳನ್ನು ಕೇಳಿ ಆನೆಗಳು ಹೆಚ್ಚು ಭಯ ತೋರಿಸಿದವು.
ಜಾನುವಾರು ಮೇಯಿಸುವ ಮಸಾಯ್ ಜನರು ಆನೆಗಳ ಜತೆ ಘರ್ಷಣೆಗಿಳಿಯುತ್ತಿರುತ್ತಾರೆ. ಹಾಗಾಗಿ ಈ ಪ್ರಾಣಿಗಳು ಕೇಳಲು ಮತ್ತು ಅವರಿಂದ ತಪ್ಪಿಸಿಕೊಳ್ಳಲು ಆ ಪುರುಷರ ಧ್ವನಿಯನ್ನು ಗ್ರಹಿಸುವ ವಿಶೇಷ ಶಕ್ತಿಯನ್ನು ಬೆಳೆಸಿಕೊಂಡಿವೆ.

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಆಫ್ ಪ್ರೊಸೀಡಿಂಗ್ಸ್ ನಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗಿದೆ.

ಸಿಂಹದ ಘರ್ಜನೆಯಿಂದ ಕೂಡ ಅದು ಹೆಣ್ಣೋ ಅಥವಾ ಅಪಾಯಕಾರಿಯಾದ ಗಂಡೋ ಎಂದು ಅದು ಪತ್ತೆ ಹಚ್ಚಬಲ್ಲದು.

ಆನೆಗಳು ಪರಿಮಳಕ್ಕೆ ಮತ್ತು ಮಸಾಯ್ ಉಡುಪಿನಲ್ಲಿರುವ ಕೆಂಪು ಬಣ್ಣಕ್ಕೂ ಭಯವನ್ನು ಪ್ರತಿಕ್ರಿಯಿಸಿವೆ ಎಂದು ಇತರ ಅಧ್ಯಯನಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ