ಸೇಬು ತಿನ್ನುವ ಮಹಿಳೆಯರಲ್ಲಿ ಸೆಕ್ಸ್ ಆಸಕ್ತಿ ಹೆಚ್ಚು

ಮಂಗಳವಾರ, 19 ಆಗಸ್ಟ್ 2014 (19:42 IST)
ದಿನಕ್ಕೊಂದು ಸೇಬು ಹಣ್ಣು ತಿನ್ನಿ ವೈದ್ಯರಿಂದ ದೂರವಿರಿ ಎನ್ನುವ ಗಾದೆ ಕೇಳಿದ್ದಿರಿ. ಅಂದರೆ ದಿನಕ್ಕೊಂದು ಸೇಬು ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಕೇವಲ ಆರೋಗ್ಯವಷ್ಟೆ ಉತ್ತಮವಾಗಿರಲ್ಲ, ಇದೀಗ ಸೇಬು ತಿನ್ನುವುದರಿಂದ ಮಹಿಳೆಯಲ್ಲಿ ಲೈಂಗಿಕ ಶಕ್ತಿ ಕೂಡ ಹೆಚ್ಚುತ್ತದೆ ಎನ್ನುವುದು ಸಂಶೋಧನೆಯಿಂದ ಬಹಿರಂಗವಾಗಿದೆ. 
 
ಸೇಬು ಹಣ್ಣಿನಲ್ಲಿ ಪಾಲಿಫೆನಾಲ್ಸ್‌‌ ಮತ್ತು ಆಂಟಿಆಕ್ಸಿಡೆಂಟ್‌‌ಗಳಿರುವುದರಿಂದ ಜನನಾಂಗದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ.‌‌ಆದ್ದರಿಂದ, ಆರೋಗ್ಯವಂತ ಮಹಿಳೆಯರು ಪ್ರತಿನಿತ್ಯಸೇಬು ಹಣ್ಣು ತಿನ್ನುವುದರಿಂದ ಲೈಂಗಿಕ ಶಕ್ತಿ ಮತ್ತಷ್ಟು ಹೆಚ್ಚುತ್ತದೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.. 
 
ಈ ಅಧ್ಯಯನಕ್ಕಾಗಿ ಸಂಶೋಧಕರು ಇಟಲಿಯಲ್ಲಿ 18 ರಿಂದ 43 ವರ್ಷ ವಯಸ್ಸಿನೊಳಗಿನ 731 ಆರೋಗ್ಯವಂತ ಮಹಿಳೆಯರನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಅಧ್ಯಯನದಲ್ಲಿ ಮಹಿಳೆಯರು " ಮಹಿಳಾ ಲೈಂಗಿಕ ಕ್ರಿಯೆ ಸೂಚ್ಯಂಕಕ್ಕೆ ಸಂಬಂಧಿಸಿದಂತೆ (ಎಫ್‌ಎಸ್‌‌ಎಫ್‌‌‌ಐ) ಕೇಳಲಾದ ಪ್ರಶ್ನೆಗಳಿಗೆ ಧನಾತ್ಮಕವಾಗಿ ಉತ್ತರಿಸಿದ್ದಾರೆ. ಇದರಲ್ಲಿ ಲೈಂಗಿಕ ಕ್ರಿಯೆ, ಲೈಂಗಿಕ ಆವರ್ತನ, ಸಂಭೋಗ, ಲ್ಯೂಬ್ರಿಕೆಶನ್‌‌ ಮತ್ತು ಸಂಪೂರ್ಣ ಲೈಂಗಿಕ ಸಂತೃಪ್ತಿಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. 
 
ಮಹಿಳೆಯರು ಪ್ರತಿ ನಿತ್ಯ ಒಂದು ಅಥವಾ ಎರಡು ಸೇಬುಗಳನ್ನು ತಿಂದರೆ ಇವರ ಲ್ಯೂಬ್ರಿಕೆಶನ್‌‌ ಮತ್ತು ಒಟ್ಟಾರೆ ಲೈಂಗಿಕ ಕ್ರಿಯೆ ಉತ್ತಮವಾಗಿರುತ್ತದೆ. ಸೇಬಿನಲ್ಲಿ ಪ್ಲೊರಾಜಿನ್‌ ಕೂಡ ಇರುತ್ತದೆ, ಇದು ಒಂದು ಸಾಮಾನ್ಯ ಫಿಟೆಸ್ಟ್ರೆಜೆನ್‌‌ ಆಗಿರುತ್ತದೆ. ಇದು ಸಂರಚನಾತ್ಮಕ ರೂಪದಿಂದ ಎಸ್ಟ್ರಾಡಿಯೊಲ್‌‌ ತರಹ ಇದೆ. ಎಸ್ಟ್ರಾಡಿಯೊಲ್‌‌ ಎನ್ನುವುದು ಮಹಿಳೆಯರ ಸೆಕ್ಸ್‌‌‌ ಹಾರ್ಮೋನ್‌‌‌‌ ಆಗಿದೆ, ಇದು ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ ಎಂದು ಅಧ್ಯಯನದ ವರದಿಯಲ್ಲಿ ಬಹಿರಂಗವಾಗಿದೆ.

ವೆಬ್ದುನಿಯಾವನ್ನು ಓದಿ