ಮನೆ- ಫೆಂಗ್ ಶುಯಿ ಟಿಪ್ಸ್

ಬುಧವಾರ, 19 ನವೆಂಬರ್ 2014 (17:09 IST)
ನಿಮ್ಮ ಮನೆಯ ಮುಖ್ಯದ್ವಾರದ ಮುಂದೆ ಯಾವುದೇ ಚಪ್ಪಲಿ ಮತ್ತು ಶೂಗಳು ಹರಡಿರಬಾರದು. ಸಾಧ್ಯವಾದರೆ ಅದನ್ನು ತೆಗೆದುಬಿಡಿ. ನಿಮ್ಮ ಮುಖ್ಯದ್ವಾರದ ಮುಂದಿನ ಸ್ಥಳವು ಸ್ವಚ್ಛವಾಗಿರಲಿ.
 
ನಿಮ್ಮ ಮನೆಯ ಮಲಗುವ ಕೋಣೆಯಲ್ಲಿ ಟಿವಿ ಇರಬಾರದು. ನಿಮಗೆ ಈ ಹವ್ಯಾಸದಿಂದ ದೂರ ಇರಲಾಗದಿದ್ದರೆ, ಟಿವಿ ನೋಡಿದ ನಂತರ ಅದನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿಡಿ.
 
ನಿಮ್ಮ ಮಲಗುವ ಹಾಸಿಗೆಯ ಎದುರು ಅಥವಾ ಬದಿಗಳಲ್ಲಿ ಯಾವುದೇ ಕನ್ನಡಿ ಇರಬಾರದು. ಆದ್ದರಿಂದ ನಿಮಗೆ ಬೇಕಾದಲ್ಲಿ, ಹಾಗೂ ಪ್ರಮುಖವಾಗಿ ನಿಮ್ಮ ಮಲಗುವ ಕೋಣೆಯಲ್ಲಿ ಕನ್ನಡಿ ಇಡಬೇಡಿ.
 
ನಿಮ್ಮ ಮನೆಯ ಅಡುಗೆ ಕೋಣೆಯ ಒಲೆಯ ಎದುರು ರೆಫ್ರಿಜರೇಟರ್, ವಾಶಿಂಗ್ ಮೆಷಿನ್, ವಾಶ್ ಬೇಸಿನ್ ಅಥವಾ ಬಚ್ಲಲು ಮನೆ ಇರಬಾರದು. ನೀರು ಮತ್ತು ಬೆಂಕಿ ಮಿಶ್ರಣವು ಕುಟುಂಬಕ್ಕೆ ಒಳ್ಳೆಯದಲ್ಲ.
 
ಮನೆಯಲ್ಲಿ ಮಕ್ಕಳು ನೆಲದ ಮೇಲೆಯೇ ಹಾಸಿಗೆಯಲ್ಲಿ ಮಲಗಲಿ. ಇದು ಅವರು ಮಂಚದಿಂದ ಬೀಳುವುದನ್ನು ತಪ್ಪಿಸುವುದಲ್ಲದೇ ಅವರು ಆಗಾಗ್ಗೆ ಅನಾರೋಗ್ಯ ಪೀಡಿತರಾಗದಂತೆಯೂ ರಕ್ಷಿಸುತ್ತದೆ.
 
ಹಾಸಿಗೆಯ ಹಿಂದೆ ಯಾವಾಗಲೂ ಗಟ್ಟಿಯಾದ ಗೋಡೆಯಿರಬೇಕು. ಇದು ನೀವು ಸುಖವಾಗಿ ನಿದ್ದೆ ಮಾಡುವಂತೆ ಪ್ರೇರೇಪಿಸುತ್ತದೆ ಜೊತೆಗೆ ನಿಮ್ಮ ಎಲ್ಲಾ ಒತ್ತಡಗಳನ್ನು ನಿವಾರಿಸುತ್ತದೆ.
 
ನೀವು ತೀರಾ ಕೆಲಸದೊತ್ತಡದಿಂದ ಬಳಲುತ್ತಿದ್ದರೆ ಇದು ನಿಮ್ಮ ಅಡುಗೆ ಕೋಣೆಯಲ್ಲಿರುವ ಮಾರ್ಬಲ್ ಟೇಬಲ್‌ನ ಕಾರಣದಿಂದ ಇರಬಹುದು. ಅದನ್ನು ಮರದ ಟೇಬಲ್‌ಗೆ ಬದಲಾಯಿಸಿ.
 
ನಿಮ್ಮ ಮಗುವು ಮಲಗುವ ಕೋಣೆಯಲ್ಲಿ ಹೆಚ್ಚಾಗಿ ಅನಾರೋಗ್ಯಪೀಡಿತರಾಗುತ್ತಿದ್ದರೆ, ಅಲ್ಲಿ ಆರು ಲೋಹದ ಕೋಲುಗಳನ್ನು ನೇತು ಹಾಕಿ. ಗಾಳಿಯಾಡದಿದ್ದರೆ ನೀವೇ ಕೈಯಿಂದ ಆಡಿಸಿದರಾಯಿತು
 
ಕೆಂಪು ಸೋಫಾ ಸೆಟ್ ಅನ್ನು ಬಳಸಬೇಡಿ. ಕೆಂಪು ಬಣ್ಣವು ಬೆಂಕಿಯನ್ನು ಸೂಚಿಸುತ್ತದೆ, ಮತ್ತು ಫೆಂಗ್ ಶೂಯಿಯ ಪ್ರಕಾರ ಕೆಲವು ಪ್ರದೇಶಗಳು ಕೆಂಪು ಬಣ್ಣವನ್ನು ಒಳಗೊಳ್ಳುವಂತಿಲ್ಲ.
 
ಯಾವಾಗಲೂ ನಿಮ್ಮ ಮಲಗುವ ಕೋಣೆಯ ಕಿಟಕಿಯನ್ನು ಹೊಸ ಗಾಳಿಯು ಒಳಕ್ಕೆ ಬರುವಂತೆ ದಿನಕ್ಕೆ ಸುಮಾರು 20 ನಿಮಿಷಗಳವರೆಗೆ ತೆರೆದಿಡಿ. ಈ ಹೊಸ ಶಕ್ತಿಯು ನಿಮಗೆ ಒಳ್ಳೆಯದನ್ನುಂಟುಮಾಡುತ್ತದೆ.
 
ಮೂರು ಚೈನೀಸ್ ನಾಣ್ಯಗಳನ್ನು ಕೆಂಪು ರಿಬ್ಬನ್‌ನಲ್ಲಿ ಸುತ್ತಿ ಅದನ್ನು ನಿಮ್ಮ ಮುಂಭಾಗದ ಬಾಗಿಲಿನ ಹಿಂದುಗಡೆಯ ಹ್ಯಾಂಡಲ್‌ಗೆ ನೇತು ಹಾಕಿ. ಇದು ಹಣವನ್ನು ಆಕರ್ಷಿಸುತ್ತದೆ.
 
ನಿಮ್ಮ ಮನೆಯಲ್ಲಿ ಯಾವುದೇ ಒಣಗಿದ ಹೂವುಗಳಿದ್ದರೆ ಅದಕ್ಕೆ ಎಸೆದು ಬಿಡಿ. ಅವುಗಳಿಂದ ನಿಮ್ಮ ಸಂಪತ್ತಿಗೆ ಪರಿಣಾಮ ಬೀರಬಹುದು. ಅದರ ಬದಲು ಕೃತಕ ಹೂವುಗಳನ್ನು ಇಟ್ಟುಕೊಳ್ಳಿ.

ವೆಬ್ದುನಿಯಾವನ್ನು ಓದಿ