ಅಪಘಾತದಲ್ಲಿ ಸತ್ತ ಗಂಡು ನಾಗರ; ರಸ್ತೆ ತಡೆದ ಹೆಣ್ಣು ನಾಗರ( ವಿಡಿಯೋ)

ಸೋಮವಾರ, 12 ಜನವರಿ 2015 (16:29 IST)
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಆಶ್ಚರ್ಯಕಾರಕ ಘಟನೆ ನಡೆದಿದೆ. ಎಬಿ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ  ಗಂಡು ನಾಗರಹಾವೊಂದು ಟ್ರಕ್ ಅಡಿ ಸಿಲುಕಿ ಅಸು ನೀಗಿತು. ಕೆಲ ಹೊತ್ತಿನಲ್ಲಿ ಹೆಣ್ಣು ನಾಗರ ಅಲ್ಲಿಗೆ ಬಂದು ಕುಳಿತಾಗ ನಾಗರಹಾವಿನ ದುರ್ಮರಣಕ್ಕಾಗಿ ಖೇದ ವ್ಯಕ್ತಪಡಿಸುತ್ತ ಅಲ್ಲಿ ನಿಂತಿದ್ದ ಜನರು ದಂಗು ಬಡಿದು ಹೋದರು. 
ಅಪಘಾತ ನಡೆದ ಸ್ವಲ್ಪ ಸಮಯದಲ್ಲಿ ಎಲ್ಲಿಂದಲೋ ಹರಿದು ಬಂದ ಹೆಣ್ಣು ನಾಗ, ಗಂಡು ನಾಗದ ಬಳಿ ಕುಳಿತುಕೊಂಡು ಬಿಟ್ಟಿತು. ಯಾರೊಬ್ಬರು ಕೂಡ ಹಾವಿನ ಬಳಿ ಸುಳಿಯುವ ಧೈರ್ಯ ತೋರಲಿಲ್ಲ. ಹಾಗಾಗಿ 4 ಗಂಟೆಗಳ ಕಾಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ನಿರ್ಮಾಣವಾಯಿತು. ನಂತರ ಹಾವು ಹಿಡಿಯುವವರ  ಸಹಾಯದೊಂದಿಗೆ ಹೆಣ್ಣು ನಾಗವನ್ನು ಅಲ್ಲಿಂದ ಎತ್ತಲಾಯಿತು. 
 
ಆದರೆ ಪ್ರಕರಣ ಇಲ್ಲಿಗೆ ಮುಗಿಯಲಿಲ್ಲ. ಮರುದಿನ ಜನರಿಗೆ ಕಂಡು ಬಂದಿದ್ದು ಹೃದಯ ವಿದ್ರಾಯಕ ದೃಶ್ಯವಾಗಿತ್ತು. ಕಳೆದ ರಾತ್ರಿ ಗಂಡು ನಾಗ ಸತ್ತ ಸ್ಥಳದಲ್ಲಿ ಹೆಣ್ಣು ನಾಗವು ಸಹ ಸತ್ತು ಬಿದ್ದಿತ್ತು. ಅದನ್ನು ನೋಡಿ ಮರುಗಿದ ಜನರು  ಜೋಡಿ ನಾಗಗಳ ಅಂತಿಮ ಸಂಸ್ಕಾರವನ್ನು ಮಾಡಿದ್ದಾರೆ. ಆ ಸ್ಥಳದಲ್ಲಿ ನಾಗಗಳ ದೇವಸ್ಥಾನವನ್ನು ಸಹ ನಿರ್ಮಾಣ ಮಾಡಲಾಗುವುದು ಎಂದು ವರದಿಯಾಗಿದೆ. 

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.:

ವೆಬ್ದುನಿಯಾವನ್ನು ಓದಿ