ಚಂದಮಾಮನ ತಾಣದಲ್ಲಿ...

ಶನಿವಾರ, 22 ನವೆಂಬರ್ 2014 (16:50 IST)
(38 ವರ್ಷಗಳ ಹಿಂದೆ 1969ರ ಇದೇ ದಿನ ಅಂದರೆ, ಜುಲೈ 20ರಂದು ಮಾನವನು ಚಂದ್ರನ ಅಂಗಳಕ್ಕೆ ಮೊದಲ ಬಾರಿ ಕಾಲಿಟ್ಟ ಶುಭ ಘಳಿಗೆ. ಆ ಪ್ರಯುಕ್ತ ಚಂದ್ರನ ಮೇಲೆ ಒಂದಿಷ್ಟು ಬೆಳಕು...)
 
ಚಂದಮಾಮನ ತಾಣದಲ್ಲಿ ದಿನ ರಾತ್ರಿಯ ಹೊರತಾಗಿ ಬೇರೇನೂ ನಡೆಯುವುದಿಲ್ಲ. ಅಲ್ಲಿ ಮೋಡಗಳಿಲ್ಲ, ಮಳೆಯಿಲ್ಲ, ಗಾಳಿಯಿಲ್ಲ, ತೂಫಾನ್ ಕೂಡಾ ಇಲ್ಲ. 
ಚಂದ್ರನ ಮೇಲೆ ಯಾವುದೇ ಪರಿಸರ ಇಲ್ಲ, ಚಂದ್ರನ ನೆಲದಲ್ಲಿ ಯಾವುದೇ ನದಿ ಹರಿಯುವುದಿಲ್ಲ. ಅಲ್ಲಿ ಯಾವುದೇ ಸಮುದ್ರದ ಘರ್ಜನೆ ಇಲ್ಲ, ಏರು ತಗ್ಗುಗಳ ಶಿಲೆಗಳು ಮಾತ್ರ ಇವೆ.
 
ಚಂದ್ರನ ಒಂದು ದಿನ (ಸೂರ್ಯೋದಯದಿಂದ ಸೂರ್ಯಾಸ್ತದವನರೆಗೆ) ಎಂದರೆ ನಮ್ಮ ಒಂದು ತಿಂಗಳು. ಅಲ್ಲಿ ಎರಡು ವಾರ ಶುಭ್ರ ಬೆಳಕಿರುತ್ತದೆ, ಎರಡು ವಾರ ಬರೀ ಕತ್ತಲು. ಅಲ್ಲಿ ಶುಭ್ರ ಬೆಳಕಿನ ಸಂದರ್ಭ ಎಷ್ಟೊಂದು ತಾಪಮಾನ ಇರುತ್ತದೆಯೆಂದರೆ ನೀರು ಗಳಗಳನೆ ಕುದಿಯಬಹುದು. ಅಲ್ಲಿ ದಿನದ ತಾಪಮಾನವೇ 220 ಡಿಗ್ರಿ ಫ್ಯಾರನ್‌ಹೀಟ್. ಆದರೆ, ರಾತ್ರಿಯ ತಾಪಮಾನ ಕೆಳಗೆ ಇಳಿದಾಗ, ಬಹುತೇಕ ರಸಾತಳವನ್ನೇ ತಲುಪುತ್ತದೆ. ಸೈಬೀರಿಯಾ ಅಥವಾ ಭೂಮಿಯ ದಕ್ಷಿಣ ಧ್ರುವದಲ್ಲೂ ಇಷ್ಟೊಂದು ಚಳಿ ಇರಲಾರದು. ಅಂದರೆ ಉಷ್ಣತೆಯು ಶೂನ್ಯದಿಂದ 250 ಡಿಗ್ರಿಗೂ ಕೆಳಗೆ ಇಳಿಯುತ್ತದೆ.
 
ಚಂದ್ರನ ವ್ಯಾಸ 2160 ಮೈಲುಗಳು. ಆದರೂ ಭೂಮಿಯು ಚಂದ್ರನಿಗಿಂತ 49 ಪಟ್ಟು ದೊಡ್ಡದು. ಚಂದ್ರನಲ್ಲಿ ಬೆಳಕು ಕೂಡ ಸಾಕಷ್ಟಿದೆ. 100 ಕ್ಯಾಂಡಲ್ ಪವರಿನ ಬಲ್ಬು  22 ಗಜ ದೂರದಿಂದ ಕಾಣಿಸುವಷ್ಟು ಪ್ರಖರವಾಗಿದೆ. ಆದರೆ ಸೂರ್ಯನ ಪ್ರಖರತೆಯು ಚಂದ್ರನಿಗಿಂತ 4.65 ಲಕ್ಷ ಪಟ್ಟು ಹೆಚ್ಚು.
 

ವೆಬ್ದುನಿಯಾವನ್ನು ಓದಿ