ಕಿಡಿಗೇಡಿಗಳಿಂದ ಸಂತ್ರಸ್ತ ಯುವತಿಗೆ ಬೆದರಿಕೆ ಕರೆಗಳು

ಬುಧವಾರ, 16 ಜುಲೈ 2014 (17:10 IST)
ಬೆಂಗಳೂರಿನಲ್ಲಿ ಸ್ಕೋಡಾ ಕಾರಿನಲ್ಲಿ ಅತ್ಯಾಚಾರಕ್ಕೊಳಗಾದ  ಮೊಬೈಲ್‌ಗೆ ಕರೆ ಮಾಡಿದ ಕಿಡಿಗೇಡಿಗಳು, ಇನ್ಸ್‌ಪೆಕ್ಟರ್ ರಫೀಕ್ ಒಳ್ಳೆಯವರು. ನಿನ್ನಿಂದಾಗಿ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಧಮ್ಕಿ ಹಾಕಿದ್ದಾರೆ.  ಈ ಕುರಿತು ಅತ್ಯಾಚಾರಕ್ಕೊಳಗಾದ ಯುವತಿ ಗೆಳೆಯನ ಜೊತೆ ಪೊಲೀಸ್ ಆಯುಕ್ತ ಔರಾದ್‌ಕರ್ ಅವರನ್ನು ಭೇಟಿ ಮಾಡಿ ತನಗೆ ಬೆದರಿಕೆ ಕರೆ ಬರುತ್ತಿರುವುದಾಗಿ ದೂರು ಸಲ್ಲಿಸಿದ್ದಾಳೆ.

ಘಟನೆ ಕುರಿತು ಸಂತ್ರಸ್ತೆಸಂಪೂರ್ಣ ವಿವರಣೆಯನ್ನು ಪೊಲೀಸ್ ಆಯುಕ್ತರ ಮುಂದೆ ಅರ್ಧಗಂಟೆಗೂ ಹೆಚ್ಚು ಕಾಲ ವಿವರಣೆ ನೀಡಿದ್ದಾಳೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿಯನ್ನು ಸಲ್ಲಿಸಿದ್ದಾಳೆ.  

ಆರೋಪಿ ನಾಸಿರ್ ಹೈದರ್ ಬಗ್ಗೆ ಯುವತಿ ಸುಳಿವು ನೀಡಿದ ಬಳಿಕ ಪೊಲೀಸರು ಅವನನ್ನು ಬಂಧಿಸಿ ಅವನ ಸ್ಕೋಡಾ ಕಾರನ್ನು ವಶಪಡಿಸಿಕೊಂಡು, ಇನ್ನೂ ಐದು ಜನ ಆರೋಪಿಗಳಿಗೆ ಶೋಧ ನಡೆಸಿದ್ದರು.  ಈ ನಡುವೆ ಪುಲಿಕೇಶಿ ನಗರ ಇನ್ಸ್‌ಪೆಕ್ಟರ್ ಅಮಾನತು ಆದೇಶ ಹಿಂಪಡೆಯಲಿ ಎಂದು ಪುಲಿಕೇಶಿನಗರ ನಿವಾಸಿಗಳು ಪ್ರತಿಭಟನೆ ನಡೆಸಿದರು. ಈ ನಡುವೆ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಏತನ್ಮಧ್ಯೆ,  ಬೆಂಗಳೂರಿನಲ್ಲಿ ಪೊಲೀಸರ ಗಸ್ತು ಹೆಚ್ಚು ಮಾಡುತ್ತೇವೆ ಎಂದು ಗೃಹ ಸಚಿವ ಜಾರ್ಜ್ ಹೇಳಿಕೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ