ಫೆಂಗ್ ಶುಯಿ -ಮನೆ

ಬುಧವಾರ, 19 ನವೆಂಬರ್ 2014 (16:39 IST)
1. ಮನೆಯ ಮುಂಬಾಗಿಲಿನ ಮುಂದೆ ಶೂ ಅಥವಾ ಚಪ್ಪಲಿಗಳನ್ನು ಇರಿಸ ಬೇಡಿ. ಯಾಕೆಂದರೆ ಫೆಂಗ್‌‌ಶುಯಿ ಪ್ರಕಾರ ಚಿ(ಚೈತನ್ಯ)ವು ಗಾಳಿಯ ಮೂಲಕ ಮನೆಯ ಒಳಗೆ ಪ್ರವೇಶಿಸುವಾಗ, ಅದರೊಂದಿಗೆ ಚಪ್ಪಲಿಗಳ ದುರ್ಗಂಧವು ಸೇರಿಕೊಳ್ಳುವುದು,ಇದರಿಂದಾಗಿ ಋಣಾತ್ಮಕವಾದ ಪರಿಣಾಮವು ಉಂಟಾಗಿ ಕುಟುಂಬದಲ್ಲಿ ರೋಗಗಳು ತಲೆದೋರುವುವು.
 
2.ಮನೆಯಲ್ಲಿ ನೀರಿನ ಹೂಜಿ ಅಥವಾ ಮೀನಿನ ಟ್ಯಾಂಕ್‌ನಲ್ಲಿ ನೀರು ಸದಾ ತುಂಬಿರಲಿ. ಯಾಕೆಂದರೆ ಚಿ(ಚೈತನ್ಯ)ವು ಮನೆಯೊಳಗೆ ಬಂದು ನೀರಿನಲ್ಲಿ ವಿಲೀನವಾಗಿ ತಂಗಿಕೊಳ್ಳುತ್ತದೆ. ನೀರು ಇಲ್ಲದೇ ಇದ್ದಲ್ಲಿ ಅದು ವಾಯುವಿನಲ್ಲಿ ಹರಡಿ ಅದೃಶ್ಯವಾಗುವುದು.
 
3.ಮಲಗುವ ಕೋಣೆಯಲ್ಲಿ ಟಿ.ವಿ ಸೆಟ್ ಇರಿಸಬೇಡಿ. ಒಂದು ವೇಳೆ ಇರಿಸಿದ್ದರೆ ಅದರ ಉಪಯೋಗದ ನಂತರ ಪ್ಲಾಸ್ಟಿಕ್‌ನಿಂದ ಅದನ್ನು ಮುಚ್ಚಿರಿ, ಬಟ್ಟೆಯಿಂದ ಮುಚ್ಚುವುದು ಒಳ್ಳೆಯದಲ್ಲ.
 
4.ಹಾಸಿಗೆಯ ವಿರುದ್ಧವಾಗಿ ಕನ್ನಡಿಯನ್ನಿಡ ಬೇಡಿ.ಇದು ನಿಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಪ್ರವೇಶಕ್ಕೆ ಎಡೆ ಮಾಡಿ ಕೊಡುತ್ತದೆ.ಆದುದರಿಂದ ಮಲಗುವ ಕೋಣೆಯಲ್ಲಿ ಕನ್ನಡಿ ಇಡಲೇ ಬೇಡಿ.
 
5.ಮನೆಯ ಅಡುಗೆ ಕೋಣೆಯಲ್ಲಿರುವ ಸ್ಟೌ ಅಥವಾ ಒಲೆಗೆ ವಿರುದ್ಧವಾಗಿ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ವಾಶ್ ಬೇಸಿನ್ ಮತ್ತು ಶೌಚಾಲಯ ಇರಕೂಡದು. ಯಾಕೆಂದರೆ ಅಗ್ನಿ ಮತ್ತು ನೀರು ವಿರುದ್ದ ದೆಶೆಯಲ್ಲಿದ್ದರೆ ಕುಟುಂಬದಲ್ಲಿ ವೈಮನಸ್ಸು ಉಂಟಾಗಲು ಸಾಧ್ಯತೆಯಿರುತ್ತದೆ.
 
6.ಹಾಸಿಗೆಯ ಕೆಳಭಾಗದಲ್ಲಿ ಮಕ್ಕಳನ್ನು ಮಲಗಿಸ ಬಾರದು ಯಾಕೆಂದರೆ ಶುದ್ಧವಾದ ಚಿ(ಚೈತನ್ಯ)ಗಾಳಿಯು ಹಾಸಿಗೆಯಡಿಯಲ್ಲಿ ಬೀಸುವುದಿಲ್ಲ, ಕಾರಣ ಮಕ್ಕಳು ಅಸ್ವಸ್ಥೆಗೊಳಗಾಗುತ್ತಾರೆ.
 
7.ಭೋಜನದ ಮೇಜು ಚಂದ್ರಕಾಂತ ಶಿಲೆಯಿಂದ ಮಾಡಿದ್ದರೆ ಅದು ರೋಗಗಳಗೆ ಆಹ್ವಾನ ನೀಡುತ್ತದೆ. ಭೋಜನಕ್ಕೆ ಮರದ ಮೇಜನ್ನು ಬಳಸುವುದರಿಂದ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 
8.ಯಾವತ್ತೂ ದಟ್ಟ ಕೆಂಪು ಬಣ್ಣದ ಸೋಫಾವನ್ನು ಬಳಸಬೇಡಿ.ಫೆಂ ಗ್‌ಶುಯಿ ಪ್ರಕಾರ ಇದು ಅಗ್ನಿಯನ್ನು ಪ್ರತಿನಿಧೀಕರಿಸುತ್ತದೆ ಮತ್ತು ಇದು ಕೆಲಸದೊತ್ತಡ, ಮಾನಸಿಕ ತೊಂದರೆಗಳನ್ನು ಉಂಟು ಮಾಡುತ್ತದೆ.
 
9.ಯಾವಾಗಲೂ 20 ನಿಮಿಷಗಳ ಕಾಲ ನಿಮ್ಮ ಮಲಗುವ ಕೋಣೆಯ ಗವಾಕ್ಷಗಳನ್ನು ತೆರೆದಿಡಿ. ಶುದ್ಧವಾದ ಚಿ(ಚೈತನ್ಯ) ಗಾಳಿಯು ಒಳ ಬಂದು ಉತ್ತಮವಾದ ವಾತಾವರಣವನ್ನು ನಿರ್ಮಿಸಲು ಸಹಾಯವಾಗುತ್ತದೆ.
 
10.ಓದಲು ಕುಳಿತುಕೊಳ್ಳುವ ಸ್ಥಳದಲ್ಲಿ ಗೋಡೆಗೆ ಆಧಾರವಾಗಿ, ಅಂದರೆ ಗೋಡೆಗೆ ಬೆನ್ನಟ್ಟು ಕುಳಿತುಕೊಳ್ಳುವುದರಿಂದ ಮಾನಸಿಕ ದೃಢತೆ ಹೆಚ್ಚುವುದು.ಗಟ್ಟಿಯಾದ ಗೋಡೆಯ ಆಧಾರವು ಮಾನಸಿಕ ಆಧಾರ ಮತ್ತು ಸ್ವಾಸ್ಥ್ಯದ ಮೇಲೆ ಪ್ರಭಾವ ಬೀರುವುದು.

ವೆಬ್ದುನಿಯಾವನ್ನು ಓದಿ