ನೀವು ಎಂದಾದರು ಮಾವಿನ ಮರದ ಮದುವೆ ನೋಡಿದ್ದಿರಾ ?

ಮಂಗಳವಾರ, 20 ಮೇ 2014 (16:30 IST)
ಕೇಳಲು ಸ್ವಲ್ಪ ವಿಚಿತ್ರ ಎನಿಸಬಹುದು ಆದರೆ ಇದು ಸತ್ಯವಾಗಿದೆ. ಛತ್ತಿಸ್‌ಘಡ್‌ದ ರತನ್‌‌‌ಪುರ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಮಾವಿನ ಮರದ ಹಣ್ಣನ್ನು ತಿನ್ನುವ ಮೊದಲು ವಿವಾಹದ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಮರವನ್ನು ಸಂತಾನದಂತೆ ಎಂದು ನಂಬಲಾಗುತ್ತದೆ. ವಿವಾಹದ ವಿಧಿ ವಿಧಾನದ ನಂತರವಷ್ಟೆ ಮಾವಿನ ಹಣ್ಣನ್ನು ತಿನ್ನಲಾಗುತ್ತದೆ. 
 
 
ಛತ್ತಿಸ್‌ಘಡ್‌ದ ಕೆಲವು ಕ್ಷೇತ್ರಗಳಲ್ಲಿ ಈ ಪರಂಪರೆ ಹಲವಾರು ವರ್ಷಗಳಿಂದ ಜಾರಿಯಲ್ಲಿದೆ. ಮನೆಯಲ್ಲಿ ಮಾವು ಮತ್ತು ಇತರ ಹಣ್ಣುಗಳ ಸಸಿಯನ್ನು ನೆಟ್ಟಾಗ ಜೀವನಾದ್ಯಂತ ಇದರ ಆರೈಕೆ ಮಾಡಲಾಗುತ್ತದೆ. ಇದನ್ನು ತಮ್ಮ ಪರಿವಾರದ ಸದಸ್ಯ ಎಂದು ನಂಬಲಾಗುತ್ತದೆ. ಇದಕ್ಕಾಗಿಯೆ ಮದುವೆಯ ವಿಧಿ ವಿಧಾನ ಪೂರ್ತಿಗೊಳಿಸಲಾಗುತ್ತದೆ. 
 
ಬೆಲತರಾ ಕ್ಷೇತ್ರದ ಸಲಕಾ ಗ್ರಾಮದಲ್ಲಿ ರಘುವೀರ ಪ್ರಸಾದರ ಮನೆಯಲ್ಲಿ ಈ ತರಹದ ಮಾವಿನ ಮರದ ಮದುವೆ ನಡೆಯಿತು. ಪರಂಪರಾಗತವಾಗಿ ಈ ಮದುವೆಯ ಕ್ರಿಯೆ ನಡೆದುಕೊಂಡಿ ಬರಲಾಗುತ್ತದೆ ಎಂದು ಈ ಮನೆಯ ರಘುವೀರ್ ತಿಳಿಸಿದ್ದಾರೆ. ತೈಲ ಮತ್ತು ಅರಿಶಿಣದ ಕಾರ್ಯಕ್ರಮ ಕೂಡ ನಡೆಸಲಾಗುತ್ತದೆ. 
 
ಮಾವಿನ ಮರಕ್ಕೆ ತೈಲ ಮತ್ತು ಅರಶಿಣ ಹಚ್ಚಿ ಪೂಜೆ ಮಾಡಲಾಗುತ್ತದೆ ಎಂದು ಸ್ಥಳಿಯ ನಿವಾಸಿ ಕುಮಾರಿ ಭಾಯಿ ತಿಳಿಸಿದ್ದಾರೆ. ಮಾವಿನ  ಮರದ ವಿವಾಹ ಒಂದು ಸಮಾರಂಭವಾಗಿದೆ. ಕಟ್ಟಿಗೆಯ ಗೊಂಬೆಯನ್ನು ಮಾಡಲಾಗುತ್ತದೆ ಮತ್ತು ಈ ಕಟ್ಟಿಗೆಗಳಿಗೆ ಮದುವೆ ಮಾಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ