ಪುರುಷರಲ್ಲಿ ನಿಮಿರುವಿಕೆ ದೋಷಗಳು

ಭಾನುವಾರ, 30 ನವೆಂಬರ್ 2014 (14:53 IST)
ನಪುಂಸಕತೆ ಎಂದು ಕೂಡ ಹೆಸರಾದ ನಿಮಿರುವಿಕೆಯ ದೋಷ ಸಂಭೋಗಕ್ಕೆ ಅಗತ್ಯವಾದ ನಿಮಿರುವಿಕೆ ಕಾಯ್ದುಕೊಳ್ಳುವಲ್ಲಿ ವಿಫಲವಾದ ಸ್ಥಿತಿ. ನಿಮಿರುವಿಕೆ ದೋಷಕ್ಕೆ ರಕ್ತದ ಹರಿವಿಗೆ ತೊಂದರೆಯುಂಟುಮಾಡುವ ಅಪಧಮನಿ ಗಡಸಾಗುವಿಕೆ, ನರಗಳ ಅವ್ಯವಸ್ಥೆ, ಮಾನಸಿಕ ಅಂಶಗಳಾದ ಒತ್ತಡ, ಖಿನ್ನತೆ, ನಿರ್ವಹಣೆಯ ಆತಂಕ(ಲೈಂಗಿಕ ನಿರ್ವಹಣೆಯ ಸಾಮರ್ಥ್ಯದ ಬಗ್ಗೆ ಆತಂಕ) ಮತ್ತು ಜನನಾಂಗಕ್ಕೆ ಉಂಟಾದ ಗಾಯ ಕೂಡ ಕಾರಣಗಳಾಗಿವೆ.

ತೀವ್ರವಾದ ಕಾಯಿಲೆ, ಪೆರೋನೀಸ್ ಕಾಯಿಲೆ(ಜನನಾಂಗದಲ್ಲಿ ನಾರಿನ ಅಂಗಾಂಶ ರಚನೆ) ಇವುಗಳಿಂದಲೂ ನಿಮಿರುವಿಕೆ ದೋಷ ಉಂಟಾಗುತ್ತದೆ.  ಕುಂಠಿತ ಲೈಂಗಿಕ ಆಸಕ್ತಿ ಅಥವಾ ಕಾಮಾಸಕ್ತಿಯ ನಷ್ಟವು ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ಕುಂದುವುದಾಗಿದೆ. ಕುಂಠಿತ ಕಾಮಾಸಕ್ತಿಯು ದೈಹಿಕ ಮತ್ತು ಮಾನಸಿಕ ಅಂಶಗಳಿಂದ ಉಂಟಾಗುತ್ತದೆ.

ಇದು ಟೆಸ್ಟೋಸ್ಟೆರೋನ್ ಹಾರ್ಮೋನ್ ಪ್ರಮಾಣ ದೇಹದಲ್ಲಿ ಕುಂಠಿತವಾಗುವುದಕ್ಕೆ ಸಂಬಂಧಿಸಿದೆ. ಮಾನಸಿಕ ಸಮಸ್ಯೆಗಳಿಂದಲೂ ಇದು ಉಂಟಾಗಬಹುದು. ಉದಾಹರಣೆಗೆ ಆತಂಕ ಮತ್ತು ಖಿನ್ನತೆ,  ಮಧುಮೇಹ,ಅಧಿಕ ರಕ್ತದ ಒತ್ತಡ, ಖಿನ್ನತ ನಿವಾರಕ ಔಷಧಿಗಳ ಸೇವನೆಗಳಿಂದರೂ ಕುಂಠಿತ ಲೈಂಗಿಕಾಸಕ್ತಿ ಉಂಟಾಗಬಹುದು.
 
 
 ಲೈಂಗಿಕ ಸಮಸ್ಯೆಗಳನ್ನು ಗುರುತಿಸುವುದು ಹೇಗೆ?
 
ವೈದ್ಯರು  ಲಕ್ಷಣಗಳ ಆಮೂಲಾಗ್ರ ಇತಿಹಾಸದೊಂದಿಗೆ ಆರಂಭಿಸುತ್ತಾರೆ. ಲೈಂಗಿಕ ನಿಷ್ಕ್ರಿಯತೆಗೆ ಕೊಡುಗೆ ನೀಡುವ ವೈದ್ಯಕೀಯ ಸಮಸ್ಯೆಗಳಿಗೆ ಕೂಡ ವೈದ್ಯರು ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ. ವೈದ್ಯರು ನಿಮ್ಮನ್ನು ಇತರೆ ವೈದ್ಯರಿಗೆ ಕೂಡ ರೆಫರ್ ಮಾಡಬಹುದು. ಉದಾಹರಣೆಗೆ  ಮೂತ್ರಶಾಸ್ತ್ರ ತಜ್ಞ, ಅಂತಃಸ್ರಾವಶಾಸ್ತ್ರಜ್ಞ ಮತ್ತು ನರರೋಗ ಶಾಸ್ತ್ರಜ್ಞ, ಲೈಂಗಿಕ ಚಿಕಿತ್ಸಕರು ಮತ್ತಿತರ ಸಲಹೆಗಾರರ ಬಳಿ ರೆಫರ್ ಮಾಡಬಹುದು.
 
ಲೈಂಗಿಕ ಸಮಸ್ಯೆಗಳ ಕಾರಣ ನಿರ್ಧಾರಕ್ಕೆ ಅನೇಕ ಪರೀಕ್ಷೆಗಳನ್ನು ಬಳಸಬಹುದು. ಅವುಗಳ ಪೈಕಿ
 ರಕ್ತ ಪರೀಕ್ಷೆ: ಹಾರ್ಮೋನ್ ಮಟ್ಟವನ್ನು ನಿರ್ಧರಿಸಲು ಮತ್ತು ವೈದ್ಯಕೀಯ ಸಮಸ್ಯೆಗಳನ್ನು ಗುರುತಿಸಲು ಈ ಪರೀಕ್ಷೆ ನಡೆಸಲಾಗುತ್ತದೆ.
ರಕ್ತನಾಳಗಳ ಅಂದಾಜು: ಜನನಾಂಗಕ್ಕೆ ಹರಿಸುವ ರಕ್ತದ ಮಟ್ಟವನ್ನು ಅಳೆಯುವುದು ಕೂಡ ಇದರಲ್ಲಿ ಸೇರಿದೆ. ಜನನಾಂಗಕ್ಕೆ ರಕ್ತ ಪೂರೈಸುವ ರಕ್ತನಾಳದಲ್ಲಿ ತಡೆ ಕೂಡ ನಿಮಿರುವಿಕೆ ದೋಷಕ್ಕೆ ಕಾರಣವಾಗಬಹುದು.
 
ಸಂವೇದನಾವಾಹಕ ಪರೀಕ್ಷೆ: ಮಧುಮೇಹದಿಂದ ಉಂಟಾಗುವ ನರಗಳ ಹಾನಿಯ ಪರಿಣಾಮವನ್ನು ಅಳೆಯುವುದಕ್ಕೆ ಕೂಡ ಇದು ಉಪಯುಕ್ತವಾಗಿದೆ.
ನಿದ್ರೆಯಲ್ಲಿ ನಿಮಿರುವಿಕೆ ಮತ್ತು ಗಡಸಾಗುವಿಕೆ ಪರೀಕ್ಷೆ: ಈ ಪರೀಕ್ಷೆಯನ್ನು ನಿದ್ರೆಯಲ್ಲಿ ಉಂಟಾಗುವ ನಿಮಿರುವಿಕೆಗೆ ಬಳಸಲಾಗುತ್ತದೆ.

ಈ ಪರೀಕ್ಷೆಯಿಂದ ಪುರುಷನ ನಿಮಿರುವಿಕೆ ಸಮಸ್ಯೆ ದೈಹಿಕವೋ ಅಥವಾ ಮಾನಸಿಕವೋ ಎನ್ನುವುದು ತಿಳಿದುಬರುತ್ತದೆ.ನಿಮಿರುವಿಕೆ ದೋಷಕ್ಕೆ ಕೆಳಗಿನ ದೈಹಿಕ ಅಥವಾ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಬಹುದು. ಚಿಕಿತ್ಸೆ ಕಾರ್ಯತಂತ್ರಗಳಲ್ಲಿ ಕೆಳಗಿನವು ಸೇರಿದೆ.
 
ಮುಂದಿನ ಪುಟ ನೋಡಿ

 ವೈದ್ಯಕೀಯ ಚಿಕಿತ್ಸೆ: ಪುರುಷನ ಲೈಂಗಿಕ ನಿಷ್ಕ್ರಿಯತೆಗೆ ಕೊಡುಗೆ ನೀಡುವ ದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ಔಷಧಿ: ಔಷಧಿಗಳು ಜನನಾಂಗಕ್ಕೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಲೈಂಗಿಕ ನಿರ್ವಹಣೆ ಸುಧಾರಣೆಗೆ ನೆರವಾಗುತ್ತದೆ.  ಜನನಾಂಗ ಚುಚ್ಚುಮದ್ದು ಮತ್ತು ಮೂತ್ರನಾಳದೊಳಕ್ಕೆ ತೂರಿಸುವ ಮಾತ್ರೆಯನ್ನು ಬಳಸಬಹುದು.
 
ಹಾರ್ಮೋನ್: ಟೆಸ್ಟೋಸ್ಟೆರಾನ್ ಉತ್ಪಾದನೆ ದೇಹದಲ್ಲಿ ಕಡಿಮೆ ಪ್ರಮಾಣದಲ್ಲಿದ್ದರೆ ಹಾರ್ಮೋನ್ ಸರಬರಾಜಿನ ಮೂಲಕ ಅನುಕೂಲ ಪಡೆಯಬಹುದು(ಟೆಸ್ಟೋಸ್ಟೆರಾನ್ ಬದಲಾವಣೆ ಚಿಕಿತ್ಸೆ)
 
 ಮಾನಸಿಕ ಚಿಕಿತ್ಸೆ: ತರಬೇತಾದ ಸಲಹೆಗಾರರ ಚಿಕಿತ್ಸೆಯಿಂದ ವ್ಯಕ್ತಿ ಆತಂಕ, ಭಯ ಅಥವಾ ತಪ್ಪಿತಸ್ಥ ಮನೋಭಾವ ನಿವಾರಿಸಿಕೊಂಡು ಲೈಂಗಿಕ ನಿರ್ವಹಣೆಯನ್ನು ಸರಿಪಡಿಸಬಹುದು.
 
 ಯಾಂತ್ರಿಕ ನೆರವು: ನಿರ್ವಾತ ಉಪಕರಣಗಳು ಮತ್ತು ಜನನಾಂಗದ ಉಪಕರಣದ ಮೂಲಕ ನಿಮಿರುವಿಕೆ ದೋಷವನ್ನು ನಿವಾರಿಸಬಹುದು.ಶಿಕ್ಷಣ ಮತ್ತು ಸಂಪರ್ಕ: ಲೈಂಗಿಕತೆ ಮತ್ತು ಲೈಂಗಿಕ ನಡುವಳಿಕೆ ಮತ್ತು ಪ್ರತಿಕ್ರಿಯೆಗಳ ಬಗ್ಗೆ ಶಿಕ್ಷಣದಿಂದ ಲೈಂಗಿಕ ನಿರ್ವಹಣೆ ಬಗ್ಗೆ ಇರುವ ಆತಂಕ ನಿವಾರಿಸಿಕೊಳ್ಳಬಹುದು.

ಆರೋಗ್ಯಕರ ಲೈಂಗಿಕ ಜೀವನಕ್ಕೆ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಅಗತ್ಯಗಳು ಮತ್ತು ಕಾಳಜಿಗಳ ಬಗ್ಗೆ ಮುಕ್ತ ಮಾತುಕತೆ ಅನೇಕ ಅಡೆತಡೆಗಳ ನಿವಾರಣೆಗೆ ನೆರವಾಗುತ್ತದೆ.

ವೆಬ್ದುನಿಯಾವನ್ನು ಓದಿ