ವಿಸ್ಮಯ : ಈ ಮೀನಿಗಿವೆ ನಾಲ್ಕು ಕಣ್ಣುಗಳು

ಮಂಗಳವಾರ, 22 ಏಪ್ರಿಲ್ 2014 (17:42 IST)
ಪ್ರಕೃತಿ ಒಂದು ರೀತಿಯ ವಿಸ್ಮಯವಾಗಿದೆ . ಒಂದೊಂದು ಪ್ರಾಣಿಗಳಲ್ಲಿ ಕೂಡ ವಿಶೇಷತೆಗಳಿವೆ. 
 
ನಾವು ಇಲ್ಲಿ ಹೇಳುತ್ತಿರುವುದೇನೆಂದರೆ, ಒಂದು ಮೀನಿಗೆ ಎರಡಲ್ಲ , ಮೂರಲ್ಲ ಒಟ್ಟು ನಾಲ್ಕು ಕಣ್ಣುಗಳಿವೆ. ನೋಡಲು ಯಾವುದಾದರು ಕಾಜಿನ ತರಹ ಕಾಣುತ್ತದೆ. 
 
ಗ್ಲಾಸಹೆಡ್‌‌ ಬಾರಂಲೆ ಎನ್ನುವ ಮೀನು ಸಮುದ್ರದಲ್ಲಿ 800 ರಿಂದ 1000 ಮೀಟರ್‌ ಒಳಗಡೆ ಇರುತ್ತವೆ. 
ಯಾವುದೇ ಮೀನಿಗೆ ಕೇವಲ ಎರಡು ಕಣ್ಣುಗಳು ಇರುತ್ತವೆ, ಆದರೆ ಗ್ಲಾಸಹೆಡ್ ಮೀನಿಗೆ ಎರಡೂ ಕಡೆ ಎರಡೇರಡು ಕಣ್ಣುಗಳಿವೆ. 
 
ಈ ತರಹದ ಮೀನಿ ದಕ್ಷಿಣ ಆಫ್ರಿಕಾದ ಕೆಪಟಾವುನ್‌‌ನನಿಂದ ಅಂಟಲಾಂಟಿಕ್‌‌ನಲ್ಲಿ ಇವೆ. ಈ ತರಹದ ಮೀನುಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌‌‌ನ ನಡುವಿನ ಸಾಗರದಲ್ಲಿ ಸಿಗುತ್ತವೆ. 
 
ವಿಜ್ಞಾನಿಗಳ ಪ್ರಕಾರ ಈ ತರಹದ ಮೀನುಗಳಿಗೆ ನಾಲ್ಕೂ ಕಡೆಗೆ  ಕಣ್ಣುಗಳು ಇರುತ್ತವೆ ಮತ್ತು ಒಂದೇ ಬಾರಿಗೆ ನಾಲ್ಕೂ ಕಡೆ ನೋಡುತ್ತದೆ. 
 
ಎದುರಿಗಿರುವ ಎರಡು ಕಣ್ಣುಗಳಿಂದ ಎದುರಿನಿಂದ ಜಲ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತದೆ ಮತ್ತು ತನ್ನ ಹಿಂದ ಬರುತ್ತಿರುವ ಜಲಚರಗಳನ್ನು ಹಿಂದಿನ ಎರಡು ಕಣ್ಣಿನಿಂದ ನೊಡುತ್ತವೆ. ಈ ಹಿಂಬದಿ ಕಣ್ಣಿನಿಂದ ನೀರಿನಲ್ಲಿರುವ ವಸ್ತುಗಳನ್ನು ಕೂಡ ನೋಡುತ್ತದೆ. 

ವೆಬ್ದುನಿಯಾವನ್ನು ಓದಿ