ಪ್ರಾಣಿಗಳಲ್ಲಿರುತ್ತಾ ಸ್ವಚ್ಛತಾ ಪ್ರಜ್ಞೆ ?: ಈ ವಿಡಿಯೋವನ್ನೊಮ್ಮೆ ನೋಡಿ ತೀರ್ಮಾನಿಸಿ

ಸೋಮವಾರ, 12 ಜನವರಿ 2015 (12:42 IST)
ಬುದ್ಧಿ ಇರುವ ಮನುಷ್ಯರಲ್ಲೇ ಎಲ್ಲೆಂದರಲ್ಲಿ ಉಗುಳುವ, ಮೂತ್ರ, ಮಲ ವಿಸರ್ಜಿಸುವ, ಕಸ ಎಸೆಯುವ ದುರಭ್ಯಾಸವನ್ನು ತೋರುತ್ತಾರೆ. ಅದರಲ್ಲೂ ಭಾರತೀಯರಂತೂ ಇಂತಹ ದುರಭ್ಯಾಸಕ್ಕೆ ಕುಖ್ಯಾತರಾಗಿದ್ದಾರೆ.ಆದರೆ ಈ ವಿಡಿಯೋವನ್ನೊಮ್ಮೆ ನೋಡಿ. ಮುಗ್ಧ ಪ್ರಾಣಿಯ ಸ್ವಚ್ಛತಾ ಪ್ರಜ್ಞೆಯನ್ನು ನೋಡಿ ನೀವು ದಂಗಾಗುತ್ತೀರಾ.

 
ದಕ್ಷಿಣ ಆಫ್ರಿಕಾದಲ್ಲಿ ನಡೆದಿರುವ ಈ ಅಪರೂಪದ ಸನ್ನಿವೇಶ ಸಿಸಿ ಟಿವಿ ಕ್ಯಾಮರಾ ಒಂದರಲ್ಲಿ ಸೆರೆಯಾಗಿದೆ. ಮರಿ ಆನೆ ಕಸ ಎತ್ತಿ ಡಸ್ಟ್ ಬಿನ್‌ಗೆ ಹಾಕುತ್ತಿರುವ ಈ ದೃಶ್ಯಾವಳಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ನೀವು ನೋಡಿ ಆನಂದಿಸಿ. ನಿಮಗೂ ಎಲ್ಲೆಂದರಲ್ಲಿ ಕಸ ಎಸೆಯುವ ದುರಭ್ಯಾಸವಿದ್ದರೆ ಅದನ್ನು ಬಿಟ್ಟು ಬಿಡುವ ಸಂಕಲ್ಪ ಮಾಡಿ....ನಮ್ಮ ನಮ್ಮ ಮನೆ, ಊರುಕೇರಿ, ದೇಶವನ್ನು  ಸ್ವಚ್ಛವಾಗಿರಿಸೋಣ....
 
 

ವೆಬ್ದುನಿಯಾವನ್ನು ಓದಿ