ಜೀವನ ಸುಂದರವಾಗಲು ಇಲ್ಲಿವೆ ಜ್ಯೋತಿಷ್ಯದ ಸಲಹೆಗಳು

ಶನಿವಾರ, 10 ಮೇ 2014 (18:25 IST)
ಪ್ರತಿಯೊಬ್ಬರು ತಮ್ಮ  ಜೀವನ ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಜ್ಯೋತಿಷ್ಯ ಕೂಡ 
ಜೀವನ ಸುಂದರಮಯವಾಗಿರಲು ಕೆಲವೊಂದು ಸಲಹೆಗಳನ್ನು ನೀಡುತ್ತದೆ. ಬನ್ನಿ ಈ ಕೆಳಗಿನ 
ಸಲಹೆಗಳಿಂದ ಜೀವನ ಸುಂದರವಾಹಿಸಿಕೊಳ್ಳೊಣ. 
 
1. ಪ್ರತಿ ನಿತ್ಯ ಎದ್ದ ತಕ್ಷಣ ತಾಯಿ ತಂದೆ ಮತ್ತು ಗುರು ಹಿರಿಯರನ್ನು ನಮಸ್ಕಾರ ಮಾಡಿ. ಇವರ 
ಆಶಿರ್ವಾದದಿಂದ ಜೀವನದಲ್ಲಿ ಉತ್ತಮ ಫಲಗಳು ಸಿಗುತ್ತವೆ. 
 
2.ಪ್ರತಿನಿತ್ಯ ಆಕಳಿಗೆ ಬೆಲ್ಲ ಮತ್ತು ರೊಟ್ಟಿಯನ್ನು ನೀಡಿ.  ಗೋ ಮಾತೆಯ ಕೃಪೆಯಿಂದ ಜೀವನದಲ್ಲಿ 
ಕಾಮಧೇನು ಲಭಿಸುತ್ತದೆ ಎಂದು ಹೇಳಲಾಗುತ್ತದೆ. 
 
3. ಪ್ರತಿನಿತ್ಯ ನೀವು ಸಾಕಿದ ನಾಯಿಗೆ  ರೊಟ್ಟಿಯನ್ನು ನೀಡಿ. ಪಕ್ಷಿಗಳಿಗೆ ಧಾನ್ಯದ ಕಾಳುಗಳನ್ನು ಹಾಕಿ. 
 
4.ನಿಮ್ಮ ಊರಿನಲ್ಲಿ ಬಾವಿ , ಕೆರೆ , ನದಿ , ಸಾಗರ ಇದ್ದರೆ , ಅಲ್ಲಿನ ಮೀನುಗಳಿಗೆ ಗೋಧಿ ಹಿಟ್ಟಿನ 
ಗೋಲಿಗಳನ್ನು ಮಾಡಿ ಅವುಗಳನ್ನು ಮೀನಯಗಳಿಗೆ ನೀಡಿ. ಇದರಿಂದ ನಿಮ್ಮ ಜೀವನದಲ್ಲಿ 
ಸುಂದರಮಯ ದಿನಗಳು ಪ್ರಾರಂಭವಾಗುತ್ತವೆ
 
5.ಪ್ರತಿನಿತ್ಯ ಊಟಕ್ಕೆ ಕುತಾಗ , ಕಾಗೆ , ಗುಬ್ಬಿ ಮತ್ತು ಇತರ ಪಕ್ಷಿಗಳಿಗೆ ಆಹಾರ ನೀಡಿ. 
 
6.ಮನೆಗೆ ಬಂದ ಅಥಿತಿಗಳನ್ನು ನಿಷ್ಕಾಮವಾಗಿ ಸೇವೆಯನ್ನು ಮಾಡಿ. ಅಥಿತಿದೇವೊಭವ ಎಂದು 
ಹೇಳಲಾಗುತ್ತದೆ .ಅಥಿತಿಗಳು ಸಂತುಷ್ಟರಾದರೆ ಆ ದೇವರು ನಿಮಗೆ ಒಳ್ಳೆಯ ವರಗಳನ್ನು ನೀಡುತ್ತಾನೆ.

ವೆಬ್ದುನಿಯಾವನ್ನು ಓದಿ