2032 ರಲ್ಲಿ ವಿಶ್ವ ಅಂತ್ಯವಾಗಲಿದೆಯೇ? ಹೌದೆನ್ನುತ್ತಾರೆ ಖಗೋಳ ಶಾಸ್ತ್ರಜ್ಞರು

ಸೋಮವಾರ, 25 ಆಗಸ್ಟ್ 2014 (19:28 IST)
ಪ್ರಳಯ, ಅನಾಹುತಕಾರಿಯಾದ ದಿನಗಳು ಸಮೀಪಿಸುತ್ತಿದೆಯೇ?  ಖಗೋಳಶಾಶ್ತ್ರಜ್ಞರ ಪ್ರಕಾರ, ಕೆಲವು ಸಣ್ಣ ಮತ್ತು ದೊಡ್ಡ ಧೂಮಕೇತುಗಳು ಭೂಮಿಯತ್ತ ವೇಗವಾಗಿ ನುಗ್ಗುತ್ತಿವೆ. ಇವುಗಳಲ್ಲಿ ಕೆಲವು ನಮ್ಮ ಭೂಮಿಗೆ ಅಪ್ಪಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. 
 
 ಬಹಳಷ್ಟು ಶಕ್ತಿಶಾಲಿಯಾದ 50 ಪರಮಾಣು ಬಾಂಬ್‌‌ಗಳಿಗಿಂತ ಹೆಚ್ಚಿನ ವಿನಾಶಕಾರಿಯಾಗಿರುವ ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳು ವೇಗವಾಗಿ ಪೃಥ್ವಿಯತ್ತ ನುಗ್ಗುತ್ತಿವೆ. ಕ್ಷುದ್ರಗ್ರಹಗಳು ಇದೇ ವೇಗದಲ್ಲಿ ಸಾಗಿದಲ್ಲಿ ಮುಂಬರುವ 18 ವರ್ಷಗಳಲ್ಲಿ ಪೃಥ್ವಿಯ ಮೇಲೆ ಅಪ್ಪಳಿಸುವ ಸಾಧ್ಯತೆಗಳಿವೆ. ಇದರಿಂದ ಘಟಿಸಬಹುದಾದ ವಿನಾಶದ ಕಲ್ಪನೆ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕಳೆದ ವರ್ಷ ಪತ್ರಿಕೆಯೊಂದು ವರದಿ ಮಾಡಿತ್ತು. 
 
ಉಕ್ರೇನ್‌‌‌‌ನ ಖಗೋಳಶಾಸ್ತ್ರಜ್ಞರು ಈ ವಿಶಾಲ ಕ್ಷುದ್ರಗ್ರಹ ಭೂಮಿ ಕಡೆಗೆ ಬರುವುದನ್ನು ನೋಡಿದ್ದಾರೆ. ಇದಕ್ಕೆ ಟಿವಿ 135 ಎಂಬ ಹೆಸರು ಇಡಲಾಗಿದೆ ಮತ್ತು ಆಗಸ್ಟ್‌ 26, 2032 ರಂದು ಭೂಮಿಗೆ ಅಪ್ಪಳಿಸಲಿದೆ ಎಂದು ಹೇಳಲಾಗಿದೆ. ಈ ಅನುಮಾನಕ್ಕೆ ಹಲವು ದೇಶಗಳ ಖಗೋಲಶಾಸ್ತ್ರಜ್ಞರು ಪುಷ್ಠಿ ನೀಡಿದ್ದಾರೆ. 
 
ಆದರೆ, 1,350 ಅಡಿ ಉದ್ದದ ಧೂಮಕೇತು ಆ ದಿನ ಭೂಮಿಗೆ ಅಪ್ಪಳಿಸಲಿದೆ ಎನ್ನುವ ವಿಷಯಕ್ಕೆ ವಿಜ್ಞಾನಿಗಳಲ್ಲಿಯೆ ಏಕಾಭಿಪ್ರಾಯವಿಲ್ಲ. ಆದರೆ, ಭೂಮಿಗೆ ಅಪ್ಪಳಿಸಲಿದೆ ಎನ್ನುವ ಕ್ಷುದ್ರಗ್ರಹಕ್ಕೆ 2,500 ಮೆಗಾಟನ್‌ ಟಿಎನ್‌ಟಿ ಶಕ್ತಿ ಇದೆ ಎನ್ನುವ ಅಂದಾಜು ಮಾಡಲಾಗಿದೆ. 
 
ಫೆಬ್ರವರಿ 2013ರಲ್ಲಿ ರಷ್ಯಾದ ಚೆಲಿಬಿನ್ಸಕ್‌‌ನಲ್ಲಿ 19 ಕಿಮೀ ವೇಗದಲ್ಲಿ ಒಂದು ಧೂಮಕೇತು ಅಪ್ಪಳಿಸಿದ್ದಾಗ ಈ ವಿಸ್ಪೊಟದ ಶಕ್ತಿ ಹಿರೋಶೀಮಾದಲ್ಲಿ ಬಿದ್ದ ಪರಮಾಣು ಬಾಂಬ್‌‌ಗಿಂತ 30 ಪಟ್ಟು ಹೆಚ್ಚಾಗಿತ್ತು. ಇದರಿಂದ ತುಂಬಾ ಹಾನಿಯಾಗಿತ್ತು. ಆದರೆ, ಅದು ಬಹಳಷ್ಟು ಸಣ್ಣ ತುಣುಕಾಗಿತ್ತು ಮತ್ತು ಇದರ ಉದ್ದ ಕೇವಲ 1000 ಮೀಟರ್‌ ಮಾತ್ರವಿತ್ತು ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ