ಒಂದೇ ಗರ್ಭಾಶಯದಿಂದ ಹುಟ್ಟಿದ ಅಮ್ಮ ಮತ್ತು ಮಗು...

ಶುಕ್ರವಾರ, 5 ಡಿಸೆಂಬರ್ 2014 (13:32 IST)
ಜಗತ್ತಿನಲ್ಲಿ ಈ ಘಟನೆ ಹಿಂದೆಂದೂ ಆಗಿರಲಿಕ್ಕಿಲ್ಲ. ತಾನು ಹುಟ್ಟಿದ ಗರ್ಭದಿಂದ ತನ್ನ ಮಕ್ಕಳಿಗೂ ಜನ್ಮ ನೀಡುವುದೆಂದರೆ.. ಅರ್ಥವಾಗುತ್ತಿಲ್ಲವೇ.... ಮುಂದೇ ಓದಿ..

ಗರ್ಭಾಶಯವಿಲ್ಲದೇ ಜನಿಸಿದ ತಮ್ಮ ಹೆಣ್ಮುಮಕ್ಕಳಿಗೆ ಅವರ ತಾಯಂದಿರೇ ಗರ್ಭಾಶಯವನ್ನು ದಾನ ಮಾಡಿದ ಘಟನೆ ಸ್ವೀಡನ್‌ನಲ್ಲಿ ನಡೆದಿದೆ. ತಮ್ಮ ಮಗಳನ್ನು ಯಾವ ಗರ್ಭದಲ್ಲಿಟ್ಟು ಪೋಷಿಸಿ ಜನ್ಮ ನೀಡಿದ್ದರೋ ಅದೇ ಗರ್ಭವನ್ನು  ತಾವು ಹೆತ್ತ ಹೆಣ್ಣು ಮಕ್ಕಳಿಗೆ ದಾನ ಮಾಡಿದ್ದಾರೆ  ಇಬ್ಬರು ತಾಯಂದಿರು.
 
ತಮ್ಮ ತಾಯಂದಿರಿಂದ ಗರ್ಭಾಶಯ ಪಡೆದ ಇಬ್ಬರು ಮಹಿಳೆಯರು ಸಹ ಮಗುವನ್ನು ಹಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಆ ಇಬ್ಬರು ಮಹಿಳೆಯರು ತಾವು ಜನಿಸಿದ ಗರ್ಭದಿಂದಲೇ ತಮ್ಮ ಮಕ್ಕಳಿಗೂ ಜನ್ಮ ನೀಡಿದ ತಾಯಂದಿರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರಿಬ್ಬರು ಒಂದು ತಿಂಗಳ ಹಿಂದೆ ಮಕ್ಕಳಿಗೆ ಜನ್ಮ ನೀಡಿದ್ದಾರೆ.
 
ಕೆಲವು ಮಹಿಳೆಯರಿಗೆ ಹುಟ್ಟಿನಿಂದಲೇ ಗರ್ಭಾಶಯವಿರುವುದಿಲ್ಲ. ಮತ್ತೆ ಕೆಲವರಿಗೆ ಆರೋಗ್ಯದ ಸಮಸ್ಯೆಯಿಂದಾಗಿ  ಗರ್ಭಕೋಶವನ್ನು ತೆಗೆಸಬೇಕಾಗುತ್ತದೆ. ಅಂತವರಿಗೆ ಬೇರೆಯವರಿಂದ ಪಡೆದ ಗರ್ಭಾಶಯವನ್ನು ಜೋಡಿಸುವ ಶಸ್ತ್ರಚಿಕಿತ್ಸೆ ವಿದೇಶಗಳಲ್ಲಿ ಪ್ರಾರಂಭವಾಗಿದೆ. ಕಳೆದ ವರ್ಷ 9 ಜನರಿಗೆ ಗರ್ಭಾಶಯ ಕಸಿ ಮಾಡಲಾಗಿತ್ತು.  ಈ ಪ್ರಯತ್ನದಲ್ಲಿ 7 ಜನರ ಜತೆ ನಾವು ಸಫಲತೆಯನ್ನು ಸಾಧಿಸಿದ್ದೇವೆ. ಇಂತಹ ಪ್ರಯತ್ನಗಳು ಮುಂದುವರೆಯಲಿವೆ ಎನ್ನುತ್ತಾರೆ ಲಂಡನ್‌ನ ಕಿಂಗ್ಸ್  ಕಾಲೇಜ್ ವೈದ್ಯರು. 
 
ಇದು ತಾಯಿಯೊಬ್ಬರು ತಮ್ಮ ಮಗಳಿಗೆ ನೀಡಬಹುದಾದ ಅಸಾಮಾನ್ಯ ಕೊಡುಗೆ ಎನ್ನುತ್ತಾರೆ ಕಿಂಗ್ಸ್ ಮೆಡಿಕಲ್ ಕಾಲೇಜ್ ಉಪನ್ಯಾಸಕರಾದ ಹೆನ್ರಿಕ್ ಹಗ್ಬರ್ಗ್.

ವೆಬ್ದುನಿಯಾವನ್ನು ಓದಿ