ಸೆಕ್ಸ್ ಚಾಟಿಂಗ್‌ನಲ್ಲಿ ಸುಳ್ಳು ಹೇಳುವುದರಲ್ಲಿ ಮಹಿಳೆಯರು ನಿಸ್ಸಿಮರು

ಗುರುವಾರ, 21 ಆಗಸ್ಟ್ 2014 (19:45 IST)
ಒಂದು ವೇಳೆ ನೀವು ಮೆಸೆಜ್‌‌ಗಳಿಂದ ನಿಮ್ಮ ಸಂಗಾತಿಯೊಂದಿಗೆ ಸೆಕ್ಸ್‌‌ ಬಗ್ಗೆ ಮಾತನಾಡುತ್ತಿರೆಂದರೆ ತಿಳಿದುಕೊಳ್ಳಿ ನಿಮ್ಮ ಸಂಗಾತಿ ನಿಮ್ಮ ಜೊತೆಗೆ ಚಾಂಟಿಂಗ್‌‌ ಮಾಡುವಾಗ ಸೆಕ್ಸ್‌‌‌ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾಳೆಂದು. 
 
ಸಂಶೋಧನೆಯೊಂದರ ಪ್ರಕಾರ, ಮೆಸೆಜ್‌‌‌ನಲ್ಲಿ ಸೆಕ್ಸ್‌‌ಬಗ್ಗೆ ಮಾತನಾಡುವಾಗ ಸುಳ್ಳು ಹೇಳುವ ಅಭ್ಯಾಸ ಮಹಿಳೆಯರಲ್ಲಿ ಹೆಚ್ಚಿರುತ್ತದೆ. ಫೋನ್‌‌‌‌ನಲ್ಲಿ ಸೆಕ್ಸ್‌ ಬಗ್ಗೆ ಮಾತನಾಡುವಾಗ ಶೇ.25 ರಷ್ಟು ಪುರುಷರು ಮತ್ತು ಶೇ.45 ರಷ್ಟು ಮಹಿಳೆಯರು ಸಂಗಾತಿಗೆ ಸುಳ್ಳು ಹೇಳುತ್ತಾರೆ. 
 
" ಹೆಚ್ಚಿನ ಜನರು ಚಾಟಿಂಗ್‌‌‌‌ನಲ್ಲಿ ತಮ್ಮ ಸಂಗಾತಿಗೆ ಖುಷಿ ಪಡಿಸುವ ಸಲುವಾಗಿ ಸುಳ್ಳು ಹೇಳುತ್ತಾರೆ. ಸಂಶೋಧನೆಯಲ್ಲಿ ಸುಳ್ಳು ಹೇಳುವುದಕ್ಕೆ ಕೆಲವು ಕಾರಣಗಳನ್ನು ತಿಳಿಸಲಾಗಿದೆ. 
 
ಸೆಕ್ಸಟಿಂಗ್‌‌‌‌ನಲ್ಲಿ ಸುಳ್ಳು ಹೇಳುವ ಕಾರಣದಲ್ಲಿ, ಸಂಗಾತಿಯನ್ನು ಖುಷಿ ಪಡಿಸುವ ಮತ್ತು ಅವರ ಫ್ಯಾಂಟಸಿ ಪೂರ್ತಿಗೊಳಿಸುವುದ ಕೂಡ ಸೇರಿದೆ. ತಮ್ಮ ಸಂಗಾತಿಯನ್ನು ಒತ್ತಡದಿಂದ ಮುಕ್ತಗೊಳಿಸಲು ಸುಳ್ಳು ಹೇಳುತ್ತಾರೆಂದು ಕೆಲವರು ಹೇಳುತ್ತಾರೆ. 
 
ತಮ್ಮ ಸಂಗಾತಿಗೆ ಜೋಶ್ ತರುವುದಕ್ಕಾಗಿ ಸುಳ್ಳು ಹೇಳುತ್ತೇವೆ ಎಂದು ಕೆಲವರು ಹೇಳಿದರೆ, ತಾವು ಸುಳ್ಳು ಹೇಳುವುದರಿಂದ ತಮ್ಮ ಸಂಗಾತಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾಳೆ ಎಂದು ತಿಳಿಯಲು ಸುಳ್ಳು ಹೇಳುತ್ತಾರೆಂದು ಅಧ್ಯಯನದಲ್ಲಿ ಕೆಲವರು ತಿಳಿಸಿದ್ದಾರೆ. 
 
ಸೆಕ್ಸಟಿಂಗ್‌‌‌‌ನಲ್ಲಿ ಸುಳ್ಳು ಹೇಳುವುದರಿಂದ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದು ಕಂಪ್ಯೂಟರ್ಸ್‌‌‌ ಇನ್‌ ಹ್ಯೂಮನ್‌ ವಿಹೆವಿಯರ್‌‌‌ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ವೆಬ್ದುನಿಯಾವನ್ನು ಓದಿ