ಎಚ್‌‌‌‌ಐವಿ ವೈರಸ್‌‌ಗೆ ಕೊಲ್ಲುತ್ತದೆ ಈ ಕಾಂಡೋಮ್

ಗುರುವಾರ, 24 ಜುಲೈ 2014 (17:35 IST)
ಆಸ್ಟ್ರೇಲಿಯಾದ ಬಯೋ ಟೆಕ್ನಿಕ್ ಫರ್ಮ್ ಸ್ಟಾರ್‌ಫಾರ್ಮ್ ವಿವಾಕೆಜ್ ಎನ್ನುವ ಎಚ್‌‌ಐವಿ ವೈರಸ್‌‌‌ ಕೊಲ್ಲುವ ವಿಶ್ವದ ಮೊದಲ ಕಾಂಡೋಮ್‌ ಸಿದ್ದಪಡಿಸಿದೆ. ಉತ್ಪಾದನೆಗೆ ಅನುಮತಿ ದೊರೆತ ನಂತರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು.. ಕಾಂಡೋಮ್ ಮಾರುಕಟ್ಟೆಗೆ ಬರಲು ಕೆಲ ತಿಂಗಳಾಗಬಹುದು ಎಂದು ಮೂಲಗಳು ತಿಳಿಸಿವೆ.. 
 
ಡೇಲಿ ಮೇಲ್‌‌ ಆನ್‌‌ಲೈನ್‌‌ನಲ್ಲಿ ವರದಿಯಾದಂತೆ ಈ ಕಾಂಡೋಮ್‌‌ ವ್ಲೂಬ್ರಿಕೆಂಟ್ ಎಚ್‌‌‌ಐವಿ , ಚರ್ಮರೋಗ ಮತ್ತು ಹ್ಯೂಮನ್‌ ಪಪಿಲೊಮಾ ವೈರಸ್‌‌ಗಳನ್ನು ಶೇ.99.9 ರಷ್ಟು ಕೊಲ್ಲುತ್ತದೆ. ಇದಕ್ಕೆ ಆಸ್ಟ್ರೇಲಿಯನ್ ಥೆರಪ್ಯೂಟಿಕ್ ಗೂಡ್ಸ್ ಆಡಳಿತ ಮಂಡಳಿಯಿಂದ ಅನುಮತಿ ಲಭಿಸಿದೆ. ಇದು ಕೆಲವೇ ತಿಂಗಳಲ್ಲಿ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು ಕಾಂಡೋಮ್‌ ಉತ್ಪಾದಿಸಿದ ಕಂಪೆನಿ ತಿಳಿಸಿದೆ. 
 
ವಿವಾಜೆಲ್‌ ಕಾಂಡೋಮ್‌‌‌ ಎಚ್‌‌ಐವಿ ಮತ್ತು ಇತರ ಎಸ್‌‌‌ಟಿಐಜ್ (ಸೆಕ್ಸುವಲಿ ಟ್ರಾನ್ಸಮಿಟಿಡ್‌‌‌ ಇನ್‌ಫೆಕ್ನನ್ಸ್‌‌)ಗಳನ್ನು ಯಶಸ್ವಿಯಾಗಿ ತಡೆಯುತ್ತದೆ. ಈ ಪ್ರಕಾರದ ಕಾಂಡೊಮ್‌ನಲ್ಲಿ ವಿವಾಜೆಲ್‌ ವ್ಲುಬ್ರಿಕೆಟ್‌‌ ಇರಲಿದೆ, ಇದರಲ್ಲಿ ಶೇ. 0.05 ಎಸ್ಟೊಡ್ರಾಯಿಮರ್‌ ಸೋಡಿಯಂ ಇರಲಿದೆ. ಇದರಲ್ಲಿ ಎಚ್‌‌ಐವಿ ಎದುರು ಹೋರಾಡುವ ಒಂದು ರಸಾಯನಿಕವಿದೆ. ಇದರಿಂದ ಸ್ಟಾರ್‌ಫಾರ್ಮ್‌‌ ಜೊತೆಗೆ ಎನ್‌‌ಸೆಲ್‌‌ ಇರಲಿದೆ. ಇದು ಆಸ್ಟ್ರೇಲಿಯಾ ಕಾಂಡೋಮ್‌ ಮಾರುಕಟ್ಟೆಯಲ್ಲಿ ಸ್ಟಾರ್‌ಫಾರ್ಮಾ ಕಂಪೆನಿಯ ಪಾಲು ಶೇ.70ರಷ್ಟು ಇದೆ. 
 
ಆಸ್ಟ್ರೇಲಿಯಾದಲ್ಲಿ ಎಸ್‌ಟಿಐಜ್‌ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ ಮತ್ತು 25ಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ 8 ಜನರಲ್ಲಿ ಒಬ್ಬರಿಗೆ ಈ ರೋಗ ಹರಡುತ್ತಿದೆ. ಈ ರೀತಿ 2012ರ ಅಂತ್ಯದವರೆಗೆ ಎಚ್‌‌‌ಐವಿ ಸಂಕ್ರಮಣ ಶೇ.10 ರಷ್ಟು ಆಗಿದೆ. ಇದು ಕಳೆದ 20 ವರ್ಷದಲ್ಲಿ ಆಸ್ಟ್ರೇಲಿಯಾದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಪ್ರಮಾಣವಾಗಿದೆ. 

ವೆಬ್ದುನಿಯಾವನ್ನು ಓದಿ