ಓರಲ್‌‌‌‌ ಸೆಕ್ಸ್‌ ಅಪಾಯಕಾರಿಯೇ ?

ಸೋಮವಾರ, 9 ಜೂನ್ 2014 (17:04 IST)
ಡಾ.ಮಹೇಶ್‌ ನವಾಲ್‌‌          
 



 


ಪ್ರಶ್ನೆ: ನನ್ನ ವಯಸ್ಸು 26. ನನ್ನ ಮದುವೆಯಾಗು ಐದು ವರ್ಷ ಕಳೆದಿವೆ. ಮೊದಲು ನನ್ನ ಪತಿ ಓರಲ್‌ ಸೆಕ್ಸ್‌ (ಮುಖ ಮೈಥುನ) ಮಾಡುತ್ತಿರಲಿಲ್ಲ ಆದರೆ ಕಳೆದ ಕೆಲವು ತಿಂಗಳಿನಿಂದ (6-8 ತಿಂಗಳಿನಿಂದ) ನನ್ನಿಂದ ಓರಲ್‌ ಸೆಕ್ಸ್‌ ಮಾಡಿಸುತ್ತಿದ್ದಾರೆ. ಇದರಿಂದ ನನಗೆ ಯಾವುದೇ ರೀತಿಯ ತೊಂದರೆ ಇದೆಯೇ? ದಯವಿಟ್ಟು ಇದರ ಬಗ್ಗೆ ತಿಳಿಸಿ. 
 
ಉತ್ತರ:(ಡಾ.ಮಹೇಶ್‌ ನವಾಲ್‌‌):  ಮುಖ ಮೈಥುನ ಅಥವಾ ಓರಲ್‌ ಸೆಕ್ಸ್‌ ಸಂಭೋಗದ ಒಂದು ಪ್ರಕಾರವಾಗಿದೆ. ಇದಿರಿಂದ ಸ್ತ್ರೀ ಅಥವಾ ಪುರುಷರಿಗೆ ಯಾವುದೇ ತೊಂದರೆ ಆಗುವುದಿಲ್ಲ. ನಮ್ಮ ಮುಖದಲ್ಲಿರುವ ಜೀವಾಣುಗಳಿಗಿಂತ ಕಡಿಮೆ ಜೀವಾಣುಗಳು ಪುರಷರ ಲಿಂಗ ಅಥವಾ ಮಹಿಳೆಯರ ಯೋನಿಯೊಳಗಡೆ ಇರುತ್ತವೆ. 
 
ಓರಲ್‌‌ ಸೆಕ್ಸ್‌‌‌ಗಿಂತ ಮೊದಲು ಸಂಗಾತಿಗಳು ತಮ್ಮ ಗುಪ್ತಾಂಗವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಇಲ್ಲಿದಿದ್ದರೆ ಲಿಂಗ ಅಥವಾ ಯೋನಿಯಲ್ಲಿ ಹರ್‌‌ಪಿಸ್‌ , ಸಿಫಲಿಸ್‌ ಇತ್ಯಾದಿ ರೋಗಾಣುಗಳು ಇರುತ್ತವೆ ಇದಿರಂದ ತೊಂದರೆ ಆಗುವ ಕಾರಣ ಗುಪ್ತಾಂಗವನ್ನು ತೊಳೆದುಕೊಳ್ಳುವುದು ಅವಶ್ಯಕವಾಗಿದೆ. ಒಂದು ವೇಳೆ ನಿಮಗೆ ಓರಲ್‌ ಸೆಕ್ಸ್‌ ಇಷ್ಟವಾಗದಿದ್ದರೆ ನಿಮ್ಮ ಪತಿಯ ಜೊತೆಗೆ ಮಾತನಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಿ. ನಿಮ್ಮ ಪತಿ ನಿಮ್ಮ ಭಾವನೆಯನ್ನು ಆಲಿಸುತ್ತಾರೆ ಎಂದು ನನಗೆ ನಂಬಿಕೆ ಇದೆ.

ವೆಬ್ದುನಿಯಾವನ್ನು ಓದಿ