15ವರ್ಷದಿಂದ ಹಾವಿನ ಗೆಳೆಯ, ಆದರೆ ಪಾಪ ಸತ್ತೇ ಹೋದ

ಗುರುವಾರ, 24 ಜುಲೈ 2014 (17:46 IST)
ಯುಪಿಯ ಗಾಜಿಪುರದ ಭಂವರ್ಕೊಲ್‌‌‌ದಲ್ಲಿ ಶೇರಪುರ್ ಕಲಾ ಗ್ರಾಮದ ಅವಿನಾಶ್ ರಾಯ್‌ ಜಾದುಗಾರನಾಗಿಲ್ಲ ಅಥವಾ ಹಾವಾಡಿಗನಾಗಿರಲಿಲ್ಲ. ಬಿಎಸ್‌‌‌‌ಸಿ ಡಿಗ್ರಿ ಪಡೆದ ಅವಿನಾಶ್ ತನ್ನ ಮನೆಯಲ್ಲಿ ಒಬ್ಬನೇ ಇರುತ್ತಿದ್ದನು ಮತ್ತು ಗ್ರಾಮದ ಬಡ ಮಕ್ಕಳಿಗೆ ಟ್ಯೂಶನ್ ತೆಗೆದುಕೊಳ್ಳುವುದರ ಮೂಲಕ.ಜೀವನ ಸಾಗಿಸುತ್ತಿದ್ದನು. 
 
15 ವರ್ಷದ ಹಿಂದೆ ಡಿಸ್ಕವರಿ ಚ್ಯಾನೆಲ್‌‌‌‌ನಲ್ಲಿ ಒಬ್ಬರು ಆಂಗ್ಲರು ಹಾವನ್ನು ಹಿಡಿಯುವುದನ್ನು ನೋಡಿದ ಈತ ಅದರಿಂದ ಪ್ರಭಾವಿತನಾಗಿದ್ದನು. ಸಣ್ಣ ಬಡಿಗೆಯಿಂದ ವಿಷಪೂರಿತ ಜೀವಿಗಳನ್ನು ಹಿಡಿಯುವುದು ಮತ್ತು ತನ್ನ ಎಕಾಂಗಿತನ ದೂರ ಮಾಡಲು ಈ ವಿಷಪೂರಿತ ಜೀವಿಗಳ ಜೊತೆಗೆ ಆಟವಾಡುತ್ತಿದ್ದನು. 
 
ಆದರೆ ಸೋಮವಾರ ಇವನ ಈ ಹವ್ಯಾಸ ಇತನಿಗೆ ಮುಳುವಾಗಿದೆ. ವಿಷಪೂರಿತ ಹಾವು ಹಿಡಿಯಲು ಹೋಗಿ ಇತನ ಸಾವು ಸಂಭವಿಸಿದೆ. 
 
ಗ್ರಾಮದ ಯಾವುದೇ ಭಾಗದಲ್ಲಿ ವಿಷಪೂರಿತ ಹಾವು ಕಾಣಿಸಿಕೊಂಡ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಧಾವಿಸುತ್ತಿದ್ದ ಅವಿನಾಶ್ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಿದ್ದ. ಅವಿನಾಶ್‌ನ ಹಾವು ಹಿಡಿಯುವ ಕಾರ್ಯದಿಂದ ಗ್ರಾಮಸ್ಥರು ನಿಶ್ಚಿಂತೆಯಿಂದ ವಾಸಿಸುತ್ತಿದ್ದರು.  
 
 ಹಾವು ಹಿಡಿಯುವುದು ತುಂಬಾ ಕಷ್ಟದ ಕೆಲಸ. ಸರಿಯಾಗಿ ಹಾವು ಹಿಡಿಯುವವರೆಗೆ ಕಣ್ಣಿನ ರೆಪ್ಪೆಗಳನ್ನು ಬಡಿಯುವಂತಿಲ್ಲ  ಎಂದು ಅವಿನಾಶ್ ಮಾಹಿತಿ ನೀಡುತ್ತಿದ್ದ ಎಂದು ಗ್ರಾಮಸ್ಥರು ಸ್ಮರಿಸುತ್ತಾರೆ.
 
ಸೋಮವಾರ ತನ್ನ ಗ್ರಾಮದ ಹೊಲವೊಂದರಲ್ಲಿರುವ ಉದ್ದದ ಹಾವೊಂದು ಅವಿನಾಶನ ಗಮನಕ್ಕೆ ಬಂದಿದೆ.ಆಗ ಈತ ಹಾವನ್ನು ಹಿಡಿಯಲು ಹೋಗಿದ್ದಾನೆ. ಆದರೆ, ಅಕಸ್ಮಿಕವಾಗಿ ಹಾವು ಆತನಿಗೆ ಕಚ್ಚಿದರ ಪರಿಣಾಮವಾಗಿ ಆತನ ಸಾವು ಸಂಭವಿಸಿದೆ. 

ವೆಬ್ದುನಿಯಾವನ್ನು ಓದಿ