ಜ್ಯೋತಿಷ್ಯದ ಪ್ರಕಾರ ದಿನ, ತಿಥಿಯಂದು ಏನನ್ನು ತಿನ್ನಬಾರದು ಎಂದು ತಿಳಿಯಿರಿ

ಶನಿವಾರ, 12 ಜುಲೈ 2014 (17:22 IST)
ಶಾಸ್ತ್ರಗಳಲ್ಲಿ ಖಾಧ್ಯ ಪದಾರ್ಥಗಳ ಸೇವನೆ ಕುರಿತಂತೆ ಕೆಲವು ನಿಯಮಗಳು ಇವೆ. ಬನ್ನಿ ತಿಳಿದುಕೊಳ್ಳೊಣ  ಯಾವ ದಿನ ಮತ್ತು ತಿಥಿ ಅನುಸಾರ ಏನನ್ನು ತಿನ್ನುವುದರಿಂದ ನಿಮಗೆ ನಷ್ಟವಾಗುತ್ತದೆ ಎಂದು ತಿಳಿದುಕೊಳ್ಳೊಣ. 
 
ಸೂರ್ಯಾಸ್ತದ ನಂತರ ಎಳ್ಳಿನ ಯಾವುದೇ ವಸ್ತುವನ್ನು ತಿನ್ನಬಾರದು. 
 
ಅಮವಾಸ್ಯೆ, ರವಿವಾರ ಮತ್ತು ಪೂನಮ್ ಸಮಯದಲ್ಲಿ ಎಳ್ಳಿನ ಎಣ್ಣೆಯ ಸೇವನೆ ಹಾನಿಕಾರಕವಾಗಿದೆ.   
 
ರವಿವಾರ ತುಳಸಿ , ಶುಂಠಿ, ಮೆಣಸಿನಕಾಯಿ ಮತ್ತು ಕೆಂಪು ತರಕಾರಿ ತಿನ್ನಬಾರದು. 
 
ರವಿವಾರ, ಶುಕ್ರವಾರ ಮತ್ತು ಷಷ್ಠಿ ತಿಥಿಯಂದು ನೆಲ್ಲಿಕಾಯಿ ತಿನ್ನಬಾರದು. 
 
ತೃತಿಯಾ ತಿಥಿಯಂದು ತೊಂಡೆಕಾಯಿ ತಿನ್ನಬಾರದು. (ತೃತಿಯಾದಂದು ತೊಂಡೆಕಾಯಿ ತಿನ್ನುವುದರಿಂದ ಶತೃಗಳ ವೃದ್ದಿಯಾಗುತ್ತದೆ) 
 
ಚೌಥಿಯಂದು ಮೂಲಂಗಿ ತಿನ್ನಬಾರದು . (ಚೌಥಿಯಂದು ಮೂಲಂಗಿ ತಿನ್ನುವುದರಿಂದ ಧನ ಹಾನಿಯಾಗುತ್ತದೆ) 
 
ಅಷ್ಟಮಿಯಂದು ತೆಂಗಿನಕಾಯಿ ತಿನ್ನಬಾರದು. (ಅಷ್ಟಮಿಯಂದು ತೆಂಗಿನಕಾಯಿ ತಿಂದರೆ ಬುದ್ದಿ ಮಟ್ಟ ಕಡಿಮೆ ಆಗುತ್ತದೆ ಮತ್ತು ರಾತ್ರಿ ತೆಂಗಿನಕಾಯಿ ತಿನ್ನಬಾರದು) 
 
ತ್ರಯೋದಶೀಯಂದು ಬದನೆಕಾಯಿ ತಿನ್ನಬಾರದು. (ತ್ರಯೋದಶಿಯಂದು ಬದನೆಕಾಯಿ ತಿನ್ನುವುದರಿಂದ ಪುತ್ರನಾಶ ಅಥವಾ ಪುತ್ರನಿಗೆ ದುಖಃವಾಗುತ್ತದೆ)

ವೆಬ್ದುನಿಯಾವನ್ನು ಓದಿ