ಸಿಂಹಲಗ್ನದವರ ಭಾವಾಧಿಪತ್ಯ ಹಾಗೂ ದೈಹಿಕ ಸ್ವರೂಪ

ಶುಕ್ರವಾರ, 21 ನವೆಂಬರ್ 2014 (16:18 IST)
ಸಿಂಹಲಗ್ನ ರಾಶಿಚಕ್ರದಲ್ಲಿ ಐದನೆಯ ಸ್ಥಾನವನ್ನು ಪಡೆಯುತ್ತದೆ.ಇದೊಂದು ಸ್ಥಿರರಾಶಿ.ಪುರುಷರಾಶಿ.ಇದು ಸೂರ್ಯನ ಸ್ವಗೃಹ,ಚಂದ್ರ,ಗುರು,ಮಂಗಳ ಮತ್ತು ಬುಧ ಈ ನಾಲ್ಕು ಗ್ರಹಗಳು ಇದರೊಂದಿಗೆ ಮಿತ್ರತ್ವ ಪಡೆದಿರುತ್ತವೆ.ಉಳಿದ ಗ್ರಹಗಳಾದ ರಾಹು,ಕೇತು,ಶನಿ,ಶುಕ್ರ ಇವರು ಹಗೆಗಳಾಗಿರುತ್ತಾರೆ.
 
ಸಿಂಗಲಗ್ನಕ್ಕೆ ಅಧಿಪತಿಯಾದ ಸೂರ್ಯನಿಗೆ ಚಂದ್ರ,ಗುರು,ಮಂಗಳ ಈ ಮೂವರು ಮಿತ್ರರು.ಶನಿ,ರಾಹು,ಕೇತು,ಶುಕ್ರ ಈ ನಾಲ್ವರು ಶತ್ರುಗಳು.ಬುಧನೊಬ್ಬನೇ ಸೂರ್ಯನಿಗೆ ಸಮನಾದವನು ಎರಡನೇ ಸ್ಥಾನವಾದ ಕನ್ಯೆಗೆ 11ನೇ ಸ್ಥಾನವಾದ ಮಿಥುನಕ್ಕೆ ಅಧಿಪತಿ ಬುಧನು.
3ನೇ ಸ್ಥಾನವಾದ ತುಲಾ ರಾಶಿಗೆ 10ನೇ ಸ್ಥಾನವಾದ ವೃಷಭಕ್ಕೆ ಶುಕ್ರನು ಅಧಿಕಾರಿಯಾಗಿರುತ್ತಾನೆ.
 
ಅದ್ದರಿಂದ ಶುಕ್ರನು ಸಹೋದರ ಸ್ಥಾನಾಧಿಪತಿಯಾಗಿಯೂ,ಜೀವನಾಧಿಪತಿಯಾಗಿಯೂ ಬರುತ್ತಾನೆ.4ನೇ ಸ್ಥಾನವಾದ ವೃಶ್ಚಿಕಕ್ಕೆ 9ನೇ ಸ್ಥಾನವಾದ ಮೇಷಕ್ಕೆ ಒಡೆಯ ಮಂಗಳ.
 
ಐದನೇ ಸ್ಥಾನವಾದ ಧನುಸ್ಸು ರಾಶಿಗೆ ಮತ್ತು 8ನೇ ಸ್ಥಾನವಾದ ಮೀನಕ್ಕೆ ಗುರು ಒಡೆಯ.ಇವನೇ ಪಂಚಮಾಧಿಪತಿ ಮತ್ತು ಅಷ್ಟಮಾಧಿಪತಿ ಎಂಬ ನೆಲೆಯನ್ನು ಪಡೆಯುತ್ತಾನೆ.6ನೇ ಸ್ಥಾನವಾದ ಮಕರಕ್ಕೆ ಮತ್ತು 7ನೇ ಸ್ಥಾನವಾದ ಕುಂಭಕ್ಕೆ ಅಧಿಪತಿ ಶನಿ.ಆದ್ದರಿಂದ ಶನಿ ಶತ್ರು ಸ್ಥಾನಾಧಿಪತಿಯಾಗಿ,ಕಳತ್ರಸ್ಥಾನಾಧಿಪತಿಯಾಗಿಯೂ ಬರುತ್ತಾನೆ.12ನೇ ಸ್ಥಾನಕ್ಕೆ ಒಡೆಯ ಚಂದ್ರ.ಇವನೇ ವ್ಯಯಾಧಿಪತಿ.
 
ಸಿಂಹಲಗ್ನಕ್ಕೆ ಲಗ್ನಾಧಿಪತಿಯಾದ ಸೂರ್ಯ,ಪಂಚಮಾಧಿಪತಿಯಾದ ಗುರು,ಭಾಗ್ಯಾಧಿಪತಿಯಾದ ಮಂಗಳ ಶುಭಗ್ರಹಗಳು.ಇವರು ಮೂವರು ಕೂಡಿದ್ದರೆ ಜಾತಕರಿಗೆ ವಿಶೇಷ ರಾಜಯೋಗ ಫಲಗಳುಂಟಾಗುತ್ತದೆ.
 
ಬುಧ ಮತ್ತು ಶನಿ ನೀಚನಾಗಿರುತ್ತಾರೆ.ಚಂದ್ರ ವ್ಯಯಾಧಿಪತಿಸ್ಥಾನವನ್ನು ಪಡೆಯುವುದರಿಂದ ಒಳಿತು ಉಂಟುಮಾಡುವುದಿಲ್ಲ.
 
ಅಷ್ಟಮಾಧಿಪತ್ಯ ಪಡೆಯುವ ಗುರು 3ನೇ ಸ್ಥಾನದ ಅಧಿಪತಿಯಾದ ಶುಕ್ರ ಸಿಂಹ ಲಗ್ನಕ್ಕೆ ಮಾರಕಾಧಿಪತಿಗಳು.ಈ ಜಾತಕರಿಗೆ ಗುರು ಶುಭಕರವಾಗಿರುವುದರಿಂದ ಇವನ ದೆಶೆಯಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಸೇರಿಸಿ ಕೊಡುತ್ತಾರೆ.ಶನಿ,ಬುಧ,ಶುಕ್ರ ಇವರ ದಶೆ ಭುಕ್ತಿ ಕಾಲಗಳಲ್ಲಿ ಮಾರಕಕ್ಕೆ ಸಮನಾದ ಗಂಡಾಂತರ ನೀಡುತ್ತಾರೆ.
 
ಈ ಲಗ್ನದಲ್ಲಿ ಜನಿಸಿದವರು ಸ್ವಲ್ಪ ಎತ್ತರವಾಗಿರುತ್ತಾರೆ.ಆರಂಭದಲ್ಲಿ ತೆಳುವಾದ ಶರೀರವನ್ನು ಹೊಂದಿದ್ದು,ಆನಂತರ ದೃಢವಾಗಿ ಬೆಳೆಯುತ್ತಾರೆ.ಸದಾ ನಗುಮುಖದಿಂದ ಕೂಡಿದವರಾಗಿರುತ್ತಾರೆ.

ವೆಬ್ದುನಿಯಾವನ್ನು ಓದಿ