ದೇಶದೆಲ್ಲೆಡೆ ನವನೀತಚೋರ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಭಾನುವಾರ, 17 ಆಗಸ್ಟ್ 2014 (18:02 IST)
ದೇಶದೆಲ್ಲೆಡೆ ಜಗದೋದ್ಧಾರಕ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ  ಇಸ್ಕಾನ್ ಕೃಷ್ಣ ಮಂದಿರ ವೈಭವಯುತವಾಗಿ ಅಲಂಕೃತಗೊಂಡಿದ್ದು, ಭಕ್ತರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸುತ್ತಿದ್ದಾರೆ. 

ಭಗವದ್ಗೀತೆಯಲ್ಲಿ ತಾನೇ ಹೇಳಿದಂತೆ ದುಷ್ಟ ಸಂಹಾರಕ್ಕಾಗಿ ಭೂವಿಗೆ ಅವತರಿಸಿದ ಶುಭ ದಿನವಿದು. ದೇಶದ ಹಲವೆಡೆಗಳಲ್ಲಿ ಆತ ಜನಿಸಿದ ಸಮಯ ರಾತ್ರಿ 12 ಕ್ಕೆ ಪೂಜೆ , ಪ್ರಾರ್ಥನೆ ಮಾಡಿ ಬಾಲ ಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟು ತೂಗಲಾಗುತ್ತದೆ.  ಪ್ರಜಾಪೀಡಕನಾಗಿದ್ದ ತನ್ನ ಮಾವ ಕಂಸನನ್ನು ಕೊಂದು ತನ್ನ ತಾಯಿ ತಂದೆಗಳನ್ನು ಬಂಧಮುಕ್ತಗೊಳಿಸಿದ ಗೋಪಾಲಕೃಣ್ಣ ಪುರಾಣದ ಕತೆಗಳಲ್ಲಿ ಕಂಡು ಬರುವ ಒಂದು ಪರಿಪೂರ್ಣ ವ್ಯಕ್ತಿತ್ವ. 
 
ಭಾರತೀಯರ ಆರಾಧ್ಯ ದೈವ ಶ್ರೀಕೃಷ್ಣ ತನ್ನ ಬಾಲ ಲೀಲೆಗಳಿಂದಲೇ ಪ್ರಸಿದ್ಧ. ತಮಗೆ ಕೃಷ್ಣನಂತ ಮಗ ಬೇಕೆನ್ನೋ ತಾಯಂದಿರ ಪಾಲಿಗಷ್ಟೇ ಅಲ್ಲದೇ ಎಲ್ಲರಿಗೂ ಆಪ್ತನಾತ. ಬೆಣ್ಣೆ ಕದ್ದು ಗೋಪಿಯರನ್ನು ಗೋಳು ಹೋಯ್ದುಕೊಳ್ಳುತ್ತಿದ್ದ, ಗೋಪಿಯರ ಸೀರೆ ಕದಿಯುತ್ತಿದ್ದ ತುಂಟ ಕೃಷ್ಣ, ಬಾಲ್ಯದಿಂದಲೇ  ಭೀಕರ ರಾಕ್ಷಸರ ಜೀವ ಹಿಂಡಿ ಅಮಾಯಕರ ಪಾಲಿನ ರಕ್ಷಕನಾಗಿ ಮೆರೆದ ವೀರ ಕೃಷ್ಣ, ಗೋಪಾಲಕ,  ಶಕ್ತಿಯ ಜತೆ ಯುಕ್ತಿಯನ್ನು ಬಳಸಿ ಕಾರ್ಯ ಸಾಧಿಸುತ್ತಿದ್ದ  ಕುಶಲ ಕೃಷ್ಣ, ಭಗವದ್ಗೀತೆ ಎಂಬ ಜ್ಞಾನಾಮೃತವನ್ನು ಜಗಕ್ಕೆ ಉಣಿಸಿದ ಸದ್ಗುರು ಕೃಷ್ಣನಾಗಿ ಭಕ್ತರಿಂದ ಪೂಡಿಸಲ್ಪಡುವ ಅನನ್ಯ ವ್ಯಕ್ತಿತ್ವದ ಗೋವಿಂದನಾತ.
 
ಇಂದು ದೇಶದ ಹಲವೆಡೆ ಮೊಸರೆ ಗಡಗಿಗಳನ್ನು ಒಡೆಯುವ ಸ್ಪರ್ಧೆಯು ಕೂಡ ನಡೆಯುತ್ತದೆ. 

ವೆಬ್ದುನಿಯಾವನ್ನು ಓದಿ