ನೀವು ಎಷ್ಟೊಂದು ಒಳ್ಳೆಯ ಅಣ್ಣನಾಗಿದ್ದಿರಿ ?

ಗುರುವಾರ, 7 ಆಗಸ್ಟ್ 2014 (18:28 IST)
ನೀವು ವಿಶ್ವದ ಎಲ್ಲಕ್ಕಿಂತ ಒಳ್ಳೆಯ ಸಹೋದರೆ ಎಂದು ನಂಬುತ್ತಿರಾ ? ಆದರೆ ನಿಮ್ಮ ಸಹೋದರಿ ಕೂಡ ನಿಮ್ಮ ಮಾತನ್ನು ಸ್ವೀಕಾರ ಮಾಡುತ್ತಾಳಾ? ಬನ್ನಿ ರಕ್ಷಾಬಂಧನದ ಶುಭ ಸಂದರ್ಭದಲ್ಲಿ ನಿಮ್ಮ ಪವಿತ್ರ ಪ್ರೇಮವನ್ನು ಗುರುತಿಸೊಣ ? ಸಹೋದರರಿಗಾಗಿ ಈ ಪ್ರಶ್ನೆಯ ಪಟ್ಟಿ ನೀಡಲಾಗುವುದು. ನೀವು ಒಂದು ಕಾಗದ ಮತ್ತು ಪೆನ್ಸಿಲ್‌ ತೆಗೆದುಕೊಂಡು ಕುಳಿತುಕೊಳ್ಳಿ. ಈ ಪ್ರಶ್ನೆಗೆ ಪ್ರಾಮಾಣಕವಾದ ಉತ್ತರ ನೀಡಿ ಮತ್ತು ಅದನ್ನು ಕಾಗದ ಮೇಲೆ ನೋಟ್‌ ಮಾಡಿಟ್ಟುಕೊಳ್ಳಿ. ಪಟ್ಟಿಯಲ್ಲಿ ನೀಡಲಾದ ನಮ್ಮ ಅಂಕಗಳನ್ನು ಮತ್ತು ನಿಮ್ಮ ನಂಬರ್‌ಗಳನ್ನು ಸೇರಿಸಿ ಮತ್ತು ಅಂತ್ಯದಲ್ಲಿ ಅವುಗಳನ್ನು ಜೋಡಿಸಿ ನಮ್ಮ ತೀರ್ಮಾನವನ್ನು ಓದಿ, ನೀವು ಆದರ್ಶ ಸಹೋದರರೇ ಎನ್ನುವುದನ್ನು ತಿಳಿದುಕೊಳ್ಳಿ. 
 
1. ನಿಮ್ಮ ಸಹೋದರಿ ನಿಮ್ಮ ಅಲ್ಮಾರಿ, ಟೇಬಲ್‌ ಮತ್ತು ಬ್ಯಾಗ್‌‌ ಇತ್ಯಾದಿಗಳನ್ನು ವ್ಯವಸ್ಥಿವಾಗಿ ಇಟ್ಟಾಗ ಅವಳ ಕೆಲಸವನ್ನು ನೀವು ಯಾವ ದೃಷ್ಟಿಯಿಂದ ನೋಡುತ್ತಿರಿ? 
 
a) ಅವಳಿಗೆ ಮನೆಯನ್ನು ಅಲಂಕರಿಸುವ ರೂಢಿಯಿದೆ. 
b) ತಾಯಿಯಿಂದ ಹೊಗಳಿಕೆ ಬಯಸುತ್ತಾಳೆ. 
c) ನನ್ನ ಮೇಲೆ ನಿಗಾ ಇಡುವುದಾಗಿದೆ. 
 d) ಅವಳು ನನ್ನ ಕಾಳಜಿ ವಹಿಸುತ್ತಾಳೆ. 
 
2. ನಿಮ್ಮ ಚಿಕ್ಕ ತಂಗಿ ಮೊದಲ ಬಾರಿ ಕಾಲೇಜಿಗೆ ಪ್ರವೇಶ ಪಡೆಯುತ್ತಿದ್ದಾಳೆ. ಕಾಲೇಜಿನ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಅವಳು ಹೆದರುತ್ತಿದ್ದಾಳೆ. ಈಗ ನಿಮ್ಮ ಪ್ರತಿಕ್ರಿಯೆ ಏನು ? 
 
a) ನೀವು ಖುದ್ದಾಗಿ ಹೋಗಿ ಕಾಲೇಜಿನ ಔಪಚಾರಿಕತೆಯನ್ನು ಪೂರ್ಣಗೊಳಿಸುವಿರಿ. 
b) ಅವಳಿಗೆ ಚಾನೆಲ್‌ ಫಾರ್ಮ್, ಬ್ಯಾಂಕ್‌ ಡ್ರಾಫ್ಟ್‌ ಬಗ್ಗೆ ತಿಳಿಸಿ ಮನೆಯಿಂದ ಕಳುಹಿಸುವಿರಿ. 
c) ಅವಳ ಜೊತೆಗೆ ಕಾಲೇಜಿಗೆ ಹೋಗಿ ಎಲ್ಲಾ ಕೆಲಸಗಳಿಗೆ ಸಹಾಯ ಮಾಡುವಿರಿ. 
d) ಅವಳ ಕೆಲಸವನ್ನು ಅವಳೆ ಖುದ್ದಾಗಿ ಮಾಡುವ ಸಲಹೆ ನೀಡುವಿರಿ. 
 
3. ನಿಮ್ಮ ಸಹೋದರಿಯ ಟ್ಯೂಶನ್‌ ತಡ ರಾತ್ರಿ ಬಿಡುತ್ತದೆ. ಇವಳಿಗೆ ಪ್ರತಿದಿನ ಒಬ್ಬಳೆ ಟ್ಯೂಶನ್‌ಗೆ ಹೋಗಿಬರಬೇಕಾಗುತ್ತದೆ. ಈ ರೀತಿ ತಡರಾತ್ರಿಯವರೆಗೂ ಮನೆಗೆ ತಲುಪುವ ನಿಮ್ಮ ಸಹೋದರಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? 
 
a) ಅವಳಿಗೆ ಬೇರೆ ಟ್ಯೂಶನ್‌ ಕ್ಲಾ್‌‌ಗೆ ಸೇರುವಂತೆ ಸಲಹೆ ನೀಡುತ್ತಿರಾ. 
b) ಅವಳನ್ನು ಕರೆದುಕೊಂಡು ಬರಲು ನೀವೇ ಖುದ್ದಾಗಿ ಟ್ಯೂಶನ್‌ಗೆ ಹೋಗುತ್ತಿರಾ. 
c) ಅವಳಿಗೆ ಎಚ್ಚರಿಕೆಯಿಂದಿರುವಂತೆ ಹೇಳಿ ಸುಮ್ಮನಾಗುವಿರಾ 
d) ಅಪ್ಪ-ಅಮ್ಮನಿಗೆ ಹೇಳಿ ಅವಳ ಟ್ಯೂಶನ್‌ ಬದಲಾಯಿಸುವಿರಾ 

ವೆಬ್ದುನಿಯಾವನ್ನು ಓದಿ