ನಿಮ್ಮ ಮಚ್ವೆಗಳು ಕೂಡ ಶುಭ ಅಶುಭದ ಸಂಕೇತಗಳಾಗಿವೆ

ಮಂಗಳವಾರ, 20 ಮೇ 2014 (16:19 IST)
ಮಚ್ಚೆಗಳು ಕೂಡ ವಿವಿಧ ಸ್ಥಾನಗಳಲ್ಲಿ ವಿವಿಧ ರೀತಿಯ ಪರಿಣಾಮ ಬೀರುತ್ತವೆ. ಮಚ್ಚೆಗಳು ಕಪ್ಪು ಬಣ್ಣದಲ್ಲಿ ಇರುತ್ತವೆ. 
 
ಬಿಳಿ ಬಿಳಿ ಬಣ್ಣದ ಮೇಲೆ ಕಪ್ಪು ಕಪ್ಪು ಮಚ್ಚೆಗಳು ಮುಖದ ಮೇಲಿನ ಸುಂದರತೆಯನ್ನು ಹೆಚ್ಚಿಸುತ್ತದೆ. ಶರೀರದ ಇತರ ಭಾಗಗಳಲ್ಲಿ ಮಚ್ಚೆಗಳಿರುವುದರಿಂದ ಯಾವ ಯಾವ ಅರ್ಥ ನೀಡುತ್ತದೆ ಎಂದು ತಿಳಿದುಕೊಳ್ಳೊಣ ಬನ್ನಿ 
 
* ತಲೆಯ ಬಲಭಾಗದಲ್ಲಿ ಮಚ್ಚೆ ಇರುವವರಿಗೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ಲಭಿಸುತ್ತದೆ. 
 
* ಎರಡೂ ಭುಜಗಳ ಮಧ್ಯೆ ಮಚ್ಚೆ ಇದ್ದವರು ಪರೋಪಕಾರಿ , ಉದಾರಿಯಾಗಿರುತ್ತಾರೆ. 
 
* ಕಪಾಳದ ಮೇಲೆ ಮಚ್ಚೆ ಇರುವವರು ಧನಿಕರು ಅಥವಾ ದುರ್ವ್ಯಸನಿಗಳಾಗಿರುತ್ತಾರೆ. 
 
* ಮೂಗಿನ ಬಲಬಾಗದಲ್ಲಿ ಮಚ್ಚೆ ಇದ್ದವರಿಗೆ ಧನ ಸಂಪತ್ತು ಮತ್ತು ಮೂಗಿನ ಎಡಭಾಗದಲ್ಲಿ ಮಚ್ಚೆ ಇದ್ದವರು ಪರಿಶ್ರಮಿಗಳು ಮತ್ತು ಸಫಲತೆಯನ್ನು ಅನುಭವಿಸುತ್ತಾರೆ. 
 
* ಬಲಬಾಗದ ಗಲ್ಲದ ಮೇಲೆ ಮಚ್ಚೆ ಇದ್ದವರು ಉನ್ನತಿಶೀಲ ಮತ್ತು ಮೇಧಾವಿಗಳಾಗುವ ಸೂಚನೆ ನೀಡುತ್ತದೆ. 
 
* ಎಡ ಗಲ್ಲದ ಮೇಲೆ ಮಚ್ಚೆ ಇರುವವರಿಗೆ ಶುಭ ಎಂದು ನಂಬಲಾಗುವುದಿಲ್ಲ. ಇವರಿಗೆ ಗೃಹಸ್ಥ ಜೀವನದಲ್ಲಿ ಹಣದ ಅಭಾವವಿರುತ್ತದೆ. 
 
* ಗದ್ದದ ಮೇಲೆ ಮಚ್ಚೆ ಇರುವವರು ಆರೋಗ್ಯವಂತರು , ವ್ಯಕ್ತಿವಾದಿ , ಸ್ವಃ ಹಿತದಾರಿಗಳಾಗಿರುತ್ತಾರೆ ಮತ್ತು ಸಮಾಜದಿಂದ ದೂರುತ್ತಾರೆ. 
 
* ಕಂಠದ ಮೇಲೆ ಮಚ್ಚೆ ಇರುವವರು ಜಾತಕದ ಪ್ರಕಾರ ಚಾಣಾಕ್ಷರಾಗಿರುತ್ತಾರೆ, ಧನ ಗಳಿಕೆಯಲ್ಲಿ ಸಫಲರಾಗುತ್ತಾರೆ ಮತ್ತು ಸ್ವಾವಲಂಬಿಗಳಾಗಿರುತ್ತಾರೆ. 
 
* ಬಲಗೈ ಮೇಲೆ ಮಚ್ಚೆ ಇರುವವರಿಗೆ ಶುಭವಾಗಿದೆ ಮತ್ತು ಎಡಗೈನ ಅಂಗೈ ಮೇಲೆ ಮಚ್ಚೆ ಇರುವವರು ಹಣ ವ್ಯಯ ಹೆಚ್ಚು ಮಾಡುತ್ತಾರೆ. 
 
* ಗುಪ್ತಾಂಗದ ಮೇಲಿನ ಭಾಗದಲ್ಲಿ ಮಚ್ಚೆ ಇದ್ದವರು ಹೆಚ್ಚು ಕಾಮುಕರಾಗಿರುತ್ತಾರೆ ಮತ್ತು ಅನೇಕ ಸ್ತ್ರೀ ಅಥವಾ ಪುರುಷರೊಂದಿಗೆ ಸಂಬಂಧ ಬೆಳೆಸಿರುತ್ತಾರೆ. 
 
ಈ ಪ್ರಕಾರವಾಗಿ ಮಚ್ಚೆಗಳು ಕೂಡ ಶುಭ-ಅಶುಭದ ಸಂಕೇತವಾಗಿರುತ್ತವೆ. 

ವೆಬ್ದುನಿಯಾವನ್ನು ಓದಿ