ಹನುಮಾನ ದೇವರ ಭಕ್ತರು ಈ ರೀತಿ ಮಾಡಿ

ಶನಿವಾರ, 12 ಜುಲೈ 2014 (17:12 IST)
1. ಹನುಮಾನ ದೇವರ ಪೂಜೆಗಾಗಿ ಮಂಗಳವಾರ ಶ್ರೇಷ್ಠ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಮತ್ತು ಶನಿವಾರ ಕೂಡ ಹನುಮಂತನ ವಾರವಾಗಿದೆ. ಈ ದಿನ ಹನುಮಾನ ದೇವರ ಪೂಜೆ ಮಾಡಿದರೆ ಹನುಮಾನ ಪ್ರಸನ್ನನಾಗುತ್ತಾನೆ. 
  
2. ಸಾಧನೆ  ಮಾಡುವಾಗ ಬ್ರಹ್ಮಚರ್ಯ ಅನಿವಾರ್ಯವಾಗಿದೆ. ಸ್ವಯಂ ಹನುಮಾನ ಬ್ರಹ್ಮಚರ್ಯರಾಗಿದ್ದಾರೆ. ಇದಕ್ಕಾಗಿ ಸಾಧನೆ ಮಾಡುವ ಸಾಧಕರು ಪೂರ್ಣ ಪ್ರಮಾಣದ ಬ್ರಹ್ಮಚರ್ಯ ಪಾಲನೆ ಮಾಡಬೇಕು. 
 
3. ಹನುಮಾನನಿಗೆ ಕಮಲ, ಗದೆ ಮತ್ತು ಸೂರ್ಯಕಾಂತಿ ಹೂವು ಅರ್ಪಿಸಿ. ಈ ಹೂವು ಕೆಂಪು ಅಥವಾ ಹಳದಿ ಆಗಿದ್ದರೆ ಇನ್ನು ಉತ್ತಮ. 
 
4. ನೀವು ದಿನದಲ್ಲಿ ಪೂಜೆ ಮಾಡುತ್ತಿದ್ದರೆ , ತೆಂಗಿನಕಾಯಿ, ಬೆಲ್ಲ , ರೊಟ್ಟಿ , ಚುರಮುರಿ , ಲಡ್ಡು ಮತ್ತು ದಪ್ಪ ರೊಟ್ಟಿ ಅರ್ಪಿಸಬೇಕು. ರಾತ್ರಿ ಸಮಯ ಪೂಜೆ ಮಾಡುವವರು ಮಾವು ಅಥವಾ ಪೇರಲ ಹಣ್ಣು ಅರ್ಪಿಸಬೇಕು. 
 
5. ಹನುಮಾನನ ಪೂಜೆಗಾಗಿ ತರುವ ಶುದ್ದ ಸಾಮಗ್ರಿಗಳ ಅಂದರೆ ಬೇರೆಕಡೆ ಬಳಸಿರಬಾರದು. ಸಾಮಗ್ರಿ ಗಳು ಹೆಚ್ಚಿಗಿರಬೇಕೆಂದಿಲ್ಲ. ಆದರೆ ಯಾವುದನ್ನು ಅರ್ಪಿಸುತ್ತಿರೋ ಅದು ಶುದ್ಧ ಮತ್ತು ತಾಜಾವಾಗಿರಬೇಕು.

ವೆಬ್ದುನಿಯಾವನ್ನು ಓದಿ