ಫೇಸ್‌ಬುಕ್ ಅಮ್ಮನಿಗಾಗಿ ಹೆತ್ತಮ್ಮ ಅಪ್ಪನನ್ನು ತೊರೆಯುತ್ತಾನಂತೆ ಈತ!

ಗುರುವಾರ, 18 ಸೆಪ್ಟಂಬರ್ 2014 (12:11 IST)
ಫೇಸ್‌ಬುಕ್ ಅಮ್ಮನಿಗಾಗಿ ಯಾರಾದರೂ ತಮ್ಮ ಸ್ವಂತ ತಂದೆ- ತಾಯಿಗಳನ್ನು ತೊರೆಯಲು ಸಾಧ್ಯವೇ?  ಹೌದು ನಂಬಲು ಕಷ್ಟವಾದ ಈ ನೈಜ ಘಟನೆ ನಡೆದಿದ್ದು ಉತ್ತರ ಪ್ರದೇಶದ ಬರೇಲಿಯಲ್ಲಿ. 

20 ವರ್ಷದ ಯುವಕ ವಿಜಯ್ ಮೌರ್ಯನಿಗೆ  ಫೇಸ್‌ಬುಕ್ ಮೂಲಕ ಮಹಿಳೆಯೊಬ್ಬರ ಪರಿಚಯವಾಯಿತು. ಇಬ್ಬರಲ್ಲಿ ತಿಂಗಳಾನುಗಟ್ಟಲೆ ದೂರವಾಣಿ ಸಂಭಾಷಣೆ ನಡೆದಿದೆ. ಈಗ ಆತ ಆಕೆಯ ಜೊತೆ ಹೋಗಲು ತನ್ನ ಹೆತ್ತವರನ್ನು ಬಿಟ್ಟು ಹೋಗಲು ಮುಂದಾಗಿದ್ದಾನೆ. 
 
ತಮ್ಮ ಮಗನ ಹಠಮಾರಿತನದ ಬಗ್ಗೆ ನೊಂದಿರುವ ತಂದೆ ಬೃಜೇಶ್ ಹೇಳುವ ಪ್ರಕಾರ  ಕಳೆದ ತಿಂಗಳು ಅವರ ಮಗ ತಿಂಗಳಾನುಗಟ್ಟಲೆ ನಾಪತ್ತೆಯಾಗಿದ್ದು. ಅವನ ಬ್ಯಾಂಕ್ ಖಾತೆಯಲ್ಲಿ 22,000 ಜಮಾ ಆಗಿರುವುದು ಬೆಳಕಿಗೆ ಬಂತು. 28 ದಿನಗಳ ನಂತರ ಹಿಂತಿರುಗಿದ ಆತ ತನ್ನ  ಫೇಸ್‌ಬುಕ್ ಅಮ್ಮನನ್ನು ಭೇಟಿಯಾಗಲು ಹೋಗಿದ್ದೆ ಎಂದು ತಿಳಿಸಿದ್ದಾನೆ. 
 
ಮೂಲತಃ ಕೇರಳದ ತ್ರಿವೇಂದ್ರಮ್ ನಿವಾಸಿಯಾಗಿರುವ  ಆಕೆ  ಬಹರೀನ್‌ನಲ್ಲಿ  ನರ್ಸ್ ಆಗಿ ಕೆಲಸ ಮಾಡುತ್ತಾರೆ.  ಕಳೆದ ವಾರ ಆಕೆ ತನ್ನ ಫೇಸ್‌ಬುಕ್ ಪುತ್ರನನ್ನು ಕರೆದೊಯ್ಯಲು ಆಕೆ ಬರೇಲಿಗೆ ಬಂದಿದ್ದಳು. ಆ ಸಮಯದಲ್ಲಿ ವಿಜಯ್‌ನನ್ನು ಹಾಗೋ ಹೀಗೋ ಮಾಡಿ ತಡೆ ಹಿಡಿಯಲಾಯಿತು. ಆದರೆ ಆತ ತನ್ನ ಹಠವನ್ನು ಸಡಲಿಸಿಕೊಳ್ಳಲು ತಯಾರಿಲ್ಲ ಎನ್ನುತ್ತಾರೆ ಅವನ ಸಂಬಂಧಿಕರು. 

ವೆಬ್ದುನಿಯಾವನ್ನು ಓದಿ