ಸಂಬಂಧಗಳ ಮಧುರ ಅನುಭೂತಿಯೆ ಈ ರಕ್ಷಾಬಂಧನ ಹಬ್ಬ

ಗುರುವಾರ, 7 ಆಗಸ್ಟ್ 2014 (18:24 IST)
ಪ್ರತಿಯೊಬ್ಬ ಸಹೋದರ-ಸಹೋದರಿಯರಿಗೆ ರಕ್ಷಾಬಂಧನ ಹಬ್ಬ ಮಹತ್ವ ಪೂರ್ಣವಾಗಿರುತ್ತದೆ. ರೇಶ್ಮೆ ದಾರದ ಸ್ನೇಹ ಬಂಧನದಲ್ಲಿ ಸಹೋದರಿಯರು, ತಮ್ಮ ಸಹೋದರರನ್ನು ಜೀವನ ಪರ್ಯಂತ ಬಂಧಿಸಿಡುವ ಸಹೋದರ ಮತ್ತು ಸಹೋದರಿಯರ ಸಂಬಂಧವನ್ನು ಸಾರುವ ಹಬ್ಬವೇ ರಾಖಿ ಹಬ್ಬ.   
 
ವಿವಾಹದ ನಂತರ ಮೊದಲ ಬಾರಿಗೆ ರಕ್ಷಾಬಂಧನ ಆಚರಿಸಲು ತವರು ಮನೆಗೆ ಬಂದ ಕೆಲವು ನವವಿವಾಹಿತೆಯರೊಂದಿಗೆ ಚರ್ಚಿಸಿದಾಗ, ಸಹೋದರನೊಂದಿಗಿರುವ ನಮ್ಮ ಸಂಬಂಧ ಸದಾ ಹಸಿರಾಗಿರಲಿ ಎನ್ನುವುದೇ ಪ್ರಮುಖ ಉದ್ದೇಶ ಎಂದು ತಿಳಿಸಿದ್ದಾರೆ.  . 
 
ಪ್ರೀತಿಯ ದಾರವನ್ನು ಯಾವಾಗಲು ಮತ್ತು ಯಾರು ಕಡಿಯಲು ಸಾಧ್ಯವಿಲ್ಲ. ತಮ್ಮ ಸಹೋದರಿಯರನ್ನು ಸಹೋದರರು ಯಾವಾಗಲು ಮರೆಯಬಾರದು. ರಕ್ಷಾಬಂಧನವೆನ್ನುವುದು ಸಹೋದರಿಯರು ತಮ್ಮ ಸಹೋದರರ ಮುಂದೆ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಹಬ್ಬವಾಗಿದೆ. ಸಹೋದರರ ಕೈಗೆ ರಾಖಿ ಕಟ್ಟಿ, ದೀರ್ಘಾಯುಷಿಯಾಗು ಎಂದು ಸಹೋದರಿಯರು ಹಾರೈಸುತ್ತಾರೆ ಎಂದು ವಿದಿಶಾದಿಂದ ಬಂದ ನಿಧಿ ಓಸ್ತೋವಾಲ್ ತಿಳಿಸಿದ್ದಾರೆ.
  
ರಕ್ಷಾಬಂಧನ ಸಹೋದರ-ಸಹೋದರಿಯರ ವಿಶ್ವಾಸದ ಹಬ್ಬವಾಗಿದೆ. ಸಹೋದರನ ಕೈಗೆ ರೇಷ್ಮೆಯ ದಾರವನ್ನು ಕಟ್ಟಿ ಆತ ಖುಷಿಯಾಗಿರಲಿ ಎಂದು ಸಹೋದರಿಯರು ಈಶ್ವರನಲ್ಲಿ ಪ್ರಾರ್ಥಿಸುತ್ತಾರೆ ಎಂದು ನಿಮ್ಬಾಹೆಡಾದಿಂದ ಬಂದ ರಚನಾ ಪಾರಖ್ ತಿಳಿಸಿದ್ದಾರೆ.  
 
ಸಹೋದರನಿಗಾಗಿ ಆಕರ್ಷಕ ರಾಖಿ ಮತ್ತು ಸಿಹಿ ತಿಂಡಿಗಳನ್ನು ಖರೀದಿಸಿದ್ದಾಳೆ ಎಂದು ಉಜ್ಜೈನಿಯಿಂದ ಬಂದ ಶಿಲ್ಪಿ ಪಿತಲಿಯಾ ಹೇಳಿದ್ದಾಳೆ. 
 
ಸಹೋದರನಿಗೆ ಜೀವನದಲ್ಲಿ ಸುಖ-ಶಾಂತಿ ಮತ್ತು ಉಜ್ವಲ ಭವಿಷ್ಯ ಲಭಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಣ್ಣನ ಆಶೀರ್ವಾದ ಯಾವಾಗಲೂ ನನ್ನ ಮೇಲೆ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಶಿಲ್ಪಿ ತಿಳಿಸಿದ್ದಾಳೆ. 
 
ವಾಸ್ತವದಲ್ಲಿ ರಕ್ಷಾಬಂಧನ ಹಬ್ಬ ಸಹೋದರಿಗೆ ಸಹೋದರನ್ನು ನೀಡುವ ರಕ್ಷಣೆಯೇ ಹಬ್ಬದ ಜೀವಾಳವಾಗಿದೆ. ಅಣ್ಣ-ತಂಗಿಯರ ಪ್ರೀತಿ ಅಮರವಾಗಿದೆ. ಈ ಬಾರಿ ಸಹೋದರನಿಗೆ ಇಷ್ಟವಾದ ತಿಂಡಿಗಳನ್ನು ಮಾಡಿ ಉಪಚರಿಸುತ್ತೇನೆ ಎಂದು ಮಹಿದ್‌‌ಪುರದಿಂದ ಬಂದ ಮಿತಿಶಾ ಸೋನ್‌ಗರಾ ಸಂತಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ