ಅಚ್ಚರಿ! ಮಗುವಿನ ಜೊತೆ ಆಟವಾಡಿದ ನಾಲ್ಕು ಕೊಬರಾ ಹಾವುಗಳು

ಮಂಗಳವಾರ, 22 ಜುಲೈ 2014 (15:19 IST)
ಕಿಂಗ್‌ ಕೊಬ್ರಾ ಈ ಹೆಸರು ಕೇಳಿದವರಿಗೆ ನಡುಕ ಉಂಟಾಗುತ್ತದೆ. ಧೈರ್ಯವಂತ ಜನರಿಗೂ ಕೂಡ ಭಯ ಹುಟ್ಟಿಸುತ್ತದೆ.  ಏಕೆಂದರೆ ಈ ಕೊಬ್ರಾ ಹೆಸರಿನ ಹಾವು ಎಲ್ಲಕ್ಕಿಂತ ವಿಷಪೂರಿತ ಮತ್ತು ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ಆದರೆ ಒಂದಲ್ಲ , ಎರಡಲ್ಲ, ಒಟ್ಟು ನಾಲ್ಕು ಹಾವುಗಳು ಒಂದು ಮಗುವನ್ನು ಸುತ್ತುವರೆದಿವೆ. ನೋಡಿದವರು ಮೂರ್ಛೆ ಹೋಗುವುದು  ಖಚಿತ. ಈ ಹಾವುಗಳು ಮಗುವಿನ ಜೊತೆಗೆ ಆಡುವುದರೊಂದಿಗೆ ಸಂರಕ್ಷಣೆಯನ್ನು ಮಾಡುತ್ತವೆ.
 
ಸಾಮಾಜಿಕ ಜಾಲ ತಾಣಗಳಲ್ಲಿ ಈ ಮಗು ಮತ್ತು ಹಾವಿನ ಆಟದ ವಿಡಿಯೋ ದೃಶ್ಯ ಹರಿದಾಡುತ್ತಿದೆ. ಈ ಹಾವು ಮತ್ತು ಮಗುವಿನ ಸ್ನೇಹದ ವಿಡಿಯೋದಲ್ಲಿ ಮೊದಲು ಹಾವಿನ ಜೊತೆಗೆ ಮಗು ಆಟವಾಡುತ್ತದೆ.  ನಂತರ ಮಗುವಿಗೆ ನಿದ್ದೆ ಬರುತ್ತದೆ ಮತ್ತು ಮಲಗಿ ಬಿಡುತ್ತದೆ. ಮಗು ಮಲಗಿದ ನಂತರವೂ ಕೂಡ ಆ ನಾಲ್ಕೂ ಹಾವುಗಳು ಮಗುವಿನ ಸಂರಕ್ಷಣೆಯ ಹೊಣೆಯನ್ನು ನಿಭಾಯಿಸುತ್ತವೆ. 
  
ವಿಡಿಯೋ ಎಲ್ಲಿಯದ್ದು ಮತ್ತು ಯಾರು ತೆಗೆದದ್ದು ಎಂಬುದರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ , ವಿಡಿಯೋ ಯೂಟ್ಯೂಬ್‌ ಸಹಿತ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ಕುರಿತು ಚರ್ಚೆ ಕೂಡ ಪ್ರಾರಂಭವಾಗಿದೆ.  ಈ ವಿಡಿಯೋ ಯಾರೋ ಮಾಟಗಾರರು ತೆಗೆದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂದರೆ ಹಾವನ್ನು ಸಾಕುವವರು ಈ ವಿಡಿಯೋ ತಗೆದಿದ್ದಾರೆ ಎನ್ನಲಾಗುತ್ತಿದೆ.  
 
ವಿಷಯ ಏನೇ ಇರಲಿ ಆದರೆ ಈ ವಿಡಿಯೋದಿಂದ ಮನುಷ್ಯ ಮತ್ತು ಪ್ರಾಣಿಗಳ ಸ್ನೇಹ ಮತ್ತು ಪ್ರೇಮ ಸಂಬಂಧದ ಹೊಸ ಪರಿಭಾಷೇ ನೀಡುತ್ತದೆ.  

ವೆಬ್ದುನಿಯಾವನ್ನು ಓದಿ