ದೆವ್ವವೊಂದು ಪ್ರೊಫೆಸರ್‌ಗೆ ಸೆಕ್ಸ್‌ಗೆ ಅಹ್ವಾನಿಸುತ್ತಿದೆ

ಮಂಗಳವಾರ, 29 ಜುಲೈ 2014 (18:43 IST)
ಮಧ್ಯ ಪ್ರದೇಶದ ಸೈಬರ್‌ ಸೆಲ್‌ ಹೆಡ್‌ಕ್ವಾರ್ಟರ್‌‌‌‌‌ ಪೊಲೀಸರು ಇತ್ತೀಚಿನ ದಿನಗಳಲ್ಲಿ ವಿಚಿತ್ರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಒಬ್ಬ ಮಹಿಳೆ ತಮ್ಮ ಜೊತೆಗೆ ಸೆಕ್ಸ್‌ ಮಾಡಲು ಕೆಟ್ಟ ಆತ್ಮಗಳನ್ನು ಬಿಟ್ಟಿದ್ದಾಳೆ ಎಂದು ಪ್ರೊಫೆಸರ್ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
 
ಇಂದೋರ್‌ನಲ್ಲಿ ವಾಸವಾಗಿರುವ 66 ವರ್ಷಧ ಪ್ರೊಫೆಸರ್ ಚಂದ್ರ ಪ್ರಕಾಶ್ ತ್ರಿವೇದಿ ವೈದಿಕ ವಿಜ್ಞಾನ ಕುರಿತಂತೆ 10 ಪುಸ್ತಕಗಳನ್ನು ಬರೆದ ಖ್ಯಾತ ಲೇಖಕರಾಗಿದ್ದರಿಂದ, ಅವರಿಂದ ಬಂದ ದೂರನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಲಾಗುವುದಿಲ್ಲ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
 
 ' ಮಹಿಳೆ ಗಾಳಿಯ ಒತ್ತಡದ ಮೂಲಕ ಚುಂಬಕ ಥೆರಪಿ ಬಳಸಿ ನನ್ನೊಂದಿಗೆ ಸೆಕ್ಸ್‌ ಮಾಡಲು ಪ್ರಯತ್ನಿಸುತ್ತಿದ್ದಾಳೆ. ರಾತ್ರಿ ಸಮಯದಲ್ಲಿ ನನ್ನೊಂದಿಗೆ ಯಾರಾದರೂ ಇರಬಹುದು ಎಂದು ಅನ್ನಿಸುತ್ತದೆ . ನನ್ನ ಈ ಮಾತನ್ನು ಯಾರು ನಂಬುವುದಿಲ್ಲ ಇದರಿಂದಾಗಿ ಹಲವಾರು ಬಾರಿ ನಾನು ಮನೆಯಿಂದ ಓಡಿ ಹೋಗಿದ್ದೇನೆ. ಪ್ರೊಫೆಸರ್‌ಗೆ ಸಂಶಯವಿದ್ದ ಮಹಿಳೆ ಕಳುಹಿಸಿದ ಇ-ಮೇಲ್‌‍ಗಳನ್ನು ಕೂಡಾ ಸಂಗ್ರಹಿಸಿದ್ದಾರೆ. ಮಹಿಳೆ ಓರಿಸ್ಸಾ ಮೂಲದವಳು ಎಂದು ಪ್ರೊಫೆಸರ್‌ ತಿಳಿಸಿದ್ದಾರೆ
 
ಪ್ರಕರಣ ಯಾವ ರೀತಿಯದ್ದಾದರೂ ಆಗಿರಬಹುದು. ಅತಿ ಹೆಚ್ಚು ಚಿಂತನೆ ಮಾಡುವ ಮನಸ್ಸಿನ ಕಲ್ಪನೆ ಅಥವಾ ಮಾದಕ ವಸ್ತುಗಳ ಪ್ರಭಾವ ಅಥವಾ ಪ್ರಕರಣದಲ್ಲಿ ಸತ್ಯಾಂಶ ಕೂಡಾ ಇರಬಹುದು. ಯಾವುದೇ ರೀತಿಯಾಗಿದ್ದರೂ ನಾವು ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಇದಕ್ಕು ಮೊದಲು 2011 ರಲ್ಲಿ ಒಂದು ಪ್ರಕರಣದಲ್ಲಿ ಸಾರ್ವಜನಿಕ ಅಹವಾಲಿನ ಸಂದರ್ಭದಲ್ಲಿ ದೆವ್ವ ನನ್ನನ್ನು ಹಿಂಬಾಲಿಸುತ್ತದೆ. ನನಗೆ ಮಲಗಲು ಕೂಡಾ ಬಿಡುತ್ತಿಲ್ಲ ಎಂದು ರಾಮಚಂದ್ರ ಎನ್ನುವವರು ಸಲ್ಲಿಸಿದ ದೂರನ್ನು ಸ್ವೀಕರಿಸಲು ಪೊಲೀಸರು ಆರಂಭದಲ್ಲಿ ನಿರಾಕರಿಸಿದ್ದರು. ನಂತರ ಡಿಜಿಪಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ