ಜೆಡಿಎಸ್ ಕಚೇರಿ ನಿರ್ಮಿಸುವ ಕನಸು ಕನಸಾಗಿಯೇ ಉಳಿಯಿತು

ಗುರುವಾರ, 8 ಜನವರಿ 2015 (16:52 IST)
ಜೆಡಿಎಸ್ ಕಚೇರಿ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಜಮೀನಿನಲ್ಲಿ ಕಟ್ಟಡ ಕಾಮಗಾರಿಗೆ ಹೈಕೋರ್ಟ್ ತಡೆ ನೀಡಿದೆ. ಜೆಡಿಎಸ್ ಕಚೇರಿಗೆ ಖಾಸಗಿ ಜಮೀನನ್ನು ಬಿಬಿಎಂಪಿ ಮಂಜೂರು ಮಾಡಿತ್ತು.

ಬಿಬಿಎಂಪಿಗೆ, ಬಿಡಿಎಗೆ ಜಮೀನು ಮಂಜೂರಿಗೆ ಅಧಿಕಾರವಿಲ್ಲ ಎಂದು  ಚಂದ್ರಶೇಖರ್ ಪಾಟೀಲ್ ಎಂಬವರು ದೂರಿನಲ್ಲಿ ತಿಳಿಸಿದ್ದರು. ಬೆಂಗಳೂರಿನ ಚೌಡಯ್ಯ ಸ್ಮಾರಕ ಬಳಿ ಜಮೀನು ಮಂಜೂರು ಮಾಡಲಾಗಿತ್ತು.

ಇದು ಖಾಸಗಿ ಜಮೀನಾಗಿದ್ದು ಜೆಡಿಎಸ್‌ಗೆ ಜಮೀನು ಮಂಜೂರು ಮಾಡಿದ್ದು ಕಾನೂನುಬಾಹಿರ ಎಂದು ಚಂದ್ರಶೇಖರ ಪಾಟೀಲ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.  ಇದರಿಂದ ಕಟ್ಟಡ ನಿರ್ಮಿಸುವ ಜೆಡಿಎಸ್ ಆಸೆಗೆ ತಣ್ಣೀರು ಬಿಟ್ಟಂತಾಗಿದ್ದು, ಹೊಸ ಕಚೇರಿಯನ್ನು ಹೊಂದುವ ಕನಸು ಕಸನಾಗಿಯೇ ಉಳಿದಿದೆ. 

ವೆಬ್ದುನಿಯಾವನ್ನು ಓದಿ