ತಪ್ಪು ನನ್ನದಾ....

ಶನಿವಾರ, 22 ನವೆಂಬರ್ 2014 (16:21 IST)
ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಕಥಾನಾಯಕಿ ಸತ್ಯಳ ಪಾತ್ರ ವಿಭಿನ್ನ ಅದೇ ಅವಳ ತಿರಸ್ಕೃತ ಪ್ರೇಮವೇ ಕಥಾ ವಸ್ತು ಎಂದು ಮನಸ್ಸು ಪದೇ ಪದೇ ಹೇಳುವ ಪ್ರಯತ್ನ ಮಾಡುತ್ತಿದ್ದರೂ ಅಲ್ಲ ಅದಲ್ಲ ನಿಜ ಬದುಕಿನಲ್ಲಿ ಇದು ಸಾಧ್ಯವಾ ಅಥವಾ ಅಂದಿನ ಸುಶಿಕ್ಷಿತ ಅನ್ನುವುದಕ್ಕಿಂತ ಆದರ್ಶದ ಬೆನ್ನೇರಿದವರ ಮಾನಸಿಕ ಸ್ಥಿತಿಯನ್ನು ಇದು ಬಿಂಬಿಸುವ ಪ್ರಯತ್ನ ಮಾಡುತ್ತದಾ ಎಂದು ಅನ್ನಿಸಿದರೂ ಉಹೂಂ ಅದ್ಯಾಕೊ ಮನಸ್ಸು ಒಪ್ಪುತ್ತಿಲ್ಲ ಕಾಲ ಬದಲಾಗಿದೆ ಚಿಂತನಾ ಶೈಲಿ ಬದಲಾಗಿದೆ ಆದರೆ ಪ್ರೀತಿ, ಪ್ರೇಮದ ವ್ಯಾಖ್ಯಾನಗಳು ಪರಿಸ್ಥಿತಿಗೆ ಕಾಲಕ್ಕೆ ತಕ್ಕಂತೆ ಬದಲಾಗುತ್ತವಾ ಇಲ್ಲ ಅಂತ ---  ಮನಸ್ಸು ಹೇಳುತ್ತಿದ್ದರೂ ಬುದ್ದಿ ಬೇಡ ಅಂದರೂ ಅಂದು ಜೀವನಕ್ಕೆ ತಿರುವು ನೀಡಿದ ಘಟನೆಯನ್ನೇ ಮೆಲುಕು ಹಾಕುತ್ತಿತ್ತು. 
 
ತಪ್ಪು ನನ್ನದಾ 
 
ಎಂದಿನಂತೆ ಅಂದು ಆಫಿಸ್ ಕೆಲಸ ಮುಗಿಸುವುವಷ್ಟರಲ್ಲಿ ಗಡಿಯಾರದ  ಮುಳ್ಳು ಅರರ ಅಂಕಿಯ ಮೇಲೆ ಎರಡು ಮುಳ್ಳುಗಳು ಬಿದ್ದಾಗಿತ್ತು. ಎಷ್ಟು ಪ್ರಯತ್ನ ಮಾಡಿದರೂ ಎಂದು ಸರಿಯಾಗಿ ಐದೂವರೆಗೆ ಹೋಗಲಿ ಆರಕ್ಕಾದರೂ ಆಫಿಸ್ ಬಿಟ್ಟೆನೆಂದರೂ ಆಫಿಸ್ ಎನ್ನುವುದು ಬಿಡುವುದಿಲ್ಲ. ಆದರೂ ಅವಳು ಆರು ಗಂಟೆಗೆ ತುಳಸಿ ಬಾಗ್‌ಗೆ ಬಾ ಎಂದಿದ್ದಾಳೆ ಹೋಗಲೇಬೇಕು. ಬುಧವಾರ ಪೇಠ ದಾಟಿ ದಗಡು ಶೇಠ ಗಣಪತಿ ಮಂದಿರ ದಾಟಿಕೊಂಡು ಒಂದರ್ಧ ಕಿಮಿ ನಡೆದರೆ ಸಿಗುವುದೇ ಮಾಧವರಾವ್ ಪೇಶ್ವೆ ಇದ್ದ ಅರಮನೆ ಮುಂದೆ ನಾಲ್ಕು ಹೆಜ್ಜೆ ಹಾಕಿದರೆ ಸಿಗುವುದೇ ತುಳಸಿಭಾಗ್ ಈಗ ಆರೂವರೆ. ಅರ್ಧ ಗಂಟೆಯಲ್ಲಿ ತಲುಪಬಹುದು ಸಿಟ್ ಮಾಡ್ಕೊತಾಳೆ ಎನಾದರೂ ಮಾಡಿದರಾಯ್ತು. ಸರಿ ಎಂದು ರಸ್ತೆಗಿಳಿದೆ. ದಮ್ ಹೊಡೆಯಲು ಅವಕಾಶ ಇಲ್ಲದ ರೀತಿಯಲ್ಲಿ ಬಂದಿದ್ದರಿಂದ ಬೇವರು ಅನ್ನುವುದು ಮೈಯಿಂದ ಕಿತ್ಕೊಂಡು ಬಂದಿತ್ತೊ ಗೊತ್ತಿಲ್ಲ  ಅವಳು ಕುಳಿತಿದ್ದಳು ಅಲ್ಲಿ ಪುಣೆಯ ಇಳಿ ಸಾಯಂಕಾಲದ ವಾತಾವರಣ ಅಂದರೆ ಒಂಥರಾ ನಾ  ತಂಡಿ ಭಿ ನಹಿ ನಾ ಗರ್ಮಿ ಭಿ ನಹಿ. ಎಂದೋ ಮರಾಠಾ ಪೇಶ್ವೆ ಹುಟ್ಟುಹಾಕಿದ್ದ ತುಳಸಿ ವನ ಅಥವಾ ತುಳಸಿ ಭಾಗ್ ಒಳಹೊಕ್ಕರೆ ಬರಿ ತುಳಸಿ ಮತ್ತು ತುಳಸಿಯ ಗಮ್ಮೆನ್ನುವ ಪರಿಮಳ. ಅಲ್ಲಿ ಕುಳಿತಿರಬಹುದಾ ಇಲ್ಲಿ ಕುಳಿತಿರಬಹುದಾ ಎಂದು ಎಲ್ಲ ಕಡೆ ಕಣ್ಣಾಡಿಸಿದರೂ ಎಲ್ಲೂ ಪತ್ತೆ ಇಲ್ಲ ಹೂಂ ಲೇಟಾಗಿದೆ ಹೋರಟು ಹೋಗಿರಬಹುದು ಎಂದುಕೊಂಡು ಸುಮ್ಮನಾಗ ಬೇಕು ಅಂದುಕೊಂಡಿದ್ದೆ ಯಾಕೊ ಮನಸ್ಸು ತಡಿಲಿಲ್ಲ. ಮೊಬೈಲ್‍ಗೆ  ಕಾಲ್ ಮಾಡಿದರೂ ವ್ಯಾಪ್ತಿ ಪ್ರದೇಶದಲ್ಲಿ ಇಲ್ಲ ಎನ್ನುವ ಉತ್ತರ  ಆಯಿಲಾ ಇದೇನು ಹುಡುಗಿ ನನಗೆ ಆಟವಾಡಿಸ್ತಿದಾಳೆ ಅಂದ್ಕೊಂಡೆ ಆಡುವುದೆಲ್ಲ ಆಗಲೇ ಆಡಿದ್ದಳಲ್ಲ ಅವಳು ಆಗ ಮಾಡಿದ ಕಿತಾಪತಿಗಳು ನೆನಪಿಗೆ ಬಂದು ನಗೆ ನುಗ್ಗರಿಸಿಕೊಂಡು ಬಂತು. 
ಸರಿ ಎಂದು ವಾಪಸ್ ಪಯಣ ಪ್ರಾರಂಭ ಸೆಂಟ್ರಲ್‌ದಿಂದ ಡೆಕ್ಕನ್ ಕ್ವೀನ್ ಹಿಡ್ಕೊಂಡು ತಳೆಗಾಂವ್ ತಲುಪಿದಾಗ ರಾತ್ರಿ ಹತ್ತು ಇನ್ನ್ಯಾವ ಹೋಟೆಲು ಸಿಗಲಿಕ್ಕಿಲ್ಲ ಅಂದುಕೊಂಡು ಹಾದಿಯಲ್ಲಿ ವಡಾಪಾವ್ ಹೊಟ್ಟೆಗೆ ಹಾಕಿಕೊಂಡು ಬಂದಾಗಿತ್ತು. 
ಎರಡು ದಿನ ಕಳೆದ ನಂತರ ಜೀವನದ ಗತಿನೇ ಬದಲಾಗಿತ್ತು. ------ ಅವಳ ಮದುವೆ ನಿಶ್ಚಿತವಾಗಿತ್ತು ಯಾಕ್ಹಿಂಗ ಮಾಡಿದೆ. ತು ನಕೊ ಮಲಾ ಅಂದಿದ್ದಳು. ಕಾರಣ ಹೇಳೆ ಅಂದ್ರೆ ಕೆಲವೊಂದು ನಿರ್ಧಾರಗಳಿಗೆ ಕಾರಣ ಇರುವುದಿಲ್ಲ ಅಂತ ಅಷ್ಟೇ ತಿಳ್ಕೊ ಸಾಕು ಅಂದಿದ್ದಳು
ಛಿ ಇವನ್ನವನ ಇದು ಒಂದು ಜೀವನಾನಾ ಕಾರಣವಿಲ್ಲದೆ ವಿನಾಕಾರಣ ತಿರಸ್ಕೃತ 
 
ನನ್ನವಳು ತಿರಸ್ಕರಿಸಿದಳು ಎಂದು ಕೋಪ ಇಲ್ಲ ಕಾರಣ ಬೇಕಿತ್ತು ಅಷ್ಟೇ. ನೋಡು ನಾನು ಸಾಫ್ ಸೀದಾ ಮನುಷ್ಯನು ಅಲ್ಲ ಮತ್ತು ನನಗ ಹಂಗೆ ಇರುವುದು ಇಷ್ಟ ಇಲ್ಲ ಎನಿದ್ದರೂ ನೇರಾ ನೇರ ಎಕ್ ಮಾರ್ ದೊ ತುಕಡಾ ಸ್ವಭಾವ ಪಕ್ಕದಲ್ಲಿ ಓಶೋ ಆಶ್ರಮ ಇದೆ ಗೊತ್ತಲ್ಲ ಅವನು ಹೆಸರು ಪಡೆದಿದ್ದಾನೆ ಸ್ವಾಮಿ ಅದು ಇದು ಅನ್ನಿಸಿಕೊಂಡಿದ್ದಾನೆ ಅಂವ ಹೇಳುವ ತತ್ವಕ್ಕೂ ನಾನು ಪಾಲಿಸುವ ಕೆಲವಾದರೂ ತತ್ವಗಳಲ್ಲಿ ವ್ಯತ್ಯಾಸ ಇಲ್ಲ ಅನ್ನಿಸಿದ್ದನ್ನು ಹೇಳಿದ್ದೆನೆ ಮಾಡಿದ್ದೆನೆ ಅದಕ್ಕೆ ನಿನ್ನನ್ನ ಕೇಳೊದು ಕನಿಷ್ಟ ಕಾರಣವಾದರೂ ಸಾಕು ಎಂದಿದ್ದೆ.
 
ಕೊನೆಗೂ ಉತ್ತರ ಸಿಕ್ಕಿತ್ತು ಇಲ್ಲಪ್ಪ ನಿನ್ನಂತಹವರೊಂದಿಗೆ ಸಂಸಾರ ಮಾಡುವುದು ನನ್ನಿಂದ ಸಾಧ್ಯವಿಲ್ಲ. ಯಾಕೆ ಗೊತ್ತಾ ನಿ ಎನೋ ಹೇಳೊದು ನಾ ಎನೊ ತಿಳ್ಕೊಳ್ಳೊದು ಅದರಿಂದ ಸಂಸಾರ ಅನ್ನೊದು ಕಲಕಿದ ನೀರಿನಂತಾಗುತ್ತದೆ ನಿನಗೂ ಶಾಂತಿ ಇಲ್ಲ ನನಗೂ ನೆಮ್ಮದಿ ಇಲ್ಲ ನಿನ್ನ ಸ್ವಭಾವ ನನಗಿಷ್ಟ. ಸಂಸಾರ ಅನ್ನೊದು ಹೊಂದಾಣಿಕೆ ಅನ್ನುವುದನ್ನು ಕೇಳುತ್ತದೆ ಅದಿಲ್ಲದಿದ್ದರೆ ಸಂಸಾರ ಅನ್ನೊದು ಮುಂದೆ ಸಾಗದು. 
 
ಎಂತಾ ಉತ್ತರ 
ಮಾರ್ಮಿಕವಾಗಿತ್ತು ಬದುಕಿನ ಬಂಡಿಗೆ ಆದರ್ಶ,ತತ್ವಗಳು ಎಂದು ಹೊಂದುವುದಿಲ್ಲ ಅವುಗಳದು ಎನಿದ್ದರೂ ಒಂದು ಸಿಮೀತ ಪರೀಧಿ ಅದಕ್ಕೆ ಪುನಃ ಸತ್ಯ ನೆನಪಾಗಿದ್ದು ಅವಳು ಕೂಡ ಆದರ್ಶದ ಬೆನ್ನ ಹಿಂದೆ ಪ್ರೇಮವಿಲ್ಲದ ಪ್ರೇಮವನ್ನು ನಿಜ ಎಂದುಕೊಂಡಿದ್ದಳು. ಬಹುಶಃ ಆದರ್ಶವನ್ನು ಅವಳು ತೊರೆದಿದ್ದರೆ ಪುನಃ ತಿರುಮಲೆ ಗೌಡ ಅಲಿಯಾಸ ಶ್ರೀನಿವಾಸನೊಂದಿಗೆ ಮದುವೆಯಾಗಬಹುದಿತ್ತು. ಅದಾಗಲಿಲ್ಲ.
 

ವೆಬ್ದುನಿಯಾವನ್ನು ಓದಿ